Breaking News

ಮೂಡಲಗಿ

ಮೂಡಲಗಿ ತಾಲೂಕಿನಲ್ಲಿ ಮೊದಲ ಬಲಿ ಪಡೆದ ಕೊರೋನಾ

ಮೂಡಲಗಿ : ನಿನ್ನೆ ತಾನೇ ಮೂಡಲಗಿಗೆ ಪ್ರವೇಶಿಸಿದ ಕೊರೋನಾ ಇಂದು ಮೊದಲ ಬಲಿ ಪಡೆದು ಮೂಡಲಗಿ ಜನತೆಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಹೌದು ನಿನ್ನೆ ತಾನೆ ಮೊದಲಿಗೆ ಪಟ್ಟಣದ ತಳವಾರ ಓಣಿಯಲ್ಲಿ 38 ವರ್ಷದ ಮಹಿಳೆಗೆ ಕೊರೋನಾ ದೃಢವಾಗಿತ್ತು. ಇಂದು ಆ ಮಹಿಳೆ ಮೃತಪಟ್ಟಿದ್ದು, ಮೂಡಲಗಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಡಿ ಜಿ ಮಹಾತ್, ಪೊಲೀಸ್ ಇಲಾಖೆಯ ಸಿಪಿಐ ವೆಂಕಟೇಶ್ ಮುರನಾಳ, ಪಿಎಸ್ಐ …

Read More »

ಪಟ್ಟಣದ ಲಕ್ಷ್ಮಿ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ತಗಲಿದ್ದು, ಆ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ.

ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ತಗಲಿದ್ದು, ಆ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ. ಲಕ್ಷ್ಮಿ ನಗರ ನಿವಾಸಿಯಾಗಿದ್ದ ಅಂಗನವಾಡಿ ಕಾರ್ಯಕರ್ತೆಗೆ ಸೋಂಕು ಅಂಟಿದ್ದು, ಆರೋಗ್ಯ ಇಲಾಖೆಯ ಈ ಬಗ್ಗೆ ಇಂದು ಸಂಜೆ ಅಧಿಕೃತ ಪ್ರಕಟಣೆ ನೀಡಬೇಕಿದೆ. ಸೋಂಕಿತೆ ವಾಸವಿದ್ದ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಪರಿಶ್ರಮಪಟ್ಟು ಕೊರೊನಾ ಸೋಂಕು …

Read More »

ಆತ್ಮ ನಿರ್ಭರ ಭಾರತ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ದೇಶದ ಜನರ ಆಶೋತ್ತರಗಳಿಗೆ ಸ್ಪಂಧಿಸುತ್ತಿದೆ: ಈರಣ್ಣಾ ಕಡಾಡಿ

ಮೂಡಲಗಿ: ಕೇಂದ್ರ ಬಿಜೆಪಿ ಸರ್ಕಾರ ನವಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಆತ್ಮ ನಿರ್ಭರ ಭಾರತ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ದೇಶದ ಜನರ ಆಶೋತ್ತರಗಳಿಗೆ ಸ್ಪಂಧಿಸುತ್ತಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.  ಸಮೀಪದ ಕಲ್ಲೋಳಿ ಪಟ್ಟಣದ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕೇಂದ್ರ ಸರ್ಕಾರ 20 ಸಾವಿರ ಕೋಟಿ ಗ್ಯಾರಂಟಿ ಸ್ಕೀಂನ್ನು ಜಾರಿಗೊಳಿಸಿದೆ. ಇದರಿಂದ 2 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ …

Read More »

ಅಜೀತ ಮನ್ನಿಕೇರಿಯವರ ಮುಖಾಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮೂಡಲಗಿ ತಾಲೂಕಾ ಘಟಕದಿಂದ ಮನವಿ ಸಲ್ಲಿಸಿದರು.

ಮೂಡಲಗಿ: ನೂತನವಾಗಿ ರಚಿಸಲ್ಪಟ್ಟಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆಯಾಗುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿಯವರ ಮುಖಾಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮೂಡಲಗಿ ತಾಲೂಕಾ ಘಟಕದಿಂದ ಮನವಿ ಸಲ್ಲಿಸಿದರು. ಶುಕ್ರವಾರದಂದು ಪಟ್ಟಣದ ಬಿಇಒ ಕಚೇರಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಿಇಒ ಅವರಿಗೆ ವರ್ಗಾವಣೆ ನಿಯಮಗಳ ಬದಲಾವಣೆ ಕುರಿತು ಮನವಿ ಸಲ್ಲಿಸಿದರು. ಹೊಸ ವರ್ಗಾವಣೆ ಮಾರ್ಗಸೂಚಿಯಿಂದ …

Read More »

ಶ್ರೀ ಮಹಾಲಕ್ಷ್ಮೀ ಸೋಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ

ಮೂಡಲಗಿ:-  ಕೊರೋನಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ಜೀವ ಪಣಕ್ಕಿಟ್ಟು ವಾರಿಯರ್ಸಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಸ್ಥಳೀಯ ಶ್ರೀ ಮಹಾಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವತಿಯಿಂದ ಮೂರು ಸಾವಿರ ಗೌರವ ಧನ ನೀಡಿ ಗೌರವಿಸಲಾಯಿತು. ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಾದ ಇಂದೂಮತಿ ರಾಜನಾಳ,ಮಹಾದೇವಿ ಹಣಬರ,ಸವಿತಾ ಪಾಲಬಾಂವಿ,ವಿಜಯಲಕ್ಷ್ಮೀ ರೇಳೆಕರ ಅವರನ್ನು ಸೊಸಾಯಿಟಿ ವತಿಯಿಂದ ಗೌರವ ಧನದ ಚೆಕ್ಕು ನೀಡಿ ಗೌರವಿಸಿದರು. ಸೊಸಾಯಿಟಿ ಅಧ್ಯಕ್ಷ ಎಸ್.ಆರ್.ಖಾನಟ್ಟಿ, ಉಪಾಧ್ಯಕ್ಷ …

Read More »

ಜೀವದ ಹಂಗು ತೊರೆಗೊಸ್ಕರ ದುಡಿಯುತ್ತಿರುವ ಕೊರೋನಾ ವಾರಿಯರ್ಸಗೆ ಗೌರವ ……….

ಮೂಡಲಗಿ : ದು ಜನರಿಕೊರೊನಾ ವೈರಸ್ ನಿಯಂತ್ರಣಕ್ಕೆ ಸೈನಿಕರಂತೆ ತಮ್ಮ ಜೀವದ ಹಂಗು ತೊರೆಗೊಸ್ಕರ ದುಡಿಯುತ್ತಿರುವ ಕೊರೋನಾ ವಾರಿಯರ್ಸಗೆ ಗೌರವ  ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ವಾಸಂತಿ  ತೇರದಾಳ ಹೇಳಿದರು. ಸಮೀಪದ ಹಳ್ಳೂರ ಗ್ರಾಮದ ಜಿಲ್ಲಾ ಪಂಚಾಯಿತಿ ಸದಸ್ಯೆ ವಾಸಂತಿ ತೇರದಾಳ ಅವರು ಹುಟ್ಟು ಹುಬ್ಬದ ಪ್ರಯುಕ್ತ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಉಡಿ ತುಂಬವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು …

Read More »

ಮುಂಬೈ ಇಂದ ಮೂಡಲಗಿ ತಾಲೂಕಿಗು ಹಬ್ಬಿತು ಕರೋನ ಸೋಂಕು………..

ಮುಂಬೈ ನಿಂದ ಮೂಡಲಗಿ ತಾಲೂಕಿನ ಕಲ್ಲೊಳಿ ಗೆ ಆಗಮಿಸಿದ ಮೂರು ಜನರ ಪೈಕಿ ಒಬ್ಬ ವ್ಯಕ್ತಿಗೆ. ಕರೋನ ಸೋಂಕು ತಟ್ಟಿರುವ ಶಂಕೆ ಇಷ್ಟು ದಿನ ಒಂದೇ ಒಂದು ಪ್ರಕರಣ ಕೂಡ ಇಲ್ಲದ ಮೂಡಲಗಿ ತಾಲೂಕಿಗೆ ಇಂದು ಬಿಗ್ ಶಾಕ್ ಸೋಂಕು ತಟ್ಟಿರುವ ವ್ಯಕ್ತಿಗಳ ವಾಸಿಸುವ 100 ಮೀಟರ್ ಪ್ರದೇಶ ಸೀಲ್ ಡೌನ್ ಮುಂಬೈನಿಂದ ಆಗಮಿಸಿದ ಮೂರು ಜನ ಪಟ್ಟಣದಲ್ಲಿ ಸುತ್ತಾಡಿರುವ ಶಂಕೆ ಮುನ್ನೆಚಚರಿಕೆ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸ್ ಹಾಗೂ …

Read More »

ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂಧಿಸುವುದನ್ನು ಕಂಡು ಜಾನಪದ ಹಾಡು

ಮೂಡಲಗಿ: ಅರಬಾಂವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂಧಿಸುವುದನ್ನು ಕಂಡು ಜಾನಪದ ಜಾಣ ಶಬ್ಬೀರ್ ಡಾಂಗೆ ಅವರು “ಮಂದಿಯ ಕಷ್ಟ ನೋಡ್ಯಾರ,ಎನ್ ಚಂದ ಸಂತಿ ಮಾಡ್ಯಾರ ” ಜಾನಪದ ಹಾಡು ರಚಿಸಿ ಹಾಡಿದ್ದು, ಸೋಮವಾರ ಹಳ್ಳೂರ ಗ್ರಾಮದಲ್ಲಿ ಆಡಿಯೋ ಸಿ.ಡಿಯನ್ನು ಬಿಡುಗಡೆಗೊಳಿಸಿದರು. ಕಳೆದ 15-16ವರ್ಷಗಳಿಂದ ಕಷ್ಟದಲ್ಲಿದ್ದ ಕ್ಷೇತ್ರದ ಜನತೆಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಕೊರೋನಾ ಲಾಕ್‍ಡೌನ ಸಮಯದಲ್ಲಿ ಉದ್ಯೋಗವಿಲ್ಲದೆ ಜನತೆ ಹಸಿವಿನಿಂದ ಇರಬಾರದು …

Read More »

ಕೊರೋನಾ ವಾರಿಯರ್ಸ್‍ಗೆ ಗೌರವ ನೀಡಿ :ನಾಗೇಶ ಶೇಖರಗೋಳ

ಗೋಕಾಕ : ಜಗತ್ತಿನಾದ್ಯಂತ ಕಾಡುತ್ತಿರುವ ಕೊರೋನಾ ವಿರುದ್ಧ ಸಮರ ಸಾರುತ್ತಿರುವ ಕೋರೋನಾ ವಾರಿಯರ್ಸ್ ಅವರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಿ ಕೃತಜ್ಞತೆ ಸಲ್ಲಿಸುವಂತೆ ಯುವ ಮುಖಂಡ ನಾಗೇಶ ಶೇಖರಗೋಳ ಹೇಳಿದರು. ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ಗ್ರಾಮಸ್ಥರು ಹಮ್ಮಿಕೊಂಡಿದ್ದ ಕೊರೋನಾ ವೈರಸ್ ವಾರಿಯರ್ಸ್ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸುತ್ತಿರುವ ವೈದ್ಯರು, ದಾದಿಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರ …

Read More »

ಕೋವಿಡ್ 19 ವಾರಿಯರ್ಸ್ ಗೆ ಯುವ ಧುರೀಣರಾದ ಶ್ರೀ ನೀಲಕಂಠ ಕಪ್ಪಲಗುದ್ದಿ ಅವರಿಂದ ಅನ್ನ ಸಂತರ್ಪಣೆ

ಕಲ್ಲೋಳಿ ಪಟ್ಟಣದ ಕೋವಿಡ್ 19 ವಾರಿಯರ್ಸ್ ಗೆ ಪಟ್ಟಣದ ಯುವ ದುರೀಣರಾದ ಶ್ರೀ ನೀಲಕಂಠ ಬಸವರಾಜ ಕಪ್ಪಲಗುದ್ದಿ ಇವರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು. ಕೋವಿಡ್ 19 ವಾರಿಯರ್ಸ್ ಯಾದ ಪಟ್ಟಣ ಪಂಚಾಯತ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಕೆ. ಇ. ಬಿ ಸಿಬ್ಬಂದಿ ಕಲ್ಲೋಳಿ ಪಂಚಾಯತಿ ಆವರಣದಲ್ಲಿ ಎಲ್ಲಾ ವರ್ಗದವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ …

Read More »