ಜಿಲ್ಲೆಯಾದ್ಯಂತ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ (ಗ್ಯಾಸ್ ಸಿಲೆಂಡರ್) ಸಮಸ್ಯೆ ಇಲ್ಲ. ಮನೆ, ಅಂಗಡಿಯಲ್ಲಿ ಅಕ್ರಮವಾಗಿ ಪೆಟ್ರೋಲ್ ಸಂಗ್ರಹಿಸಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮ ರೋಷನ್ ಎಚ್ಚರಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡಿಸೆಲ್, ಸಿಲೆಂಡರ್ ಅಭಾವ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ. ಹೀಗಾಗಿ ಜನಸಾಮಾನ್ಯರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. …
Read More »ಚಿನ್ನದ ವ್ಯಾಪಾರಿಗಳ ಅನಗತ್ಯ ತೊಂದರೆಗೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧ
ಬೆಳಗಾವಿ: ಚಿನ್ನದ ವ್ಯಾಪಾರ ಮಾಡುವವರಿಗೆ ಅನಗತ್ಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ಮಂಗಳವಾರ ದೈವಜ್ಞ ಜ್ಯುವೆಲರ್ಸ್ ನ ಅಸೋಸಿಯೇಷನ್ ವತಿಯಿಂದ ಮಂಗಳವಾರ ಆಯೋಜಿಸಿದ್ದ “ಸುವರ್ಣ ಸಮ್ಮೇಳನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಆಭರಣ ತಯಾರಕರು ಮತ್ತು ಕುಶಲಕರ್ಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಸರ್ಕಾರ ಗಮನಿಸುತ್ತಿದ್ದು, ಈ ಅಸಂಘಟಿತ ವಲಯ ಬಲಪಡಿಸಲು ಅಗತ್ಯ …
Read More »ಬೆಳಗಾವಿಯಲ್ಲಿ ಉದ್ಯಮಗಳು ಬೆಳೆಯಲು ಉದ್ಯಮಿಗಳು ಒಂದಾಗಿ ಧ್ವನಿ ಎತ್ತಬೇಕು
ಬೆಳಗಾವಿ: ಬೆಳಗಾವಿಯಲ್ಲಿ ಉದ್ಯಮಗಳು ಬೆಳೆಯಬೇಕು. ಉದ್ಯಮಿಗಳು ಬೆಳವಣಿಗೆ ಹೊಂದಬೇಕಾದರೆ ಇಲ್ಲಿರುವ ಸಮಸ್ಯೆಗಳು ನಿವಾರಣೆಯಾಗಬೇಕು. ಅದಕ್ಕೆ ಉದ್ಯಮಿಗಳು ಒಂದಾಗಿ ಗಟ್ಟಿ ಧ್ವನಿ ಎತ್ತಬೇಕು ಎನ್ನುವ ಒಕ್ಕೊರಲ ಅಭಿಪ್ರಾಯ, ಮಂಗಳವಾರ ಆರಂಭವಾದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನದ ಉದ್ಘಾಟನೆ ಸಮಾರಂಭದ ವೇಳೆ ವ್ಯಕ್ತವಾಯಿತು. ಬೆಳಗಾವಿ ವಾಣಿಜ್ಯೋದ್ಯಮ ಸಂಘದ ವತಿಯಿಂದ ಫೌಂಡ್ರಿಕ್ಲಸ್ಟರ್ ಆವರಣದಲ್ಲಿ 3 ದಿನಗಳ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನ ಬೆಲೆಕ್ಸ್ – 2026 ಆಯೋಜಿಸಲಾಗಿದ್ದು, ಉದ್ಘಾಟನೆ ಸಮಾರಂಭ ಇಲ್ಲಿಯ ಉದ್ಯಮಗಳ ಬೆಳವಣಿಗೆಗೆ …
Read More »ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ
ಗೋಕಾಕ: ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ತಳಕಟ್ಟನಾಳ ಗ್ರಾಮದಲ್ಲಿ ಬುಧವಾರ ವಿವಿಧ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅರಬಾವಿ ಕ್ಷೇತ್ರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಂಡು ಜನೋಪಯೋಗಿ ಕೆಲಸ ಮುಂದುವರೆಸಿಕೊಂಡು …
Read More »ನೂತನ ಎಂಎಸ್ಎಂಇ ನೀತಿ ಹಿನ್ನೆಲೆಯಲ್ಲಿ ಸಮಾಲೋಚನೆ
ಬೆಳಗಾವಿ : ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬುಧವಾರ ಪಾಲುದಾರರೊಂದಿಗೆ ಸಮಾಲೋಚನೆ ನಡೆಯಿತು. ಜಿಲ್ಲಾ ಕೈಗಾರಿಕೆ ಕೇಂದ್ರ ಹಾಗೂ ಬೆಳಗಾವಿ ವಾಣಿಜ್ಯೋದ್ಯಮ ಸಂಘಗಳ ಸಹಯೋಗದಲ್ಲಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆದ ವಿಭಾಗಮಟ್ಟದ ಸಮಾವೇಶದಲ್ಲಿ ವಿವಿಧ ತಜ್ಞರು ವಿಷಯಗಳನ್ನು ಮಂಡಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಡಾ.ಸತೀಶ ಬಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಕಡೆ ಪಾಲುದಾರರ ಸಮಾವೇಶ ನಡೆಸಿ, ಸಲಹೆ ಪಡೆದು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. …
Read More »ಅಂಕಲಗಿ ಘಟಕ ಹೋಮ್‌ಗಾರ್ಡಗೆ ಮುಖ್ಯಮಂತ್ರಿಗಳ ಸೇವಾ ಪದಕ ಶಾಸಕರಿಂದ ಸತ್ಕಾರ
ಗೋಕಾಕ: ತಾಲೂಕಿನ ಅಂಕಲಗಿ ಘಟಕ ಹೋಮ್‌ಗಾರ್ಡ ಆಗಿರುವ ಹೊಳೆಪ್ಪಾ ಬಸವಣ್ಣಿ ನೇಸರಗಿ ಅವರಿಗೆ ೨೦೨೫ರ ಮುಖ್ಯಮಂತ್ರಿಗಳ ಸೇವಾ ಪದಕ ದೊರೆತಿರುವುದಕ್ಕಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಹೊಳೆಪ್ಪಾ ನೇಸರಗಿ ಅವರ ಸಮರ್ಪಣಾ ಮನೋಭಾವವನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು. ದೀರ್ಘಕಾಲದ ಸೇವೆ ಬಂದೋಬಸ್ತ್ ಕರ್ತವ್ಯ, ತುರ್ತು ಸಂದರ್ಭಗಳಲ್ಲಿ ಅಗ್ನಿ ಸುರಕ್ಷತೆ, ಮತ್ತು ಶೌರ್ಯ ಪ್ರದರ್ಶಿಸಿದ ಕಾರಣ ಸಿಎಂ ಪದಕ ಲಭಿಸಿದ್ದು ಇಂಥಹ ಸಿಬ್ಬಂದಿಗಳಿಗೆ …
Read More »ಪೆಟ್ರೊಲ್ ಬಂಕ್ ನಲ್ಲಿ ಮಾರಾಮಾರಿ: ಬಿಸಿ ಮುಟ್ಟಿಸಿದ ಪೊಲೀಸರು
ಬೆಳಗಾವಿಯಲ್ಲಿ ಪೆಟ್ರೋಲ್, ಡೀಸಲ್ ಕೊರತೆ ಉಂಟಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿ ಸುದ್ದಿ ಹರಡಾಡಿದ ಪರಿಣಾಮ ಎಲ್ಲಾ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ವಾಹನ ಸವಾರರು ಮುಗಿಬಿದಿದ್ದರು. ಈ ವೇಳೆ ಹೋಡೆದಾಡಿಕೊಂಡ ಯುವಕರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಗಾವಿ ನಗರದ ರಾಮದೇವ ಹೋಟೆಲ್ ಪಕ್ಕದ ಪೆಟ್ರೋಲ್ ಬಂಕ್ ಬಳಿ ನಡೆದ ಭೀಕರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಮುಂದೆ ಪೆಟ್ರೋಲ್ ಬಂಕ್‌ಗಳ ಬಳಿ ಇಂತಹ …
Read More »ಚಿಕ್ಕೋಡಿಯ ಜಿಲ್ಲಾ ಕೋರ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಚಿಕ್ಕೋಡಿಯ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಮಹಿಳಾ ದಿನಾಚರಣೆ ಹಾಗೂ ಕಾನೂನು ಮತ್ತು ಆಧ್ಯಾತ್ಮ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದು ನನಗೆ ಅತ್ಯಂತ ಸಂತಸ ಮತ್ತು ತೃಪ್ತಿ ನೀಡಿದ ಅನುಭವ ವಾಗಿದೆ. ಕಾನೂನು ಎನ್ನುವುದು ಸಮಾಜದ ಶಿಸ್ತಿನ ಕವಚವಾದರೆ, ಆಧ್ಯಾತ್ಮ ಎನ್ನುವುದು ಬದುಕಿನ ಅಂತರಂಗದ ಬೆಳಕು. ಈ ಎರಡೂ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿದ್ದು ಕಾರ್ಯಕ್ರಮದ ವಿಶಿಷ್ಟತೆಯಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾದ ಸನ್ಮಾನ್ಯ ಶ್ರೀ ಎ. ಎಸ್. …
Read More »ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ
ಮಮದಾಪುರ: ಕತ್ತಲದಿಂದ ಅಧರ್ಮ ಜ್ಯೋತಿ ಮಾಯವಾಗಿ ಬೆಳಕಿನಡೆಗೆ ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ ಎಂದು ನದಿ ಇಂಗಳಗಾಂವನ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಗಾದಿ ಮಹೋತ್ಸವ, ಶರಣ ಸಂಸ್ಕೃತಿ ಹಾಗೂ ಪ್ರವಚನ ಮಂಗಲೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು. ಮುರುಘೇಂದ್ರ ಶಿವಯೋಗಿಗಳು ಅಥಣಿಯಿಂದ ಅಂಕಲಗಿ ಅಡವಿಸಿದ್ದೇಶ್ವರ ಮಠದವರೆಗೆ ಪಾದಯಾತ್ರೆ ಮೂಲಕ ಸಂಚರಿಸುವ ಸಂದರ್ಭದಲ್ಲಿ ತೆಪ್ಪೋತ್ಸವ ನೆರವೇರಿಸಿದ ಕೊಳವಿ ಗ್ರಾಮದ ಗುರುಲಿಂಗ ಜಂಗಮ …
Read More »ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಹೊನ್ನಾಟದಲ್ಲಿ ಮಿಂದೆದ್ದ ಭಕ್ತಗಣ
ಮಲ್ಲಮ್ಮನ ಬೆಳವಡಿ: ಸಮೀಪದ ಪಟ್ಟಿಹಾಳ ಕೆ.ಬಿ.ಗ್ರಾಮದಲ್ಲಿ ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಅದ್ದೂರಿ ಹೊನ್ನಾಟ ಜರುಗಿತು. ತಳಿರು-ತೋರಣ ಹಾಗೂ ರಂಗೋಲಿ ಚಿತ್ತಾರಗಳಿಂದ ಗ್ರಾಮದ ಪ್ರಮುಖ ಬೀದಿಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಗ್ರಾಮದ ಗುರು-ಹಿರಿಯರು ಅದ್ದೂರಿ ಹೊನ್ನಾಟಕ್ಕೆ ಚಾಲನೆ ನೀಡಿದರು. ವಿವಿಧ ವಾದ್ಯಮೇಳಗಳೊಂದಿಗೆ ಸಾಗಿದ ಹೊನ್ನಾಟದಲ್ಲಿ ಭಕ್ತರೆಲ್ಲ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮ ಸೇರಿ ಸವಟಗಿ, ಖೊದಾನಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರದ್ಧಾ, ಭಕ್ತಿಯಿಂದ ದ್ಯಾಮವ್ವದೇವಿ ಹಾಗೂ ದುರ್ಗಾದೇವಿಯರಿಗೆ …
Read More »
Laxmi News 24×7