ಅಭಿಮಾನಿಗಳಂದ್ರೆನೇ ಹಾಗೇ, ನೆಚ್ಚಿನ ನಟನಟಿಯರ ಹುಟ್ಟುಹಬ್ಬ ಬರ್ಲಿ, ಸಿನಿಮಾ ರಿಲೀಸ್ ಆಗಲಿ, ಹಬ್ಬದಂತೆ ಆಚರಿಸ್ತಾರೆ, ಅವರನ್ನ ನೋಡಿ ಕಣ್ತುಂಬಿಕೊಳ್ಳೋಕ್ಕೆ ಗಂಟೆಗಟ್ಟಲೇ ಮನೆಮುಂದೆ ಕಾದು ಕೂತಿರ್ತಾರೆ, ಒಮ್ಮೆ ನೇರವಾಗಿ ತಮ್ಮ ನೆಚ್ಚಿನ ಸ್ಟಾರ್ಗಳನ್ನ ಮಾತನಾಡಿಸಿ ಬಿಟ್ರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ, ಅದನ್ನ ಹೊರತುಪಡಿಸಿ ಬೇರೇನನ್ನ ಬಯಸೋದು ಇಲ್ಲ ಅಭಿಮಾನಿಗಳು, ಅದಕ್ಕೆ ಅಭಿಮಾನಿಗಳನ್ನ ದೇವರು ಅಂದ್ರು ಡಾ.ರಾಜ್ ಕುಮಾರ್.
ಇದೀಗ ಅಂತಹ ಒಬ್ಬ ಅಭಿಮಾನಿಯ ಬಗ್ಗೆ ಡಿಂಪಲ್ ಕ್ವೀನ್ ರಚಿತಾರಾಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ರಚ್ಚು ಮೂವರು ಅಭಿಮಾನಿಗಳು ಅವರನ್ನ ನೊಡೋಕ್ಕೆ ಮನೆ ಹತ್ತಿರ ಬಂದಿದ್ರಂತೆ, ಮೂರು ಜನ ಆಟೋ ಡ್ರೈವರ್ ಆಟೋ ಮೇಲೆ ರಚಿತಾ ಅವರ ಫೋಟೋ ಅಂಟಿಸಿ, ಡಿಂಪಲ್ ಎಂದು ದೊಡ್ಡದಾಗಿ ಬರೆದುಕೊಂಡು ,ಆಟೋಗ್ರಾಫ್ ಗಾಗಿ ಕಾಯುತ್ತ ನಿಂತಿದ್ರಂತೆ.
ವಿಷಯ ಗೊತ್ತಾಗುತ್ತಿದ್ದಂತೆ ರಚ್ಚು ಮನೆಯಿಂದ ಹೊರಬಂದು ಆಟೋಡ್ರೈವರ್ ಗೆ ಆಟೋಗ್ರಾಫ್ ನೀಡಿ, ಅವರ ಜೊತೆ ಸೆಲ್ಫಿಗೆ ಪೋಸ್ ನೀಡಿ, ಆಟೋ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.