Breaking News

ಅಂತರಾಷ್ಟ್ರೀಯ

ಮಲಗಿದ್ದವರ ಮೇಲೆ ಹರಿದ ಟ್ರಕ್- ಐವರು ದುರ್ಮರಣ

ಲಕ್ನೋ: ಪಾದಚಾರಿ ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು 2 ಗಂಟೆಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಲು …

Read More »

ಸತತ ಮಳೆ: ನೂರು ಅಡಿ ತಲುಪಿದ KRS ನೀರಿನ ಮಟ್ಟ..!

ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟನೂರು ಅಡಿ ತಲುಪಿದೆ. ಕಳೆದೊಂದು ತಿಂಗಳಲ್ಲಿ ಜಲಾಶಯಕ್ಕೆ 8 ಅಡಿಗಳಷ್ಟುನೀರು ಹರಿದುಬಂದಿದೆ. ಅಣೆಕಟ್ಟು ನೂರರ ಗಡಿ ತಲುಪಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ಬಿರುಸುಗೊಂಡಿದೆ. ಮುಂಗಾರು ಹಂಗಾಮಿಗೆ ನೀರು ಸಿಗುವ ಆಶಾಭಾವನೆಯೂ ರೈತ ಸಮುದಾಯದಲ್ಲಿ ವ್ಯಕ್ತವಾಗಿದೆ. ಜೂ.7ರಂದು ಅಣೆಕಟ್ಟೆಯ ನೀರಿನ ಮಟ್ಟ92.20 ಅಡಿ ದಾಖಲಾಗಿತ್ತು. ಅಂದು ಜಲಾಶಯಕ್ಕೆ 837 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 415 ಕ್ಯುಸೆಕ್‌ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು. …

Read More »

ಕೊರೊನಾ ಹಬ್ಬಿಸಿಲು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆಯೋಜಿಸಿದ್ದಾರೆ……….?

ವಾಷಿಂಗ್ಟನ್‌: ಆತಂಕ ಮೂಡಿಸಿರುವ ಕೊರೊನಾ ತಡೆಗಟ್ಟಲು ರಾಷ್ಟ್ರಗಳು ಲಾಕ್‌ಡೌನ್‌ ಜಾರಿ ಮಾಡಿ ಸಾಮಾಜಿಕ ಅಂತ ಕಾಯ್ದುಕೊಳ್ಳಿ, ಮಾಸ್ಕ್‌ ಧರಿಸಿ ಎಂದು ಸೂಚನೆ ನೀಡುತ್ತಿವೆ. ಆದರೆ ಅಮೆರಿಕದಲ್ಲಿ ಕೊರೊನಾ ಹಬ್ಬಿಸಿಲು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ʼಯಾರಿಗೆ ಮೊದಲು ಕೊರೊನಾ ಬರುತ್ತದೆ?ʼ ಎಂಬ ಸ್ಪರ್ಧೆಯ ಪಾರ್ಟಿಯನ್ನು ಅಮೆರಿಕ ಅಲಬಾಮಾದ ಟಸ್ಕಲೂಸಾ ಎಂಬಲ್ಲಿ ಆಯೋಜಿಸಲಾಗಿತ್ತು. ಈ ಹುಚ್ಚಾಟದ ಸ್ಪರ್ಧೆಗೆ ಕೊರೊನಾ ಪಾಸಿಟಿವ್‌ ಬಂದವರನ್ನು ಉದ್ದೇಶಪೂರ್ವಕವಾಗಿ ಕರೆಸಲಾಗಿತ್ತು. ಕೊರೊನಾ ಬಾರದವರನ್ನು ಆಹ್ವಾನಿಸಲಾಗಿತ್ತು. ಕೊರೊನಾ ಬಾರದವರು ಪಾಸಿಟಿವ್‌ …

Read More »

59 ಅಪ್ಲಿಕೇಶನ್‌ ನಿಷೇಧಿಸಿ ಡಿಜಿಟಲ್‌ ಸ್ಟ್ರೈಕ್‌ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ.

ನವದೆಹಲಿ: 59 ಅಪ್ಲಿಕೇಶನ್‌ ನಿಷೇಧಿಸಿ ಡಿಜಿಟಲ್‌ ಸ್ಟ್ರೈಕ್‌ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ. ಎರಡು ದೇಶಗಳ ವ್ಯಾಪಾರ ವಿಚಾರದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಹೆಚ್ಚಾಗಿ ಚೀನಾದಿಂದ ಆಮದು ಜಾಸ್ತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗ ಭಾರತ ಚೀನಾದಿಂದ ಆಮದು ಆಗುವ ವಸ್ತುಗಳ ಮೇಲೆ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಏರಿಸಲು ಸಿದ್ಧತೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಭಾರತದಲ್ಲಿ ತಯಾರಾಗುವ ವಸ್ತುಗಳು ಮತ್ತು …

Read More »

ಕಿಲ್ಲರ್ ಕೊರೋನಾ ಹಾವಳಿಗೆ ವಿಶ್ವ ಹೈರಾಣ : 1.18 ಕೋಟಿ ಸೋಂಕಿತರು, ಮೃತರ ಸಂಖ್ಯೆ 5.41 ಲಕ್ಷ..!

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.7- ಮಹಾಮಾರಿ ಕಿಲ್ಲರ್ ಕೊರೊನಾ ಕಬಂಧ ಬಾಹುಗಳಲ್ಲಿ ವಿಶ್ವವೇ ಹೈರಾಣಾಗಿದ್ದು, ರೋಗಿಗಳು ಮತ್ತು ಮೃತರÀ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ. ಜಗತ್ತಿನಾದ್ಯಂತ ಒಟ್ಟು ಸಾವಿನ ಸಂಖ್ಯೆ 5.41 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 1.18 ಕೋಟಿ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಸುಮಾರು 67.42 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ನಿನ್ನೆ ಮಧ್ಯರಾತ್ರಿವರೆಗೆ 5,40,848 ಮಂದಿ ಸಾವಿಗೀಡಾಗಿದ್ದು, 1,17,48,938 ಸೋಂಕು ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ …

Read More »

ಯೋಗದಲ್ಲಿ ವಿಶ್ವದಾಖಲೆ ಬರೆದ 6ರ ಬಾಲೆ …..

ಬೆಳೆಯುವ ಪೈರು ಮೊಳಕೆ ಯಲ್ಲೇ ಎಂಬಂತೆ ಮಕ್ಕಳ ಪ್ರತಿಭೆ ಕಿರುವಯಸ್ಸಿನಲ್ಲೇ ಪರಿಚಿತ ವಾಗುತ್ತದೆ ಅದಕ್ಕೆ ನಿದರ್ಶನ ಬೆಂಗಳೂರಿನ ಆರು ವರ್ಷದ ಬಾಲೆ ನಿಖಿತ. ಇಷ್ಟು ಸಣ್ಣ ವಯಸ್ಸಿನಲ್ಲೇ ಯೋಗದಲ್ಲಿ ನೋಬೆಲ್ ವರ್ಡ್‍ರೆಕಾರ್ಡ್ ಮಾಡುವ ಮೂಲಕ ತನ್ನಅಸಾಧಾರಣ ಪ್ರತಿಭೆ ಮೆರೆದ ಪೋರಿಗೆ ಯೋಗವೆಂದರೆ ಅಚ್ಚುಮೆಚ್ಚು. ಈ ಸಣ್ಣ ವಯಸ್ಸಿನಲ್ಲಿ ಅತ್ಯಂತ ಕ್ಲಿಷ್ಟಕರವಾದ ಆಸನಗಳಾದ ಗಂಡಬೇರುಂಡಾಸನ, ಪೂರ್ಣಶಲ ಭಾಸನ, ಮಯೂರಾಸನ, ದೀಪಾಸನ,ಚಕ್ರಬಂಧಾಸನದಂತಹ ಹಲವು ಆಸನ ಕ್ರಿಯೆಗಳನ್ನು ಸಲೀಸಾಗಿ ಮಾಡುವ ನಿಖಿತಾ ಈ ಸಾಧನೆಯಿಂದ …

Read More »

ನಾಯಿ ಮಾಂಸ ಮಾರಾಟ ನಿಷೇಧಕ್ಕೆ ಭಕ್ಷಕರಿಂದ ಆಕ್ರೋಶ..!

ನವದೆಹಲಿ,ಜು.7- ನಾಗಾಲ್ಯಾಂಡ್‍ನಲ್ಲಿ ನಾಯಿ ಮತ್ತು ಅದರ ಮಾಂಸ ಮಾರಾಟವನ್ನು ನಿಷೇಧಿಸಿರುವುದರ ಬಗ್ಗೆ ಕುಪಿತಗೊಂಡಿರುವ ಸ್ಥಳೀಯರು, ಏಕಾಏಕಿ ನಾಯಿ ಮಾಂಸದೂಟವನ್ನು ನಿಷೇಧಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಅಲ್ಲದೆ ದೇಶದ ಹಲವೆಡೆ ನಾಯಿ ಮಾಂಸವನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ. ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ. ಇಡೀ ಈಶಾನ್ಯ ಪ್ರದೇಶಗಳಲ್ಲಿ ನಾಯಿಗಳ ಕಳ್ಳಸಾಗಣೆಯ ದಂಧೆಯೇ ನಡೆಯುತ್ತಿದೆ. ನಾಗಾಲ್ಯಾಂಡ್ ಮತ್ತು …

Read More »

ಬೆಳಗಾವಿಯಲ್ಲಿ ಕೊರೊನಾತಂಕ ಹೆಚ್ಚುತ್ತಿದೆ. ಡೆಡ್ಲಿ ಕೊರೊನಾಗೆ..

  ಗೋಕಾಕ :ವೃದ್ದೆಯೋರ್ವಳು ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುತ್ತಾರೆ. ಕೊರೋನಾ ಶಂಕಿತೆ ಎಂದು ಕೊವೀಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರುವದು ಬಾಕಿ ಇದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ಅವರು ತಿಳಿಸಿದ್ದಾರೆ. ಮಂಗಳವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದ ವೃದ್ದೆಯು ಗೋಕಾಕ ತಾಲೂಕಿನ ಕೊಣ್ಣೂರ್ ಗ್ರಾಮದವಳಾಗಿದ್ದು, ಮಹಿಳೆಗೆ ತೀವ್ರ ಮದುಮೇಹದ ಸಮಸ್ಯೆ …

Read More »

ಸಾಹುಕಾರ್ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಎಚ್ಚರಿಕೆ ಸಂದೇಶ ನೀಡಿದ್ರು

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ಅವರು ಹಂಚಿರುವ ಕುಕ್ಕರ್ ಹಿಂದಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡುನಿಂದ ಅದು ಅಕೀ ದುಡ್ಡಲ್ಲ,ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಾಗಿದೆ,ಈಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಅವರು ದುಡ್ಡು ಹಂಚುತ್ತಿರುವದು ನನ್ನ ಗಮನಕ್ಕೆ ಬಂದಿದೆ ,ಅವರು …

Read More »

ಗಾಲ್ವನ್ ಸಂಘರ್ಷದಲ್ಲಿ 100 ಚೀನಿ ಸೈನಿಕರ ಸಾವು..! ಪಿಎಎ ಮಾಜಿ ಸೇನಾಧಿಕಾರಿಯಿಂದ ಸತ್ಯ ಬಹಿರಂಗ

ಬೀಜಿಂಗ್/ನವದೆಹಲಿ, ಜು.7- ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತದ ಯೋಧರ ದಾಳಿಗೆ ನೂರಕ್ಕೂ ಹೆಚ್ಚು ಚೀನಿ ಸೈನಿಕರು ಹತರಾಗಿದ್ದಾರೆ ಎಂಬ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ. ಲಡಾಖ್-ಲಡಾಯಿಯಲ್ಲಿ ಚೀನಾದ 150ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆಂದು ಕಮ್ಯುನಿಸ್ಟ್ ದೇಶದ ರಾಜಕಾರಣಿಗಳು ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಚೀನಾದ ನಿವೃತ್ತ ಉನ್ನತ ಸೇನಾಧಿಕಾರಿ ಜಿಯಾನ್‍ಲಿ ಯಾಂಗ್ ಸಹ ಇದೇ ಮಾತನ್ನು ಖಚಿತಪಡಿಸಿದ್ದಾರೆ. …

Read More »