Breaking News
Home / ಜಿಲ್ಲೆ / ಚಿಕ್ಕ ಬಳ್ಳಾಪುರ

ಚಿಕ್ಕ ಬಳ್ಳಾಪುರ

ರಾಜ್ಯ ಸರ್ಕಾರದಿಂದ ಗ್ರಾಮೀಣಾ ಜನತೆಗೆ ಭರ್ಜರಿ ಸಿಹಿಸುದ್ದಿ

ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರವು ಗ್ರಾಮೀಣಾ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಮಗಳ ಸಶಕ್ತಿಕರಣಕ್ಕೆ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೂ 1.5 ಕೋಟಿ ರೂ. ಹಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೂ 1.5 ಕೋಟಿ ಹಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಅದರ ಜೊತೆಗೆ ಗ್ರಾಮಪಂಚಾಯಿತಳ ಅಭಿವೃದ್ಧಿಗೆ 31 ಸಾವಿರ ಕೋಟಿ ರೂ. ಹಣ …

Read More »

ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್

ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶೀ ಕ್ಷೇತ್ರವೆಂದೇ ಪ್ರತೀತಿಯಾಗಿರೋ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇಗುಲ ಹಾಗೂ ಆವರಣದಲ್ಲಿ ಈ ಬಾರಿ ದೀಪ ಹಚ್ಚುವಂತಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ. ನಾಳೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀಭೋಗನಂದೀಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಸೋಮವಾರದ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಭೀತಿ ಆತಂಕದಿಂದ …

Read More »

ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ಪ್ರವಾಸಿಗರು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ರಾಜಧಾನಿಗೆ ಹತ್ತಿರದಲ್ಲೇ ಇರುವ ಜಲಾಶಯವೊಂದು ಮೈಮನ ತಣಿಸುತ್ತಿದೆ. ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ಪ್ರವಾಸಿಗರು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಕೊರೊನಾಗೆ ಅಧಿಕೃತವಾಗಿ ಇನ್ನೂ ಲಸಿಕೆ ಬಂದಿಲ್ಲ. ಆದರೆ ಜನ ಈಗಾಗಲೇ ಡೆಡ್ಲಿ ವೈರಸ್ ಅನ್ನು ಮರೆತಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಶ್ರೀನಿವಾಸಸಾಗರ ಜಲಾಶಯ. ಇಲ್ಲಿ ಪ್ರವಾಸಿಗರು ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶ್ರೀನಿವಾಸ ಸಾಗರ ಜಲಾಶಯ …

Read More »

ಕೊರೊನಾ ಭೀತಿ ಇದ್ರೂ ಪ್ರವಾಸಿಗರು ಮಾತ್ರ ಮೋಜು ಮಸ್ತಿ ಕಡಿಮೆ ಮಾಡಿಲ್ಲ. ಅನ್​ಲಾಕ್ ಆರಂಭವಾಗುತ್ತಿದ್ದಂತೆ ಫುಲ್ ರಿಲಾಕ್ಸ್ ಮಾಡುತ್ತಿದ್ದಾರೆ.

          ಚಿಕ್ಕಬಳ್ಳಾಪುರ: ಕೊರೊನಾ ಭೀತಿ ಇದ್ರೂ ಪ್ರವಾಸಿಗರು ಮಾತ್ರ ಮೋಜು ಮಸ್ತಿ ಕಡಿಮೆ ಮಾಡಿಲ್ಲ. ಅನ್​ಲಾಕ್ ಆರಂಭವಾಗುತ್ತಿದ್ದಂತೆ ಫುಲ್ ರಿಲಾಕ್ಸ್ ಮಾಡುತ್ತಿದ್ದಾರೆ. ಕೊರೊನಾ ಮರೆತು ತಮ್ಮ ನೆಚ್ಚಿನ ತಾಣಗಳಿಗೆ ಪ್ರವಾಸ ಬೆಳೆಸುತ್ತಿದ್ದಾರೆ. ವೀಕೆಂಡ್​ಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇವರ ಈ ನಿರ್ಲಕ್ಷ್ಯಕ್ಕೆ ಮುಂದೆ ದೊಡ್ಡ ಕಂಟಕವೇ ಎದುರಾಗಬಹುದು. ಹಲವು ತಿಂಗಳು ಮನೆಯಲ್ಲೇ ಕುಳಿತು ಬೇಜಾರಾಗಿ ಪ್ರವಾಸಿ ತಾಣದತ್ತ ಮುಖ ಮಾಡಿರುವ ಪ್ರವಾಸಿಪ್ರವಾಸಿಗರಿಂದ ಆತಂಕ ಎದುರಾಗಿದೆ. …

Read More »

ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದುಬಿದ್ದಿದೆ.

ಚಿಕ್ಕಬಳ್ಳಾಪುರ: ಮನೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ನಡೆದಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದುಬಿದ್ದಿದೆ. ತಂದೆ ರವಿಕುಮಾರ್, ಮಗ ರಾಹುಲ್‌ ಮೃತರು. ಘಟನೆಯಲ್ಲಿ ತಾಯಿ ಮುನಿರಾಜಮ್ಮ, ಮಗಳು ರುಚಿತಾ‌ಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಭಾರಿ ಅನಾಹುತ ನಡೆದಿದೆ. ಮಳೆ ರಭಸಕ್ಕೆ ಮನೆ ಕುಸಿದು ತಂದೆ-ಮಗ ಇಬ್ಬರೂ ಮೃತಪಟ್ಟಿದ್ದು, ತಾಯಿ-ಮಗಳು ಆಸ್ಪತ್ರೆಯಲ್ಲಿ …

Read More »

ನಂದಿ ಗಿರಿಧಾಮ ತೋಟಗಾರಿಕಾ ಇಲಾಖೆಯ ಕೈಜಾರುತ್ತದಾ? ಮುಂದೇನು?

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತ್ಯವ್ಯ ಹೂಡಿದ್ದ ತೋಟಗಾರಿಕೆ ಸಚಿವ ನಾರಾಯಣ ಗೌಡ, ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮರುಳಾದ್ರು. ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮರುಳಾದ ಸಚಿವ ನಾರಾಯಣ ಗೌಡ ರಾತ್ರಿಯೇ ನಂದಿ ಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದ ಸಚಿವರು, ಬೆಳ್ಳಂ‌ಬೆಳಿಗ್ಗೆ ಎದ್ದು ನಂದಿ ಗಿರಿಧಾಮದ ರಸ್ತೆಗಳಲ್ಲಿ ರೌಂಡ್ಸ್ ಹಾಕಿದರು. ಇದೇ ಮೊದಲ‌ ಬಾರಿಗೆ ನಾನು ಸಚಿವನಾದ ನಂತರ ನಂದಿ ಗಿರಿಧಾಮಕ್ಕೆ ಆಗಮಿಸಿದ್ದೇನೆ. …

Read More »

ಅರೆಬೆತ್ತಲೆಯಾಗಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ನಡೆಸಿ ಕೊಲೆ ….?

ಚಿಕ್ಕಬಳ್ಳಾಪುರ: ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾರಕೂರು ಕ್ರಾಸ್ ಬಳಿ ನಡೆದಿದೆ. ಕಾರಕೂರು ಕ್ರಾಸ್ ಬಳಿಯ ನಿರ್ಮಾಣ ಹಂತದ ಬಡವಾಣೆಯ ಕಮಾನು ಗೋಡೆಯ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ವೇಲ್‍ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದ್ದು, ಅರೆಬೆತ್ತಲೆಯಾಗಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ …

Read More »

ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದಲೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದಲೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.ಕೊರೊನಾ ಅನ್‍ಲಾಕ್ ಆದ ನಂತರ ಬೆಳಗ್ಗೆ 08 ಗಂಟೆಯ ನಂತರವಷ್ಟೇ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗಿತ್ತು. ಆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 06 ಗಂಟೆಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ …

Read More »

ಕೊರೊನಾ ರೋಗಿಯಿಂದಲೂ ಹಣ ವಸೂಲಿ- ಸರ್ಕಾರದಿಂದಲೂ ದುಡ್ಡು ಗುಳಂ

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿತರಿಂದಲೂ ಹಣ ಪಡೆದು, ಇತ್ತ ಸರ್ಕಾರಕ್ಕೂ ಬಿಲ್ ಪಾವತಿಸಿ ಎಂದು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ದಾಖಲಾತಿ ಸಲ್ಲಿಸಿದೆ. ಈ ಮೂಲಕ ಎರಡೂ ಕಡೆಯಿಂದ ಹಣ ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದ ಆಸ್ಪತ್ರೆಯ ನಿಜ ಬಣ್ಣ ಬಯಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ. ದಿನೇ ದಿನೇ ಏರುತ್ತಿರೋ ಕೊರೊನಾ ಸೋಂಕಿತರ ಸಂಖ್ಯೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಹೀಗಾಗಿ …

Read More »

ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ :ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಕಾಯ್ದೆಗಳ ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿರೋಧಿಸಿ ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ ಬೆಂಬಲಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ರಾಜ್ಯ ರೈತ ಸಂಘದ ವಿವಿಧ ಬಣಗಳು, ಕೇಂದ್ರಿಯ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ ( ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್), ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ವೇದಿಕೆ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಕನ್ನಡಪರ ಸಂಘಟನೆಗಳು ಸೇರಿ …

Read More »