ಬೆಳಗಾವಿ: ರಾಷ್ಟ್ರೀಯ ಬಸವ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ಬಾಲಿ, ಮಲೇಷಿಯಾ ಹಾಗೂ ಥಾಯ್ಲೆಂಡ್ ದೇಶಗಳಲ್ಲಿ 11 ದಿನಗಳವರೆಗೆ ನಡೆಯಲಿರುವ ‘ಭಾರತ ವಚನ ಸಂಸ್ಕೃತಿ ಯಾತ್ರೆ’ಯಲ್ಲಿ ಪಾಲ್ಗೊಳ್ಳಲು ಬೆಳಗಾವಿಯಿಂದಲೂ ಒಂದು ತಂಡ ವಿದೇಶಕ್ಕೆ ತೆರಳಿದೆ. ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಈ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಲಿದ್ದಾರೆ. ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ ಹಿರಿಯರ ತಂಡವು ಬೆಂಗಳೂರು ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ ಪ್ರಯಾಣ …
Read More »BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
ದಾವಣಗೆರೆ: ‘ವಕ್ಫ್ ಆಸ್ತಿ ವಿಚಾರವಾಗಿ ಪ್ರತ್ಯೇಕವಾಗಿ ಪಾದಯಾತ್ರೆ ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಪಕ್ಷದ ರಾಷ್ಟ್ರೀಯ ವರಿಷ್ಠರು ತಡೆಯಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ನಾವೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ಪ್ರತ್ಯೇಕ ಪಾದಯಾತ್ರೆ ನಡೆಸಬೇಕಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಶನಿವಾರ (ನ16)ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಏಳಿಗೆ ಸಹಿಸದ ಕೆಲವರು ತಮ್ಮ …
Read More »‘ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
ವಿಜಯಪುರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ವಿವಿಧ ಮಠಾಧೀಶರು ಶನಿವಾರ ಹೊಸದಾಗಿ “ಕ್ರಾಂತಿವೀರ ಬ್ರಿಗೇಡ್” ಘೋಷಿಸಿದರು. ವಿಜಯಪುರ ತಾಲೂಕಿನ ಮಖಣಾಪುರ ಸೋಮನಾಥ ಸ್ವಾಮೀಜಿ ಅವರನ್ನು ಬ್ರಿಗೇಡ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಿಂದುಳಿದ ಮತ್ತು ದಲಿತರು ಸೇರಿ ಸಕಲ ಹಿಂದೂ ಧರ್ಮ ಸಮಾಜದ ಸಂಘಟನೆ ಮಾಡಬೇಕು ಎಂಬುವುದು ಎಲ್ಲ ಸ್ವಾಮೀಜಿಗಳ ಉದ್ದೇಶವಾಗಿದೆ. ಈ ಬ್ರಿಗೇಡ್ ಸ್ಥಾಪನೆಯು ಕಾಂತ್ರಿಕಾರಿ ನಿರ್ಧಾರ. ಬಸವನ ಬಾಗೇವಾಡಿಯಲ್ಲಿ ಫೆಬ್ರವರಿ 4ರ ರಥಸಪ್ತಮಿ ದಿನದಂದು ಇದರ ಉದ್ಘಾಟನೆ ನಡೆಯಲಿದೆ ಎಂದು …
Read More »ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ (Kiccha Suddep) ಈ ವಾರ ತಮ್ಮದೇ ಮಾತಿನ ಶೈಲಿಯಲ್ಲಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ನಡೆದ ಟಾಸ್ಕ್ ಹಾಗೂ ಇತರೆ ವಿಚಾರಗಳ ಕಿಚ್ಚ ಮಾತನಾಡಿದ್ದಾರೆ. ತಲೆ ತಿರುಗಿ ಬಿದ್ದಿದ್ದ ಚೈತ್ರಾ ಅವರು ಚಿಕಿತ್ಸೆ ಪಡೆದು ದೊಡ್ಮನೆಗೆ ಬಂದಿದ್ದಾರೆ. ಮನೆಗೆ ಬಂದ ಕೂಡಲೇ ಚೈತ್ರಾ ಅವರು ಹೊರಗಿನ ಕೆಲ ವಿಚಾರಗಳನ್ನು ಮಂಜು ಅವರ ಬಳಿ ಪಿಸು ದನಿಯಲ್ಲಿ ಹೇಳಿದ್ದಾರೆ. ವಿಕ್ಕಿ ಅಣ್ಣ ನಿಮಗೆ …
Read More »ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು ಮಾಡಲಾಗುವುದು. ಅರ್ಹರ ಕಾರ್ಡ್ ಗಳಿಗೆ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ರವಿವಾರ (ನ.17) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆ ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಪತ್ರಕರ್ತರು ಸರಿಯಾಗಿ ತಿಳಿದುಕೊಂಡು ಬರಬೇಕು. ಅನರ್ಹರ ಕಾರ್ಡ್ ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಇದಿನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಇನ್ನೂ ಅಂತಿಮ …
Read More »ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
ಬೆಳಗಾವಿ: ರಾಜ್ಯ ಮದ್ಯ ಮಾರಾಟಗಾರರು ನ.20 ರಂದು ಕರೆ ನೀಡಿರುವ ರಾಜ್ಯ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಉಮೇಶ್ ಬಾಳಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರವಾಸೋದ್ಯಮ ಹೋಟೆಲ್ ಬೇರೆ ಅವರ ಸಂಘಟನೆಯೇ ಬೇರೆ. ಹೀಗಾಗಿ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದರು. ಪ್ರವಾಸೋದ್ಯಮ ಹೋಟೆಲ್ ನವರು ಬ್ಯಾಂಕ್ ನಿಂದ ಸಾಲ ಪಡೆದು ಹೆಚ್ಚಿನ …
Read More »ಬೆಳಗಾವಿ-ಧಾರವಾಡ ವಯಾ ಕಿತ್ತೂರು ನೇರ ರೈಲು ಮಾರ್ಗ ಯಾಕಿಷ್ಟು ವಿಳಂಬ?
ಬೆಳಗಾವಿ, ನವೆಂಬರ್ 17: ಬೆಳಗಾವಿ-ಧಾರವಾಡ ವಯಾ ಕಿತ್ತೂರು ನೇರ ರೈಲು ಮಾರ್ಗ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಕನಸಿನ ಯೋಜನೆ ಇದು. ಯೋಜನೆಯ ಕಾಮಗಾರಿಗೆ ಭೂ ಸ್ವಾಧೀನ ಕಾರ್ಯವೇ ಅಡ್ಡಿಯಾಗಿದೆ. ಈಗಾಗಲೇ ಈ ಯೋಜನೆ ನಕ್ಷೆಯನ್ನು ಯಾವುದೇ ಕಾರಣಕ್ಕೂ ಬದಲಿಸಲಾಗದು. ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಮ್ಮ ಕೆಲಸ ಆರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ …
Read More »ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ
ಬೈಲಹೊಂಗಲ: ರೈತ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿರುವ, ಇತಿಹಾಸ ಪ್ರಸಿದ್ಧ ಇಲ್ಲಿನ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 18 ರಂದು ಸಂಜೆ 4.30ಕ್ಕೆ ನವಿಲಿನ ಕಳಶ ಹೊತ್ತ ಮಹಾರಥ ಎಳೆಯಲು ಭಕ್ತರು ಕಾಯುತ್ತಿದ್ದಾರೆ. 80 ಅಡಿ ಎತ್ತರದ ರಥಃ ಪ್ರತಿವರ್ಷ ಮರಡಿ ಬಸವೇಶ್ವರ ಜಾತ್ರೆಗೆ ಒಂದು ತಿಂಗಳ ಮುನ್ನವೇ ಸಿದ್ಧತೆ ಆರಂಭಿಸಲಾಗುತ್ತದೆ. ವಿಜಯದಶಮಿ ದಿನದಂದು ದೇವಸ್ಥಾನದಲ್ಲಿರುವ ಬೃಹತ್ ಆಕಾರದ ಕಲ್ಲಿನ ಗಾಲಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ …
Read More »ಬಹುಮತ ಹೊಂದಿರುವ ಸರ್ಕಾರ ಬೀಳಿಸುವುದು ಹುಚ್ಚುತನದ ಪರಮಾವಧಿ: B.S.Y.
ಶಿವಮೊಗ್ಗ: ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಪೂರ್ಣ ಬಹುಮತ ಹೊಂದಿರುವ ಸರ್ಕಾರವನ್ನು ಬೀಳಿಸುವುದು ಹುಚ್ಚುತನದ ಪರಮಾವಧಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು. ‘ಸರ್ಕಾರ ಬೀಳಿಸುವುದಕ್ಕಾಗಿ ಕಾಂಗ್ರೆಸ್ ಶಾಸಕರನ್ನು ಯಾರೂ ಬಿಜೆಪಿಗೆ ಕರೆಯುತ್ತಿಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ಯಾವುದೇ ಭ್ರಷ್ಟಾಚಾರ ಅಥವಾ ಹಣಕಾಸಿನ ಏರುಪೇರು ಆಗಿಲ್ಲ. ರಾಜ್ಯ ಸರ್ಕಾರ ದುರುದ್ದೇಶದಿಂದ …
Read More »ಕುಷ್ಟಗಿ: ಹರಾಜು ಹಣ ಪಾವತಿಸದಿದ್ದರೂ ಕರ ವಸೂಲಿ
ಕುಷ್ಟಗಿ: ಪುರಸಭೆ ವ್ಯಾಪ್ತಿಯ ದಿನದ ಸಂತೆಯಲ್ಲಿ ವ್ಯಾಪಾರಿಗಳಿಂದ ವರ್ಷದ ಅವಧಿಗೆ ಶುಲ್ಕ ವಸೂಲಿ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮುಂಚಿತವಾಗಿ ಸಂಪೂರ್ಣ ಹಣ ಪಾವತಿಸದಿದ್ದರೂ ಸಂತೆಯಲ್ಲಿ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ. ತರಕಾರಿ, ಮಾಂಸದ ಅಂಗಡಿಗಳು, ಹಣ್ಣು, ಮಾರಾಟದ ಬಂಡಿ, ಫಾಸ್ಟ್‌ಫುಡ್, ಹೋಟೆಲ್ ಸೇರಿ ವಾರದ, ದೈನಂದಿನ ಸಂತೆ ಹಾಗೂ ಜಾನುವಾರು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಂದ ನಿಗದಿಪಡಿಸಿದ ಶುಲ್ಕ ವಸೂಲಿ ಮಾಡುವ ಹಕ್ಕನ್ನು …
Read More »
Laxmi News 24×7