ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೇ, ಜನರು ಮಾತ್ರ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಭಾನುವಾರದ ದಿನವಾದ ನಾಳೆ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದಾಗಿ, ಮದ್ಯಪ್ರಿಯರು ಮಾತ್ರ ನಾಳೆ ಎಲ್ಲಿ ಎಣ್ಣೆ ಸಿಗೋದಿಲ್ಲವೋ ಎನ್ನುವಂತೆ ಬಾರ್, ವೈನ್ ಶಾಪ್ ಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಸಲು ಮುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೆಡೆ ಆದ್ರೇ.. ಸೋಂಕಿನ ಭೀತಿಯಿಂದ ತಮ್ಮ ಊರುಗಳತ್ತ ಗುಳೇ ಹೊರಡ ಜನರು ಮತ್ತೊಂದೆಡೆ… ಇದ್ಯಾವುದರ ಪರಿವೇ ಇಲ್ಲದೇ ಎಂದಿನಂತೆ ಓಡಾಡುತ್ತಿರುವ ಜನರು ಇದ್ದಾರೆ. ಈ ಎಲ್ಲದರ ನಡುವೆ ನಾಳೆ
ಭಾನುವಾರದ ದಿನವಾಗಿರುವ ಕಾರಣ ಸಂಪೂರ್ಣ ಲಾಕ್ ಡೊನ್ ಇರೋದ್ರಿಂದಾಗಿ, ಮದ್ಯ ಖರೀದಿಯ ಭರಾಟೆ ಜೋರಾಗಿದೆ. ಬಾರ್, ವೈನ್ ಶಾಪ್ ಸೇರಿದಂತೆ ಮದ್ಯದಂಗಡಿಗಳ ಮುಂದೆ ಸಾಲು ಗಟ್ಟಿ ನಿಂತಿರುವ ಎಣ್ಣೆಪ್ರಿಯರು ಕೊರೋನಾ ಭೀತಿಯ ನಡುವೆಯೂ ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ.