ನೇಸರಗಿ(: ಸಮೀಪದ ಕೊಳದೂರ ಹಳ್ಳದಲ್ಲಿ ಬುಧವಾರ ತೇಲಿಹೋಗಿದ್ದ ಯುವಕನ ಮೃತದೇಹ ಭಾನುವಾರ ಪತ್ತೆಯಾಗಿದೆ. ಬೆಳಗಾವಿ ತಾಲ್ಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಯಲ್ಲಪ್ಪ ಬೋರನ್ನವರ(34) ಮೃತರು. ಸತತ ಮಳೆಯಿಂದಾಗಿ ಬುಧವಾರ ಈ ಹಳ್ಳ ಉಕ್ಕಿ ಹರಿಯುತ್ತಿತ್ತು. ಆದರೆ, ನೀರಿನ ರಭಸವನ್ನೂ ಲೆಕ್ಕಸದೆ ಯಲ್ಲಪ್ಪ ದಾಟುತ್ತಿದ್ದಾಗ, ಬೈಕ್ ಸಮೇತವಾಗಿ ತೇಲಿಹೋಗಿದ್ದರು. ಅವರ ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ನೇಸರಗಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಗ್ರಾಮದ ಜೋಡಗುಡಿ ದೇವಸ್ಥಾನಕ್ಕೆ ಸಂಪರ್ಕ …
Read More »ಕಾಗವಾಡ ಪಟ್ಟಣದ ಐಸಿಐಸಿಐ ಬ್ಯಾಂಕಿನಿಂದ ಕೃಷ್ಣ ನದಿಯವರೆಗೆ ಹೋಗುವ ರಸ್ತೆ ಹದಗೆಟ್ಟಿದ್ದರಿಂದ ತಹಶೀಲ್ದಾರರನ್ನು ಸ್ಥಳಕ್ಕೆ ಕರೆದು ಒಯದ ರೈತರು.
ಕಾಗವಾಡ ಪಟ್ಟಣದ ಐಸಿಐಸಿಐ ಬ್ಯಾಂಕಿನಿಂದ ಕೃಷ್ಣ ನದಿಯವರೆಗೆ ಹೋಗುವ ರಸ್ತೆ ಹದಗೆಟ್ಟಿದ್ದರಿಂದ ತಹಶೀಲ್ದಾರರನ್ನು ಸ್ಥಳಕ್ಕೆ ಕರೆದು ಒಯದ ರೈತರು. ನಿರಂತರವಾಗಿ ಸುರಿದ ಮಳೆಯಿಂದ ಆನೇಕ ರಸ್ತೆಗಳು ಹದಗೆಟ್ಟು ಹೋಗಿವೆ ಆದರೊಂದಿಗೆ ಕಾಗವಾಡ ಪಟ್ಟಣದ ಐಸಿಐಸಿಐ ಬ್ಯಾಂಕಿನಿಂದ ಹಿಡಿದು ಕಲಕೇರಿ ಕೆರಿ ಮುಖಾಂತರ ಕೃμÁ್ಣ ನದಿಯವರೆಗೆ ಸಂಪರ್ಕಿಸುವ ರಸ್ತೆ ಹದಿಗೆಟ್ಟು ಹೋಗಿದ್ದು, ಅನೇಕ ರೈತರಿಗೆ ಸಂಚಾರಿಸಲು ಸಾಧ್ಯವಾಗದೇ ಇದ್ದಿದ್ದರಿಂದ ರೈತರು ಒಂದುಗೂಡಿ ಕಾಗವಾಡ ತಹಸಿಲ್ದಾರ್ ರಾಜೇಶ್ ಬುರ್ಲಿ ಹಾಗೂ ಪಟ್ಟಣ ಪಂಚಾಯಿತಿಯ …
Read More »ಮುಡಾ ಕಚೇರಿಯಲ್ಲಿ ED ದಾಳಿ ಅಂತ್ಯ: ಸತತ 29 ಗಂಟೆಗಳ ಕಾಲ ಶೋಧ
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿನ ದಾಳಿ ಮುಕ್ತಾಯವಾಗಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮುಡಾ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸತತ 29 ಗಂಟೆಗಳ ಕಾಲ ಶೋಧ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದು, ದಾಳಿ ಅಂತ್ಯಗೊಳಿಸಿದ್ದಾರೆ. ಅ.18ರಂದು ಮೊದಲ ದಿನ 12 ಗಂಟೆಗಳ ಕಾಲ ಹಾಗೂ ಅ.19ರಂದು ಎರಡನೇ ದಿನ 17 ಗಂಟೆಗಳ ಕಾಲ ಶೋಧ ನಡೆಸಿದ …
Read More »ರಾಜ್ಯದಲ್ಲಿ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : `ಆಸ್ತಿ ನೋಂದಣಿ ಮಸೂದೆ’ಗೆ ರಾಷ್ಟ್ರಪತಿ ಅಂಕಿತ!
ಬೆಂಗಳೂರು: ಉಪ-ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಇನ್ಮುಂದೆ ಮನೆಯಲ್ಲಿ ಕುಳಿತು ಆಸ್ತಿ ನೋಂದಣಿ ಮಾಡಬಹುದು. ಆಸ್ತಿ ನೋಂದಣಿ ಮಸೂದೆಗೆ ವಿಧಾನಮಂಡಲವು ಇದೇ ಫೆಬ್ರುವರಿಯಲ್ಲಿ ಅನುಮೋದನೆ ನೀಡಿತ್ತು. ಅದನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ಮಸೂದೆಯನ್ನು ಸರ್ಕಾರಕ್ಕೆ ಮರಳಿಸಿದ್ದರು. ಸ್ಪಷ್ಟನೆ ದೊರೆತ …
Read More »ಕಿಚ್ಚನಿಗೆ ಮಾತೃ ವಿಯೋಗ
ಬೆಂಗಳೂರು: ನಟ, ನಿರೂಪಕ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಸುನೀಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ (ಅ.20) ನಿಧನರಾಗಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ಸಮಯದಿಂದ ಸರೋಜಾ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ …
Read More »ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿರುವ ಕರು ಜನನ
ವಿಜಯಪುರ: ವಿಚಿತ್ರವಾದ ಆಕಳು ಕರುವೊಂದು ಜನಿಸಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ. ಈ ಕರುವಿಗೆ ಒಂದು ಮುಖ, ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳು ಇವೆ. ರೈತ ಮಹಿಳೆ ಸಾವಿತ್ರಿ ನಾಗೂರಿ ಎಂಬುವರ ತೋಟದ ಮನೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದೆ. ಈ ಕರುವಿಗೆ ಎರಡು, ನಾಲಿಗೆ, ಮೂರು ಕಣ್ಣು ಇರುವುದನ್ನು ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಹ …
Read More »ಕೋಟೆಮಲ್ಲೂರಿನಿಂದ ಕೋಣನತಲೆವರೆಗಿನ ರಸ್ತೆ ಸರಿಪಡಿಸಲು ಮನವಿ
ಹೊನ್ನಾಳಿ: ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮದಿಂದ ಹೊನ್ನೂರು ವಡ್ಡರಹಟ್ಟಿ, ಚಿಕ್ಕಗೋಣಿಗೆರೆ, ಹಿರೇಗೋಣಿಗೆರೆ, ಹರಗನಹಳ್ಳಿ ಹಾಗೂ ಕೋಣನತಲೆ ಗ್ರಾಮದವರೆಗಿನ 9 ಕಿ.ಮೀ ಉದ್ದದ ರಸ್ತೆ ಹಾಳಾಗಿದ್ದು, ಕೂಡಲೇ ದುರಸ್ತಿಪಡಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ. ‘ಕೋಟೆಮಲ್ಲೂರು ದಾಟಿದ ನಂತರ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವುದು ಕಷ್ಟವಾಗುತ್ತಿದೆ’ ಎಂದು ಬೇಲಿಮಲ್ಲೂರು ಗ್ರಾಮದ ಉಮೇಶ್, ಹಿರೇಗೋಣಿಗೆರೆ ಜಿ.ಎಚ್. ವೀರೇಶ್ ದೂರಿದ್ದಾರೆ. ‘ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿ ಗುಂಡಿ ಬಿದ್ದು ನೀರು ಸಂಗ್ರಹವಾಗಿದ್ದು, ಕೆಲವರು ಬೈಕ್‌ಗಳಿಂದ ಇಳಿದು …
Read More »ದಾವಣಗೆರೆ: ವಾಲ್ಮೀಕಿ ಜಯಂತಿಗೆ ಬೈಕ್ ರ‍್ಯಾಲಿ
ದಾವಣಗೆರೆ: ಜಿಲ್ಲಾ ವಾಲ್ಮೀಕಿ ಯುವಕರ ಸಂಘವು ವಾಲ್ಮೀಕಿ ಜಯಂತಿಯ ಮುನ್ನಾ ದಿನವಾದ ಬುಧವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿತು. ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಾಲ್ಮೀಕಿ ಸಂದೇಶ ರವಾನಿಸುವ ಪ್ರಯತ್ನ ಮಾಡಿತು. ಸೋನೆ ಮಳೆಯ ನಡುವೆಯೂ ಹೊಂಡದ ವೃತ್ತದಲ್ಲಿ ಜಮಾಯಿಸಿದ ಯುವಕರು ತಲೆಗೆ ಪೇಟ ಧರಿಸಿ, ಬಾವುಟ ಹಿಡಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ವೀರ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ …
Read More »ವೈಭವಯುತ ‘ಕಿತ್ತೂರು ಉತ್ಸವ’ಕ್ಕೆ ಭರದ ಸಿದ್ಧತೆ: ಶಾಸಕ ಬಾಬಾಸಾಹೇಬ ಪಾಟೀಲ
ಬೆಳಗಾವಿ: ‘ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ 25ರವರೆಗೆ ನಡೆಯಲಿರುವ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. 23ರಂದು ಸಂಜೆ 7ಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ‘ದ್ವಿಶತಮಾನೋತ್ಸವದ ಕಾರಣಕ್ಕಾಗಿ ಈ ಬಾರಿ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ಘೋಷಿಸಿದೆ. ಒಂದೆರಡು ದಿನಗಲ್ಲಿ ಸಂಪೂರ್ಣ ಅನುದಾನ ಬಿಡುಗಡೆಯಾಗಲಿದೆ’ ಎಂದು ಅವರು ನಗರದಲ್ಲಿ ಶನಿವಾರ …
Read More »ಮಹಾ’ ಸೀಟು ಹಂಚಿಕೆ ಬಗ್ಗೆ ಸಿಎಂ ಶಿಂಧೆ ಮಹತ್ವದ ಮಾಹಿತಿ
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಉಭಯ ಪಕ್ಷಗಳ ತಯಾರಿ ಗರಿಗೆದರಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ನಿನ್ನೆ ದೆಹಲಿಗೆ ತೆರಳಿ ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆಗೆ ಮಹತ್ವದ ಚರ್ಚೆ ನಡೆಸಿ ಬಂದಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದ ಜನತೆಗೆ ಒಳ್ಳೆಯ ಸುದ್ದಿಯನ್ನೇ ಕೊಡುತ್ತೇವೆ ಎಂದು ಸುಳಿವು ನೀಡಿದ್ದಾರೆ. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದೆವು. ನಮ್ಮ ಮಹಾಯುತಿಯ …
Read More »
Laxmi News 24×7