Breaking News

ಅಂತರಾಷ್ಟ್ರೀಯ

ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್

ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ (BandeMutt Basavalinga Swamji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಯಾಗಿರುವ ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್ ನೀಡಲಾಗಿದೆ.   ಡೆತ್‍ನೋಟ್‍ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ಆಗಿದ್ದರಿಂದ ಮಾಗಡಿ ಪೋಲಿಸರು (Magadi Police) ನೋಟಿಸ್ ನೀಡಿದ್ದಾರೆ. ಸಚ್ಚಿದಾನಂದ ಮೂರ್ತಿಯಿಂದಲೂ ಅಪಪ್ರಚಾರ ಎಂದು ಬಸವಲಿಂಗ ಶ್ರೀಗಳು ಬರೆದಿದ್ದರು. ಹೆಸರು ಪ್ರಸ್ತಾಪ ಹಿನ್ನಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ …

Read More »

ನೂರು ಕ್ಷೇತ್ರಗಳಿಗೆ ಜೆಡಿಎಸ್‌ ಇಂದು ಅಭ್ಯರ್ಥಿಗಳ ಘೋಷಣೆ ?

ಗಡಿ ಜಿಲ್ಲೆಯ ಕುರುಡು ಮಲೆಯ ಗಣಪತಿಗೆ ಮಂಗಳವಾರ (ನ.1) ಬೆಳಿಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿ ಜೆಡಿಎಸ್‌ನ ಮಹತ್ವಾಕಾಂಕ್ಷೆಯ ‘ಪಂಚರತ್ನ’ ರಥಯಾತ್ರೆ ಹಾಗೂ ಚುನಾ ವಣಾ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಅಧಿಕೃತ ಚಾಲನೆ ನೀಡಲಿದ್ದಾರೆ.     ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನವೇ ಪಕ್ಷದ 100 ಅಭ್ಯರ್ಥಿಗಳ ಪಟ್ಟಿಯನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.   ಮಧ್ಯಾಹ್ನ 2.30ಕ್ಕೆ ಮುಳಬಾಗಿಲು ನಗರದ …

Read More »

S.C.ಗೆ ಶೇ 17, S.T ಶೇ 7 ಮೀಸಲಾತಿ: ಇಂದಿನಿಂದ ಜಾರಿ

ಕ್ಷಣ ಮತ್ತು ಉದ್ಯೋಗ ದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ)ಶೇ 17, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶೇ 7 ಮೀಸಲಾತಿಯನ್ನು ರಾಜ್ಯೋತ್ಸವ ದಿನವಾದ ಮಂಗಳವಾರದಿಂದಲೇ (ನ.1) ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿ ಮಾಡಿ ಸೋಮವಾರ ಅಧಿಸೂಚನೆ ಹೊರಡಿಸಿದೆ.     ಆದರೆ, ಹೆಚ್ಚಳಗೊಳಿಸಿದ ಮೀಸ ಲಾತಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.‌ ಹೀಗಾಗಿ, ಅಧಿಸೂಚನೆ ಜಾರಿಗೊಳಿಸುವ ಬಗ್ಗೆ ಗೊಂದಲವಿದೆ ಎಂದು ಹೆಸರು ಬಹಿರಂಗ ಪಡಿಸಲು ಬಯಸದ …

Read More »

ಹಂಪಿಯ ಸ್ಮಾರಕಗಳಧ್ವನಿ-ಬೆಳಕಿನಲ್ಲಿ ಮಿಂದೇಳಲಿವೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು ಮಂಗಳವಾರದಿಂದ (ನ.1) ಧ್ವನಿ-ಬೆಳಕಿನಲ್ಲಿ ಮಿಂದೇಳಲಿವೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಹಂಪಿ ಬೈ ನೈಟ್‌ಗೆ ಪುನಃ ಚಾಲನೆ ಕೊಡಲಾಗುತ್ತಿದೆ. ಇದಕ್ಕಾಗಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.   ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಹಂಪಿ ಬೈ ನೈಟ್‌ಗೆ ಪುನಃ ಚಾಲನೆ ಕೊಡಲಾಗುತ್ತಿದೆ. ಇದಕ್ಕಾಗಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಎಲ್ಲ ರೀತಿಯ …

Read More »

ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರಗಳ ಮಧ್ಯೆಯೇ, ನಾಡಿನ ಜನರ ಮನಗೆದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ, ಪುನೀತ್‌ ಅವರನ್ನು ಕಳೆದುಕೊಂಡು ಆಗಸವೇ ಅಳುತ್ತಿದೆ ಯೇನೋ ಎಂಬಂತೆ ಭೋರ್ಗರೆದು ಸುರಿಯುತ್ತಿದ್ದ ವರ್ಷಧಾರೆಯ ನಡುವೆಯೇ ಛತ್ರಿಯ ಆಸರೆಯಲ್ಲಿ ಸಮಾರಂಭ ನಡೆಯಿತು. ತಂದೆ ಡಾ. ರಾಜ್‌ಕುಮಾರ್‌ ಅವರಿಗೆ 30 ವರ್ಷಗಳ ಹಿಂದೆ …

Read More »

ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗದ ಯಡಿಯೂರಪ್ಪ ವಿರುದ್ಧ ಗುಡುಗಿದ ಯತ್ನಾಳ್‌..!

ವಿಜಯಪುರ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ನೋವಿದೆ. ಅದನ್ನ ಪಕ್ಷದ ಹಿರಿಯರು ಸರಿಪಡಿಸುತ್ತಾರೆ. ಒಂದು ಕಾಲದಲ್ಲಿ ರೆಡ್ಡಿ ಅವರಿಂದ ಬಿಜೆಪಿಗೆ ಅನಕೂಲಮಾಡಿಕೊಂಡು ಸಿಎಂ ಆಗಿದ್ದಾರೆ. ಯಾರು ರೆಡ್ಡಿ ಅವರ ಅನಕೂಲದಿಂದ ಸಿಎಂ ಆಗಿದ್ದಾರೋ ಅವರು ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗಬೇಕಿದೆ ಅಂತ ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ. ವಿಜಯಪುರ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ ಹಾಗೂ …

Read More »

ಕಾನೂನು ನಿಯಮದಂತೆ ಟೋಲ್‌ ತೆರವು: ನಳಿನ್‌ ಕುಮಾರ್‌ ಕಟೀಲು

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದ್ದು, ನಮ್ಮದೇನು ಅಭ್ಯಂತರವಿಲ್ಲ. ಕಾನೂನು ನಿಯಮದಡಿ ನಾವು ಟೋಲ್‌ ತೆರವು ಮಾಡುತ್ತೇವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರ ಆಡಳಿತದಲ್ಲಿದ್ದಾಗ ಟೋಲ್‌ಗೇಟ್‌ ತೆರವು ಮಾಡದವರು ಈಗ ಹೋರಾಟ ಮಾಡುತ್ತಿರುವುದು ರಾಜಕೀಯ ನಾಟಕ. ಆಸ್ಕರ್‌ ಫೆರ್ನಾಂಡಿಸ್‌ ಕೇಂದ್ರ ಸಚಿವರಾಗಿದ್ದ ವೇಳೆ ಅವರು ಏಕೆ ಮನವಿ ನೀಡಲಿಲ್ಲ ಎಂದು ಪ್ರಶ್ನಿಸಿದರು.   ತೂಗು ಸೇತುವೆಗಳ ಪರಿಶೀಲನೆ …

Read More »

ನನ್ನನ್ನು ಮುಗಿಸಲು ಮುಧೋಳ-ಬೆಂಗಳೂರಿಂದ ಗ್ಯಾಂಗ್​ ಬಂದಿತ್ತು: ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ರಾಜ್ಯ ರಾಜಕಾರಣಕ್ಕೆ ಸಂದೇಶ ರವಾನಿಸಿದೆ. ಆದರೆ, ಈ ಚುನಾವಣೆಯಲ್ಲಿ ನನ್ನನ್ನು ಹಣಿಯಲು ಕಳ್ಳರ ಗ್ಯಾಂಗ್ ಮನೆಯಲ್ಲಿಯೇ ಕುಳಿತು ತಂತ್ರ ಮಾಡಿದೆ. ಮಾತ್ರವಲ್ಲ, ಮುಧೋಳ ಮತ್ತು ಬೆಂಗಳೂರಿನಿಂದಲೂ ಬಂದಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಾಂಬ್ ಸಿಡಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್​, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ …

Read More »

ಟಿಕೆಟ್ ತಪಾಸಣಾ ಅಧಿಕಾರಿ ಬಂದ ಕೆಲವೇ ಕ್ಷಣಗಳಲ್ಲಿ ಕಂಡಕ್ಟರ್​ ಹೃದಯಾಘಾತದಿಂದ ಸಾವು

ಹುಬ್ಬಳ್ಳಿಯ ಬಂಡಿವಾಡ ಅಗಸಿಯಿಂದ ಗಾಮನಗಟ್ಟಿಗೆ ಹೊರಟಿದ್ದ ಬಸ್​ನಲ್ಲಿ ಹೃದಯಾಘಾತದಿಂದ ಕಂಡಕ್ಟರ್​ ಸಾವಿಗೀಡಾಗಿರುವ ಘಟನೆ ನಡೆದಿದೆ. ಮಹೇಶ್​ ಹೂಗಾರ ಎಂಬ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾದವರು. ಹುಬ್ಬಳ್ಳಿಯ ಬಂಡಿವಾಡ ಅಗಸಿಯಿಂದ ಗಾಮನಗಟ್ಟಿಗೆ ಬಸ್ ಹೊರಟಿತ್ತು.‌ ತಪಾಸಣಾ ಅಧಿಕಾರಿ ವಿದ್ಯಾನಗರದ ಬಳಿ ಬಸ್ ನಿಲ್ಲಿಸಿ ಟಿಕೆಟ್ ಬುಕ್ ಪಡೆಯುತ್ತಿದ್ದ ಹಾಗೆ ಕಂಡಕ್ಟರ್ ಮಹೇಶ್​ ಹೂಗಾರ ಎದೆ ನೋವಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ತಪಾಸಣಾ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಚಾಲಕ ಹರಸಾಹಸ ಮಾಡಿ ಕಿಮ್ಸ್​ಗೆ …

Read More »

ವೇದಾವತಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗಿದ ಸಚಿವ ಶ್ರೀರಾಮುಲು

ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕಾರ್ಯ ತ್ವರಿತವಾಗಿ ನಡೆಯಬೇಕೆಂದು ನಿನ್ನೆ ರಾತ್ರಿ ಸಚಿವ ಶ್ರೀರಾಮುಲು ನದಿ ಪಕ್ಕದಲ್ಲೇ ವಾಸ್ತವ್ಯ ಹೂಡಿದರು. ಬಳ್ಳಾರಿ: ತಾಲೂಕಿನ ಬಿ ಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲು ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕೆಲಸ ನಡೆಯುತ್ತಿದೆ. ಈ ಕಾಮಗಾರಿಗೆ ವೇಗ ಸಿಗಲೆಂದು ಮಂಗಳವಾರ ರಾತ್ರಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗುವ ಮೂಲಕ ಸಚಿವ ಶ್ರೀರಾಮುಲು ಗಮನ …

Read More »