ಬೆಂಗಳೂರು: ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೊಳ್ಳುವ ಮೊದಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದೆ.
ನೌಕರರ ವೇತನ ಹಾಗೂ ಭತ್ಯೆಗಳ ಹೆಚ್ಚಳಕ್ಕೆ ಹಿಂದಿನ ವೇತನ ಆಯೋಗಗಳು ಎರಡು ಹಂತಗಳಲ್ಲಿ ವರದಿ ನೀಡಿವೆ.
ಅದರಂತೆ 7ನೇ ವೇತನ ಆಯೋಗವೂ ಫೆಬ್ರುವರಿ ಅಂತ್ಯದ ಒಳಗೆ ವೇತನ ನಿಗದಿ ಸೌಲಭ್ಯದ (ಫಿಟ್‌ಮೆಂಟ್) ಪ್ರಥಮ ಹಂತದ ವರದಿ ಸಲ್ಲಿಸಬೇಕು. ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ ವೇತನ ಭತ್ಯೆಗಳಿಗೆ ಗರಿಷ್ಠ ಪ್ರಮಾಣದ ಫಿಟ್‌ಮೆಂಟ್ ಸೌಲಭ್ಯ ನೀಡಲು ಶಿಫಾರಸು ಮಾಡಬೇಕು ಎಂದು ಆಯೋಗದ ಅಧ್ಯಕ್ಷ ಸುಧಾಕರ್‌ರಾವ್ ಹಾಗೂ ಸದಸ್ಯರಿಗೆ ಮನವಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾಹಿತಿ ನೀಡಿದರು.