Breaking News

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾವಾರು ಬಿಡುಗಡೆಯಾದ ಹಣದ ಲೆಕ್ಕ ಕೊಟ್ಟ ಸರ್ಕಾರ

Spread the love

ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾವಾರು ಬಿಡುಗಡೆ ಮಾಡಲಾದ ಹಣದ ಲೆಕ್ಕವನ್ನು ಸರ್ಕಾರ ಇಂದು ಬಹಿರಂಗಪಡಿಸಿದೆ. ನ್ಯಾಯವಾದಿ ಸುರೇಂದ್ರ ಉಗಾರೆ ಕೊರೊನಾ ಸಂದರ್ಭದಲ್ಲಿ ಖರ್ಚಾದ ಹಣದ ಕುರಿತು ಮಾಹಿತಿ ಕೇಳಿದ್ದರು. ಕೊರೊನಾ ಸಾಮಗ್ರಿ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪ ಮಾಡಿದ್ದವು. ಈ ಹಿನ್ನೆಲೆ ಸರ್ಕಾರ ಇಂದು ಜಿಲ್ಲಾವಾರು ಬಿಡುಗಡೆ ಮಾಡಲಾದ ಹಣದ ಲೆಕ್ಕ ಕೊಟ್ಟಿದೆ.

ಇದುವರೆಗೆ ಸರ್ಕಾರದಿಂದ ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಒಟ್ಟು 163.88 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಅಂದರೆ ಮಾರ್ಚ್​ 14 ರಂದು ಒಟ್ಟು 84.25 ಕೋಟಿ ರೂ.ಬಿಡುಗಡೆ ಮಾಡಿದೆ. ಇದರಲ್ಲಿ ವಸತಿ- ಬಟ್ಟೆ-ಆಹಾರಕ್ಕಾಗಿ 29.16ಕೋಟಿ, ಕ್ವಾರಂಟೀನ್, ಸ್ಯಾಂಪಲ್ ಸಂಗ್ರಹ, ಸ್ಕ್ರೀನಿಂಗ್​​​ಗಾಗಿ 21.25ಕೋಟಿ ಹಾಗೂ ಲ್ಯಾಬ್ ಉಪಕರಣಗಳ ಖರೀದಿಗಾಗಿ 33.83ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

 

ಮೇ 11ರಂದು ಎರಡನೇ ಕಂತಿನಲ್ಲಿ 79.63ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವಲಸೆ ಕಾರ್ಮಿಕರ ತಾತ್ಕಾಲಿಕ ವಸತಿ-ಆಹಾರ-ಬಟ್ಟೆಗಾಗಿ 34.31ಕೋಟಿ ರೂ., ಕ್ವಾರಂಟೀನ್ನ್, ಸ್ವಾಬ್​ ಸಂಗ್ರಹ, ಸ್ಕ್ರೀನಿಂಗ್​ಗಾಗಿ 45.32ಕೋಟಿ ಬಿಡುಗಡೆ ಮಾಡಿಲಾಗಿದೆ ಎಂದು ತಿಳಿಸಲಾಗಿದೆ.

ಪ್ರತಿ ಜಿಲ್ಲೆಗೆ ಬಿಡುಗಡೆಯಾದ ಹಣದ ವಿವರ:

ಜಿಲ್ಲೆ – ಪ್ರಥಮ ಹಂತ – ದ್ವಿತೀಯ ಹಂತ

  • 1) ಬಾಗಲಕೋಟೆ – ₹2.85 ಕೋಟಿ + ₹75 ಲಕ್ಷ
  • 2) ಬಳ್ಳಾರಿ- ₹3 ಕೋಟಿ + ₹1 ಕೋಟಿ
  • 3)ಬೆಳಗಾವಿ- ₹4.37 ಕೋಟಿ + ₹9.20 ಕೋಟಿ
  • 4)ಬೆಂಗಳೂರು ನಗರ- ₹10 ಕೋಟಿ + ₹3 ಕೋಟಿ
  • 5)ಬೆಂಗಳೂರು ಗ್ರಾ- ₹2 ಕೋಟಿ + ₹2.65 ಕೋಟಿ
  • 6)ಬೀದರ – ₹2.5ಕೋಟಿ + ₹4 ಕೋಟಿ
  • 7)ಚಾಮರಾಜನಗರ- ₹2.74 ಕೋಟಿ + ₹60ಲಕ್ಷ
  • 8)ಚಿಕ್ಕಮಗಳೂರು- ₹3.13ಕೋಟಿ + ₹3 ಕೋಟಿ
  • 9)ಧಾರವಾಡ- ₹2.49ಕೋಟಿ + ₹4.70ಕೋಟಿ
  • 10)ಗದಗ – ₹85ಲಕ್ಷ + 93ಲಕ್ಷ
  • 11)ಹಾಸನ- ₹50 ಲಕ್ಷ + ₹2 ಕೋಟಿ
  • 12)ಹಾವೇರಿ- ₹4.5 ಕೋಟಿ + ₹60 ಲಕ್ಷ
  • 13)ಕಲಬುರಗಿ- ₹9.5 ಕೋಟಿ + ₹7.5 ಕೋಟಿ
  • 14)ಉ.ಕನ್ನಡ- ₹5 ಕೋಟಿ + ₹3 ಕೋಟಿ
  • 15)ಕೊಲಾರ- ₹15 ಲಕ್ಷ +₹1 ಕೋಟಿ
  • 16)ಕೊಪ್ಪಳ- ₹85ಲಕ್ಷ + ₹75ಲಕ್ಷ
  • 17)ಕೊಡಗು- ₹8.21 ಕೋಟಿ
  • 18)ಮಂಡ್ಯ- ₹75 ಲಕ್ಷ + ₹50 ಲಕ್ಷ
  • 19)ದ.ಕನ್ನಡ- ₹2.90 ಕೋಟಿ+ ₹8 ಕೋಟಿ
  • 20)ರಾಯಚೂರು- ₹35 ಲಕ್ಷ + ₹4.5 ಕೋಟಿ
  • 21)ರಾಮನಗರ- ₹3.42 ಕೋಟಿ + ₹1 ಕೋಟಿ
  • 22)ಶಿವಮೊಗ್ಗ- ₹1.80 ಕೋಟಿ + ₹3.2 ಕೋಟಿ
  • 23)ತುಮಕೂರು- ₹5 ಕೋಟಿ +₹3 ಕೋಟಿ
  • 24)ಉಡುಪಿ- ₹3.38 ಕೋಟಿ + ₹90ಲಕ್ಷ
  • 25)ವಿಜಯಪುರ- ₹3ಕೋಟಿ+ ₹3 ಕೋಟಿ
  • 26)ಯಾದಗಿರಿ- ₹1 ಕೋಟಿ + ₹55ಲಕ್ಷ
  • ಒಟ್ಟು = ₹84.25 ಕೋಟಿ + ₹79.63ಕೋಟಿ ಬಿಡುಗಡೆಯಾಗಿದೆ.

Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ