ಬೆಂಗಳೂರು, ಜೂ.11- ಯಾವುದೇ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಬಾರದು ಎಂದು ಶಿಕ್ಷಣ ಇಲಾಖೆ ಒಂದೂವರೆ ತಿಂಗಳ ಹಿಂದೆಯೇ ಆದೇಶ ಹೊರಡಿಸಿದೆ.
ಈವರೆಗೂ ಯಾವ ಶಾಲೆಯ ವಿರುದ್ಧವೂ ಪೋಷಕರು ದೂರು ನೀಡಿಲ್ಲ. ಒಂದು ವೇಳೆ ದೂರು ಕೇಳಿ ಬಂದಿದ್ದೇಯಾದರೆ ಸರ್ಕಾರ ಮುಲಾಜಿಲ್ಲದೆ ಕ್ರಮ ಜರುಗಿಸಲಿದೆ ಎಂದು ಹೇಳಿದರು.
ಸಮವಸ್ತ್ರದ ಜೊತೆಯಲ್ಲಿ ಮಾಸ್ಕ್‍ಗಳನ್ನು ಖರೀದಿ ಮಾಡಬೇಕೆಂದು ಕೆಲವು ಶಾಲೆಗಳು ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಅವರು, ಡೆಲ್ಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಈ ರೀತಿ ಒತ್ತಡ ಹೇರಿದ ದೂರು ಬಂದಿತ್ತು.
ಅದಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ. ಯಾವುದೇ ಶಾಲೆಗಳು ಬಲವಂತವಾಗಿ ಮಾಸ್ಕ್ ಮಾರಾಟ ಮಾಡಲು ಪ್ರಯತ್ನಿಸಿದರೆ ಪೋಲೀಸರಿಗೆ ದೂರು ನೀಡಲಾಗುವುದು. ಈ ಕುರಿತಂತೆ ಶೀಘ್ರವೇ ಸರ್ಕಾರ ಪರಿಷ್ಕøತ ಆದೇಶವೊಂದನ್ನು ಹೊರಡಿಸಲಿದೆ ಎಂದು ತಿಳಿಸಿದರು.
https://youtu.be/r6bH1CgI-Qg