ಬೆಂಗಳೂರು: ಇಂದಿನಿಂದ ಲಾಕ್ಡೌನ್ ತೆರವಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ಲಾಕ್ಡೌನ್ ಇದ್ದ ಕಾರಣ ಹೋಟೆಲ್ಗಳಲ್ಲಿ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಇಂದಿನಿಂದ ಗ್ರಾಹಕರಿಗೆ ಟೇಬಲ್ ಸರ್ವೀಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರ್ವಜಕರಿಗೆ ಸೇವೆ ಒದಗಿಸಲು ಹೋಟೆಲ್ಗಳು ಸಿದ್ಧವಾಗಿವೆ. ಹೋಟೇಲ್ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದ್ದು, ಕೈಗಳನ್ನು ಸ್ಯಾನಿಟೈಸ್ ಮಾಡಿ ಗ್ರಾಹಕರು ಒಳಪ್ರವೇಶಿಸಬೇಕು.
ಒಂದು ವಾರದ ಲಾಕ್ಡೌನ್ ಇಂದು ಮುಂಜಾನೆ ಐದು ಗಂಟೆಗೆ ಅಂತ್ಯವಾದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಿದೆ.
ಮಾರುಕಟ್ಟೆಗಳಲ್ಲೂ ವ್ಯಾಪಾರ ಆರಂಭವಾಗಿದೆ. ಮಾಲ್ಗಳಿಗೆ ಜನರ ಭೇಟಿ ಶುರುವಾಗಿದೆ.
https://youtu.be/I1U-UG-NHuk
ಲಾಕ್ಡೌನ್ನಿಂದ ತಮ್ಮ ಗ್ರಾಮಗಳತ್ತ ತೆರಳಿದ್ದ ಜನರು ಮತ್ತೆ ರಾಜಧಾನಿಯತ್ತ ದೌಡಾಯಿಸುತ್ತಿದ್ದು, ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಒಂದು ವಾರದಿಂದ ಶಾಂತವಾಗಿದ್ದ ರಸ್ತೆಗಳು, ಇಂದು ಮತ್ತೆ ವಾಹನಗಳಿಂದ ತುಂಬಿದೆ. ನಾಯಂಡಹಳ್ಳಿ ಜಂಕ್ಷನ್ ಬಳಿ ವಾಹನ ದಟ್ಟಣೆ ಉಂಟಾಗಿದೆ.