ಅಥಣಿ: ಲಾಕ್ ಡೌನ್ ದಿಂದ ಅಥಣಿ ತಾಲ್ಲೂಕಿನ ಬಡಕುಟುಂಬದವರು ತೊಂದರೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ ಕೇಳಬೇಕಾದ ಶಾಸಕ ಮಹೇಶ್ ಕುಮಟಳ್ಳಿ ಎಲ್ಲಿಯೂ ಕಾಣುತ್ತಿಲ್ಲ. ಕಾಣೆಯಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಮುಖಂಡ ಗಜಾಕಾಂಗ್ರೆಸ್ ನನ ಮಂಗಸೂಳಿ ಹೇಳಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ, ಬಡಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡುತ್ತಿರುವ ಜನತೆಗೆ, ಶಾಸಕ ಮಹೇಶ್ ಕುಮಟಳ್ಳಿ ಮಾತಿನ ಭರದಲ್ಲಿ ಬಡಕುಟುಂಬಗಳಿಗೆ ನೀಡುತ್ತಿರುವ ಜೀವನಾವಶ್ಯಕ ಸಾಮಗ್ರಿಗಳು ಫೋಟೋ ತೆಗೆದುಕೊಳ್ಳಲು ಫ್ಯಾಷನ್ ಆಗಿದೆ ಎಂಬ ಹೇಳಿಕೆಗೆ, ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಗಸೂಳಿ ತಿರುಗೇಟು ನೀಡಿದ್ದಾರೆ..
ಅಥಣಿ ಶಾಸಕರು ಕಾಣೆಯಾಗಿದ್ದಾರೆ. ಕೋವಿಡ್೧೯ ಹೆದರಿ ಕ್ಷೇತ್ರದ ಜನರನ್ನು ಮರತಿದ್ದಾರೆ, ಅವರೇ ಧೈರ್ಯ ಹೇಳಬೇಕಾಗಿದ್ದ ಅವರು ಕ್ಷೇತ್ರದಲ್ಲಿ ಕಾಣುತ್ತಿಲ್ಲ, ಎಷ್ಟೊಂದು ಜನರು ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಅವರಿಗೂ ಇವರು ಟೀಕಾ ಪ್ರವಾಹ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೊಡುವ ಯೋಗ್ಯತೆ ಇಲ್ಲ ಕೊಡವರನ್ನು ಬಿಡುತ್ತಿಲ್ಲ ಎಂದು ಗಜಾನನ ಮಂಗಸೂಳಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಜನರಿಗೆ ಶಾಸಕರು ಮಾದರಿಯಾಗಬೇಕು. ಕಳೆದ ಕೃಷ್ಣಾ ನದಿ ಪ್ರವಾಹ ಸಮಯದಲ್ಲಿ ನೆರೆ ಸಂತ್ರಸ್ತರಿಗೆ ಯಾವುದೇ ಸಹಾಯ ಮಾಡಲಿಲ್ಲ. ಮಾರಕ ಕೊರೊನಾ ಸಂದರ್ಭದಲ್ಲಿ ಜನರಿಗೆ ಬೆನ್ನೆಲುಬಾಗಿ ನಿಲ್ಲ ಬೇಕಾದವರು ಕಾಣೆಯಾಗಿದ್ದಾರೆ ಎಂದು ಆರೋಪ ಮಾಡಿದರು.