Breaking News
Home / ಜಿಲ್ಲೆ / ಧಾರವಾಡ

ಧಾರವಾಡ

ಸರ್ಕಾರಿ ಕಚೇರಿಗಳ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಮತ್ತು ಖಾಸಗಿ ಹಾಗೂ ಇತರ ನೌಕರರಿಗೆ ವೇತನ ಸಹಿತ ರಜೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಮತದಾನ ನಡೆಯಲಿದೆ.   ಮತದಾನ ದಿನದಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸರ್ಕಾರಿ ಕಚೇರಿಗಳ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಮತ್ತು ಖಾಸಗಿ ಹಾಗೂ ಇತರ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ, ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಮಹಾನಗರ ವ್ಯಾಪ್ತಿಯ ಎಲ್ಲ ಸರ್ಕಾರಿ, ಅರೆ …

Read More »

ಧಾರವಾಡದಲ್ಲಿ ರಕ್ತದ ಕೊರತೆ- ಗರ್ಭಿಣಿಯರಿಗೂ ಸಿಗುತ್ತಿಲ್ಲ ಬ್ಲಡ್

ಧಾರವಾಡ: ಜಿಲ್ಲೆಯಲ್ಲಿ ಯಾವುದೇ ಬ್ಲಡ್ ಬ್ಯಾಂಕ್ ಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಉತ್ತರ ಸಿಗುತ್ತಿದ್ದು, ಬಹುತೇಕ ಬ್ಲಡ್ ಬ್ಯಾಂಕ್ ಗಳು ದಾನಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಯುವ ಜನತೆ ರಕ್ತ ದಾನ ಮಾಡುತ್ತಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಿದ ಬಳಿಕ ಜಿಲ್ಲೆಯಲ್ಲಿ ತೀರಾ ರಕ್ತದ ಕೊರತೆ ಉದ್ಭವಿಸಿದೆಯಂತೆ. ಮುಖ್ಯವಾಗಿ ರಕ್ತದಾನ ಮಾಡುವವರು ಇದೇ ವಯೋಮಾನದವರಾಗಿರುವ ಕಾರಣ ಈಗ ಲಸಿಕೆಯೇ …

Read More »

ಉತ್ತರ ಕನ್ನಡದ ಮಹಿಳೆಯಿಂದ ಅಂಗಾಂಗ ದಾನ; ಧಾರವಾಡದಿಂದ ಬೆಂಗಳೂರಿಗೆ ಮಹಿಳೆಯ ಲಿವರ್ ಏರ್​ಲಿಫ್ಟ್

ಧಾರವಾಡ: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್​ನ್ನು ಏರ್‌ಲಿಫ್ಟ್ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಿಂದ ಬೆಂಗಳೂರಿಗೆ ಮೂಲಕ ರವಾನಿಸಲಾಗಿದೆ. ಲೀವರ್​ನ್ನು ಹುಬ್ಬಳಿಯ ವಿಮಾನ ನಿಲ್ದಾಣಕ್ಕೆ ರವಾನಿಸಲು ಗ್ರೀನ್ ಕಾರಿಡಾರ್ ಮೂಲಕ ಅಂಬ್ಯುಲೆನ್ಸ್‌ಗೆ ಪೊಲೀಸರು ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅಂಗಾಗ ದಾನ ಮಾಡಿದ ಮಹಿಳೆಯ ಜತೆ ಪೊಲೀಸ್ ಇಲಾಖೆಯೂ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಗ ದಾನ ಮಾಡಲಾಗಿದೆ. ಉತ್ತರ …

Read More »

ಪಚ್ಚೆ ನಂಜುಂಡಸ್ವಾಮಿ ಬರಹ – ಬಾಬಾಗೌಡರ ನೆನಪು| ಚಳವಳಿಕಾರನಾದ ಐಎಎಸ್ ಆಕಾಂಕ್ಷಿ

ಧಾರವಾಡ: ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸಿನೊಂದಿಗೆ ಅಧ್ಯಯನ ನಡೆಸುತ್ತಿದ್ದ ವ್ಯಕ್ತಿಯೊಳಗಿದ್ದ ಒಬ್ಬ ಚಳವಳಿಕಾರ ಹಾಗೂ ನಾಯಕ ಹೊರಜಗತ್ತಿಗೆ ಪರಿಚಯಗೊಂಡಿದ್ದೇ ರೈತ ಹೋರಾಟದ ಮೂಲಕ. ಅಂಥ ಒಬ್ಬ ಮೇರು ವ್ಯಕ್ತಿ ರೈತನಾಯಕನಾಗಿ, ಶಾಸಕನಾಗಿ, ಕೇಂದ್ರ ಸಚಿವರಗಿ ರೈತಕುಲಕ್ಕಾಗಿ ಮಾಡಿದ ಕೆಲಸ ಅನನ್ಯ. ಆದರೆ ಜನರ ಕಲ್ಯಾಣಕ್ಕಾಗಿ ಅವರ ಜ್ಞಾನವನ್ನು ಬಳಸಿಕೊಳ್ಳಬೇಕಾಗಿದ್ದ ರಾಜಕೀಯ ಪಕ್ಷಗಳು, ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು ನಿಜಕ್ಕೂ ಬೇಸರ. ಆ ಅಪ್ರತಿಮ ಹೋರಾಟಗಾರ ಬಾಬಾಗೌಡ ಪಾಟೀಲ ಅವರು ಇಂದು ನಮ್ಮೊಂದಿಗೆ …

Read More »

ಸರ್ಕಾರದ ಮಾರ್ಗಸೂಚಿ ವಿಚಾರ-ಅಂಗಡಿ ಮಾಲೀಕರಿಂದ ಆಕ್ರೋಶ

ಧಾರವಾಡ: ಜಿಲ್ಲೆಯ ಜನತೇ ಸರ್ಕಾರದ ಕೊರೊನಾ ಮಾರ್ಗ ಸೂಚಿಗಳ ವಿಷಯದಲ್ಲಿ ಈಗಲೂ ಗೊಂದಲದಲ್ಲಿದ್ದಾರೆ. ನಗರದ ಅಂಗಡಿ ಮಾಲೀಕರು ಪ್ರತಿ ದಿನದಂತೆ ಇವತ್ತು ಅಂಗಡಿಗಳನ್ನು ತೆರೆದಿದ್ದರು. ಆದರೆ ಪೊಲೀಸರು ಬಂದು ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಇದನ್ನು ಕಂಡು ಸರ್ಕಾರದ ವಿರುದ್ಧ ಅಂಗಡಿ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. ಧಾರವಾಡ ಜಿಲ್ಲೆಯ ಪಟ್ಟಣದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ, ಬಟ್ಟೆ, ಪಾತ್ರೆ, ಮೊಬೈಲ್ ಸೇರಿ ಹಲವು ಅಂಗಡಿಗಳನ್ನು ಪೊಲೀಸರು ಬಂದ್ …

Read More »

ಜಿಲ್ಲಾ ಆರೋಗ್ಯ ಇಲಾಖೆ ಉಗ್ರಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಖಾಲಿಯಾಗಿದೆ ಎಂಬ ಮಾಹಿತಿ ಲಭ್ಯ

ಧಾರವಾಡ: ಜಿಲ್ಲಾ ಆರೋಗ್ಯ ಇಲಾಖೆ ಉಗ್ರಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಖಾಲಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆಯ ಉಗ್ರಾಣದಲ್ಲಿ 8,800 ಡೋಸ್ ವ್ಯಾಕ್ಸಿನ್ ಮಾತ್ರ ಇತ್ತು. ಇಂದು ಅವುಗಳನ್ನು ಜಿಲ್ಲೆಯ 74 ಆರೋಗ್ಯ ಇಲಾಖೆಯ ವ್ಯಾಕ್ಸಿನ್ ಕೇಂದ್ರಗಳಿಗೆ ಸಪ್ಲೈ ಮಾಡಲಾಗಿದೆ. ಬೆಳಗಾವಿಯ ರಿಜನಲ್ ಸೆಂಟರ್ ನಿಂದ ಧಾರವಾಡಕ್ಕೆ ವ್ಯಾಕ್ಸಿನ್ ಬಂದರೆ ಮಾತ್ರ ನಾಳೆ ಸಾರ್ವಜನಿಕರಿಗೆ ವ್ಯಾಕ್ಸಿನ್ ಲಭ್ಯವಾಗಲಿದೆ. ಸದ್ಯ ಧಾರವಾಡ ಜಿಲ್ಲೆಗೆ 1,37,380 ಕೋವಿಶೀಲ್ಡ್ ವ್ಯಾಕ್ಸಿನ್, 11,200 ಡೋಸ್ ಕೋವ್ಯಾಕ್ಸಿನ್ …

Read More »

ಶಿವಳ್ಳಿ ಗ್ರಾಮ ಪಂಚಾಯತಿ “ಕೈ” ಪಾಲು..!

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿದಂತಾಗಿದೆ.           ಶಿವಳ್ಳಿ ಗ್ರಾಮದ ಮೂರನೇಯ ವಾರ್ಡಿನಲ್ಲಿ ಜಯ ಗಳಿಸಿದ ವಿಜಯಮಹಾಂತೇಶ ಶಿವಲಿಂಗಯ್ಯ ವಸ್ತ್ರದ ಅವರು ಅಧ್ಯಕ್ಷರಾಗಿಯೂ, ಉಪಾಧ್ಯಕ್ಷರಾಗಿ ಶಂಕರೆವ್ವ ಈಶ್ವರಪ್ಪ ಸಣ್ಣಮುದ್ದಿಯವರು ಅವಿರೋಧವಾಗಿ ಆಯ್ಕೆಯಾದರು.   ಶಿವಳ್ಳಿ ಪಂಚಾಯತಿಯಲ್ಲಿ ಒಟ್ಟು ಒಂಬತ್ತು ಸದಸ್ಯರ ಬಲ ಹೊಂದಿದ್ದು, ಅತೀ ಹೆಚ್ಚು ಸದಸ್ಯರು …

Read More »

ಮಾಜಿ ಸಚಿವ ವಿನಯ ಕುಲಕರ್ಣಿ-ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನ ವಿಸ್ತರಣೆ..!

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಮಾವನವರಾದ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನವನ್ನ ಮತ್ತೆ ಹದಿನಾಲ್ಕು ದಿನಗಳವರೆಗೆ ಮುಂದೂಡಿ ಆದೇಶ ಮಾಡಲಾಗಿದೆ. ನವೆಂಬರ್ 5ರಂದು ಬಂಧನವಾಗಿರುವ ವಿನಯ ಕುಲಕರ್ಣಿ ಹಾಗೂ ಕೆಲವು ದಿನಗಳ ಹಿಂದೆ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಚಂದ್ರಶೇಖರ ಇಂಡಿಯವರನ್ನ ಕಾರಾಗೃಹದಲ್ಲಿ ಇಡಲಾಗಿದ್ದು, ಇಂದು ಮತ್ತೆ 14 ದಿನದ ನ್ಯಾಯಾಂಗ ಬಂಧನವನ್ನ …

Read More »

ಒಬ್ಬರನ್ನ ಬಲಿ ಪಡಿದು ಸತ್ತ ಶ್ವಾನ

    ಚಲಿಸುತ್ತಿದ್ದ ಬೈಕ್​ಗೆ ಶ್ವಾನವೊಂದು ಅಡ್ಡಬಂದ ಪರಿಣಾಮ‌ ಡಿಕ್ಕಿ ಸಂಭವಿಸಿ ಬೈಕ್​ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ. ಧಾರವಾಡದ ಬೆನಕಟ್ಟಿ ಗ್ರಾಮದ ದಿಲ್ ಶಾದ್ ಬಿಸ್ಮಿಲ್ಲಾ ಚಪ್ಪರಬಂಧ್ (43) ಮೃತ ಮಹಿಳೆ. ನಿಗದಿ ಗ್ರಾಮದಿಂದ ಪ್ರಕಾಶ ಎಂಬುವರ ಬೈಕ್​ನಲ್ಲಿ ಧಾರವಾಡಕ್ಕೆ ಮನೆಗೆಲಸಕ್ಕೆಂದು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಬೈಕ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಬೈಕ್ ಡಿಕ್ಕಿ ಹೊಡೆದ …

Read More »

ಮುಕ್ಕಲ್ ಗೊಂದೆ ಜನರಲ್: 28ಗ್ರಾಪಂ ಗಳಲ್ಲಿ 14 ಮಹಿಳಾ ಅಧ್ಯಕ್ಷರೇ ಆಗೋದು..!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ 28 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಪಟ್ಟಣದ ಗುಡ್ ನ್ಯೂಸ್ ಕಾಲೇಜಿನಲ್ಲಿ ನಡೆಯಿತು. ತಾಲೂಕಿನ 28 ಗ್ರಾಮ ಪಂಚಾಯತಿಗಳಿಗೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಮೀಸಲಾತಿ ಆಯ್ಕೆಯಲ್ಲಿ ಮಿಶ್ರಿಕೋಟಿ ಗ್ರಾಮ ಪಂಚಾಯತಿ ಅಧ್ಯಕ್ಷಗಿರಿಗೆ ಮಹಿಳಾ ಎಸ್ಸಿ, ಉಪಾಧ್ಯಕ್ಷ ಸ್ಥಾನಕ್ಕಾಗಿ ಮಹಿಳಾ ಕೆಟಗೇರಿ ‘ಎ’ ಮೀಸಲಾತಿ ದೊರಕಿದೆ. ಇನ್ನೂ ಮುಂದೆ ಮಿಶ್ರಿಕೋಟಿಯಲ್ಲಿ ಮಹಿಳಾ ಮೆಂಬರಗಳು ಅಧಿಕಾರ ನಡೆಸಲಿದ್ದಾರೆ. ಗಂಜಿಗಟ್ಟಿ ಗ್ರಾಮ ಪಂಚಾಯತಿಯಲ್ಲೂ ಮಹಿಳಾ ಸದಸ್ಯರೇ …

Read More »