Breaking News

ಸ್ಮಾರ್ಟ್‌ ಇಂಡಿಯಾ ಹ್ಯಾಕ್‌ಥಾನ್‌ ಫಿನಾಲೆಗೆ ಆಯ್ಕೆ

Spread the love

ಚಿಕ್ಕೋಡಿ: ನಿಪ್ಪಾಣಿ ವಿ.ಎಸ್‌.ಎಂ. ಸೋಮಶೇಖರ್‌ ಆರ್‌. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಎರಡು ಯೋಜನೆಗಳು ಸ್ಮಾರ್ಟ್‌ ಇಂಡಿಯಾ ಹ್ಯಾಕ್‌ಥಾನ್‌ 2020ರ ಗ್ರ್ಯಾಂಡ್ ‌ಫಿನಾಲೆಗೆ ಆಯ್ಕೆಯಾಗಿವೆ.

ಭಾರತ ಸರಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಹೊಸ ದೆಹಲಿಯ ಎಐಸಿಟಿಇ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಸಸ ಸ ಸ ಸಸಾಫ್ಟ್‌ವೇರ್‌ನ ವಿಶ್ವದ ಅತಿ ದೊಡ್ಡ ಮುಕ್ತ ನಾವಿನ್ಯತೆ ಮಾದರಿ ಸ್ಪರ್ಧೆಯಲ್ಲಿ ವಿಎಸ್‌ಎಂಎಸರ್‌ ಆರ್‌ಕೆಐಟಿ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದ್ದಾರೆ. ಪ್ರೊ| ಮಹಾದೇವ ಹರಕುಡೆ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಾದ ಪ್ರಶಾಂತ ಗುಳಗುಳೆ, ಪವನ ಕೋಕಣೆ, ಹೃಷಿಕೇಶ ಪವಾರ, ವಿಕಾಸ ಹಿರೆಕೊಡಿ ಸಿದ್ಧಪಡಿಸಿದ ಸೂರ್ಯಕಾಂತಿ ಬೀಜಗಳ ಶೆಲ್ಲಿಂಗ್‌ ಯಂತ್ರದ ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆ ಹಾಗೂ ಪ್ರೊ| ವಿದ್ಯಾವತಿ ದೇಶಪಾಂಡೆ ಮಾರ್ಗದರ್ಶನದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ರಫಿಯಾಬೇಗಂ ನದಾಫ್‌, ಪ್ರೇಮಾ ಬೋರಗಲ್ಲೆ, ಪೂಜಾ ಸುತಾರ, ದಿವ್ಯಾ ಕೇಸರಕರ, ಶುಭಾಂಗಿ ನಿಕಂ, ರಿಫತ್‌ನಾಜ್‌ ಅತ್ತಾರ ಸಿದ್ಧಪಡಿಸಿದ ಅಂಗವಿಕಲರಿಗೆ ವೈರ್‌ಲೆಸ್‌ ಹೆಡ್‌ ಗೆಸcರ್‌ ನಿಯಂತ್ರಿತ ಗಾಲಿಕುರ್ಚಿ ಯೋಜನೆ ಅಂತಿಮ ಹಂತಕ್ಕೆ ತಲುಪಿವೆ.

ಈ ಯೋಜನೆಗಳಿಗೆ ಪ್ರೊ| ಮಲ್ಲಿಕಾರ್ಜುನ ಗಣಾಚಾರಿಯವರ ವಿಶೇಷ ಮಾರ್ಗದರ್ಶನ ಲಭಿಸಿದೆ.

ಪ್ರಾಚಾರ್ಯ ಡಾ| ಕೆ.ಬಿ. ಜಗದೀಶಗೌಡ ಮಾತನಾಡಿ, ಗ್ರಾಂಡ್ ‌ ಫಿನಾಲೆ ಪ್ರವೇಶಿಸಿದ ಬೆಳಗಾವಿ ವಲಯದ ನಾನ್‌-ಆಟೊನಾಮಸ್‌ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ವಿಎಸ್‌ಎಂಎಸ್‌ಆರ್‌ಕೆಐಟಿ ಏಕಮೇವ ಮಹಾವಿದ್ಯಾಲಯವಾಗಿದೆ. ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸಿದಲ್ಲಿ ಸಮಾಜಕ್ಕೆ ಬಹಳ ಸಹಕಾರಿಯಾಗಲಿದೆ ಎಂದರು.
ಫಿನಾಲೆ ಆ.1 ರಿಂದ 3ರವರೆಗೆ ನಡೆಯಲಿದ್ದು ಯೋಜನೆಗಳನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಹನ ನಡೆಸುವ ಅವಕಾಶ ಪಡೆಯಲಿದ್ದಾರೆ. ಚೇರಮನ್‌ ಚಂದ್ರಕಾಂತ ಕೋಠಿವಾಲೆ ಮತ್ತು ಆಡಳಿತ ಮಂಡಳಿ, ಸಿಇಓ ಡಾ. ಸಿದ್ಧಗೌಡ ಪಾಟೀಲ, ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.


Spread the love

About Laxminews 24x7

Check Also

ಬಾರದು ಬಪ್ಪದು, ಬಪ್ಪದು ತಪ್ಪದು ಸಚಿವ ಸ್ಥಾನದ ಕುರಿತ ಪ್ರಶ್ನೆಗೆ ಶಾಸಕ ಲಕ್ಷ್ಮಣ್ ಸವದಿ ಅವರು ಈ ರೀತಿ ನಯವಾಗಿ ಉತ್ತರ ನೀಡಿದರು.

Spread the loveಚಿಕ್ಕೋಡಿ: ದೇಶದಲ್ಲಿ ಆರ್​​ಎಸ್​ಎಸ್​ ಬ್ಯಾನ್ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್​ ಖರ್ಗೆ ರಾಜಕೀಯ ಹೇಳಿಕೆ ನೀಡಿರಬಹುದು. ಅದರ ಬಗ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ