Breaking News

ಬೆಳಗಾವಿ

ಮಂಗನ ದಾಳಿಯಿಂದ 20ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆಗೆ ದಾಖಲ

ರಾಮದುರ್ಗ: ಮಂಗನ ದಾಳಿಯಿಂದ 20ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಶನಿವಾರ ಮತ್ತು ಭಾನುವಾರ ಪಟ್ಟಣದ ನೇಕಾರ ಪೇಟೆ, ಸಾಯಿ ನಗರದಲ್ಲಿ ಮಂಗನ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಒಂಟಿಯಾಗಿ ಸುತ್ತಾಡುವ ಜನರನ್ನು ಗುರಿಯಾಗಿಸಿಕೊಂಡು ಮಂಗ ದಾಳಿ ಮಾಡುತ್ತಿದೆ. ಮಂಗನಿಂದ ಕಚ್ಚಿಸಿಕೊಂಡವರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಾಮದುರ್ಗ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಮಂಗ ಸೆರೆ ಸಿಕ್ಕಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ …

Read More »

ಆರ್ಥಿಕ ಮುಗ್ಗಟ್ಟು ಮಧ್ಯೆಯೇ ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!

ಬೆಳಗಾವಿ: ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿರುವ ಮಹಾನಗರ ಪಾಲಿಕೆ ದುಂದು ವೆಚ್ಚ ಮಾಡುತ್ತಿದೆ. ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ವೇಳೆ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿರುವ ಬಿಲ್‌ 37 ಸಾವಿರ ರೂ. ಪಾವತಿಸಿರುವುದು ಎಲ್ಲರೂ ಹೌಹಾರುವಂತೆ ಮಾಡಿದೆ.   ನಗರದಲ್ಲಿ ಹಮ್ಮಿಕೊಳ್ಳುವ ಉತ್ಸವ, ಕಾರ್ಯಕ್ರಮ, ಜಯಂತಿಗಳಿಗೆ ಹಣ ಪೋಲು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದುಂದುವೆಚ್ಚ ಆಗಿರುವುದು ಕಂಡು ಬಂದಿದ್ದು, ಪಾಲಿಕೆ ಉತ್ತರಿಸಬೇಕಿದೆ. 2023ರ ಕರ್ನಾಟಕ ರಾಜ್ಯೋತ್ಸವದಲ್ಲಿ ಹೂವಿನ ಹಾರಕ್ಕೆ …

Read More »

ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ಕರ್ನಾಟಕ ಆಚರಣೆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮತ್ತೆ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕರಾಳ ದಿನಾಚರಣೆ ಮಾಡಿದೆ. ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡದಿದ್ದರೂ ಎಂಇಎಸ್ ನಾಯಕರು ಕರಾಳ ದಿನಾಚರಣೆ ಮಾಡಿದ್ದಾರೆ. ಕರಾಳ ದಿನಾಚರಣೆ ಮಾಡಿರುವ ಎಂಇಎಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.   ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವ ಅಗತ್ಯ ಇಲ್ಲ. ಅದು ಹೆಸರಿಗಷ್ಟೇ ಇದೆ. ವರ್ಷದಲ್ಲೊಮ್ಮೆ ಅದಕ್ಕೆ …

Read More »

ಸುವರ್ಣ ರಾಜ್ಯ ಪ್ರಶಸ್ತಿಗೆ ಚಲವಾದಿ ಆಯ್ಕೆ

ಖಾನಾಪುರ: ಕರ್ನಾಟಕ ಸಂಭ್ರಮ ಸುವರ್ಣ ಮಹೋತ್ಸವ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಿಸಿದ ರಾಜ್ಯ ಪ್ರಶಸ್ತಿಗೆ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮದ ನಿವಾಸಿ, ನಿವೃತ್ತ ಅರಣ್ಯ ಅಧಿಕಾರಿ ಎಸ್.ಎಂ ಚಲವಾದಿ ಆಯ್ಕೆಯಾಗಿದ್ದಾರೆ. ಚಲವಾದಿಯವರು ಮೂರೂವರೆ ದಶಕ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ಅರಣ್ಯ ಸಂರಕ್ಷಣೆ, ಪರಿಸರ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. …

Read More »

ಚಿಕ್ಕೋಡಿ | ಯಮನವ್ವಗೆ ಸುವರ್ಣ ಕರ್ನಾಟಕ ಪ್ರಶಸ್ತಿ

ಚಿಕ್ಕೋಡಿ: ತಾಲ್ಲೂಕಿನ ಧುಳಗನವಾಡಿ ಗ್ರಾಮದ ಹಿರಿಯ ಬಯಲಾಟ ಕಲಾವಿದೆ ಯಮನವ್ವಾ ಕಲಾಚಂದ್ರ(86) ಅವರ ಕಲೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯಮನವ್ವಾ ಅವರು ವಿವಿಧ ಕಲಾ ಪ್ರಕಾರಗಳಲ್ಲಿ 6 ದಶಕಗಳಿಂದ ಕಲಾಸೇವೆ ಸಲ್ಲಿಸಿದ್ದಾರೆ. 2015-16ನೇ ಸಾಲಿನಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ ಪಡೆದುಕೊಂಡ ಅವರಿಗೆ ಸುವರ್ಣ ಕರ್ನಾಟಕದ ಸಂಭ್ರಮದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಲಭಿಸಿದ್ದು ಚಿಕ್ಕೋಡಿ ಭಾಗದ ಕಲಾವಿದರಿಗೆ …

Read More »

22 ಅವಿರೋಧ, 11 ಸ್ಥಾನಕ್ಕೆ ಚುನಾವಣೆ

ಸವದತ್ತಿ: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ನಡೆದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯಲ್ಲಿ 34 ಸ್ಥಾನಗಳ ಪೈಕಿ 22 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಐದು ವರ್ಷದಿಂದ ಸದಸ್ಯತ್ವ ಶುಲ್ಕ ಪಾವತಿಸದೇ ಇರುವ ನೀರಾವರಿ ಇಲಾಖೆಯಿಂದ ಅರ್ಹ ನೌಕರರಿಲ್ಲದ ಕಾರಣ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಭಾಗದ ಉಳಿದ 11 ಸ್ಥಾನಗಳಿಗೆ ಚುನಾವಣೆ ಜರುಗಿತು. 1,135 ಮತಗಳಿರುವ ಪ್ರಾಥಮಿಕ ಶಾಲಾ …

Read More »

ಇತಿಹಾಸದಲ್ಲಿಯೇ ಪಿಎಲ್‌ಡಿ ಬ್ಯಾಂಕ್ ತನ್ನ ಶೇಅರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಜಿಲ್ಲೆಯ ಇತಿಹಾಸದಲ್ಲಿಯೇ ಪಿಎಲ್‌ಡಿ ಬ್ಯಾಂಕ್ ತನ್ನ ಶೇಅರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಮಂಗಳವಾರದಂದು ಇಲ್ಲಿಯ ಎಪಿಎಂಸಿ ರಸ್ತೆಯಲ್ಲಿರುವ ದಿ. ಗೋಕಾಕ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ಪಿ.ಎಲ್.ಡಿ.) ನಿಂದ ಪ್ರಸ್ತುತ ಸಾಲಿನ ಲಾಭಾಂಶದಲ್ಲಿ …

Read More »

ನಾವು ಗೆಲುವಿನ ಅಂತರ ನೋಡುತ್ತಿಲ್ಲ, ಗೆಲುವು ಮಾತ್ರ ನೋಡುತ್ತಿದ್ದೇವೆ : ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ

ಹಾವೇರಿ : ಮುಂದಿನ ತಿಂಗಳು ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.ಇಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಅವರು ಮಾತನಾಡಿ, ನಾವು ಗೆಲುವಿನ ಅಂತರ ನೋಡುತ್ತಿಲ್ಲ. ಗೆಲುವು ಮಾತ್ರ ನೋಡುತ್ತಿದ್ದೇವೆ ಎಂದು ತಿಳಿಸಿದರು. ಈ ಬಾರಿ ಶಿಗ್ಗಾವಿಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹಾವೇರಿ ಜಿಲ್ಲೆಯ …

Read More »

ಕರಾಳ ದಿನಕ್ಕೆ ಅವಕಾಶ ಇಲ್ಲ: ರಾಜೇಶ ಬುರ್ಲಿ

ಕಾಗವಾಡ: ಪ್ರತಿಯೊಬ್ಬರು ಮಾತೃಭಾಷಾಭಿಮಾನ ಹೊಂದಿರಬೇಕು. ಆದರೆ ಇತರ ಭಾಷೆಗಳನ್ನು ದ್ವೇಷಿಸಬಾರದು. ಎಲ್ಲರೂ ಸೇರಿ ಕರ್ನಾಟಕ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಕರಾಳ ದಿನಕ್ಕೆ ಅವಕಾಶ ಇಲ್ಲ‌ ಎಂದು ತಹಶೀಲ್ದಾರ್‌ ರಾಜೇಶ ಬುರ್ಲಿ ಹೇಳಿದರು. ಶುಕ್ರವಾರ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ನಡೆದ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಮರಾಠಿ ಭಾಷಿಕರೇ ಹೆಚ್ಚಾಗಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನ.1 …

Read More »

ಕಿಡ್ನ್ಯಾಪರ್ಸ್‌ ಗೆ ಗುಂಡಿನ ರುಚಿ ತೋರಿಸಿ ಮಕ್ಕಳನ್ನು ರಕ್ಷಿಸಿದ ಪೊಲೀಸರು

ಬೆಳಗಾವಿ: ಅಪಹರಣಕಾರರ ಕಾಲಿಗೆ ಗುಂಡು ಹೊಡೆದ ಪೊಲೀಸರು ಮಕ್ಕಳನ್ನು ರಕ್ಷಿಸಿದ ಘಟನೆ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಗಬಾಳಿ ರಸ್ತೆಯ ಬಳಿ ಶುಕ್ರವಾರ (ಅ.25) ಬೆಳಗ್ಗೆ ನಡೆದಿದೆ. ಪೊಲೀಸರು ಮೂವರು ಅಪಹರಣಕಾರರನ್ನು ಬಂಧಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ರವಿಕಿರಣ, ಬಿಹಾರ ಮೂಲದ ಶಾರುಖ್ ಶೇಖ್ ಮತ್ತು ಕೊಲ್ಲಾಪುರ ಜಿಲ್ಲೆಯ ಸಂಬಾ ಕಾಂಬಳೆ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಅಥಣಿಯ ಹುಲಗಬಾಳಿ ರಸ್ತೆಯ ಸ್ವಾಮಿ ಬಡಾವಣೆಯ ವಿಜಯ ದೇಸಾಯಿ ಎಂಬುವರ ಮನೆಗೆ ನುಗ್ಗಿದ ದುಷ್ಕರ್ಮಿಗಳು …

Read More »