ಬೆಂಗಳೂರು: ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್, ಕಿರಿಯ ಸಹಾಯಕ, ಸ್ವಾಗತಗಾರರು ಹಾಗೂ ದಲಾಯತ್ ಹುದ್ದೆಗಳಿಗೆ ಡಿ.5ರಿಂದ 7ರವರೆಗೆ ಪರೀಕ್ಷೆಗಳು ನಡೆಯಲಿವೆ.
ಡಿ.5ರಂದು ಮಧ್ಯಾಹ್ನ 3.30ರಿಂದ 4.30ರವರೆಗೆ ದಲಾಯತ್ ಹುದ್ದೆಗೆ, 50 ಅಂಕಗಳ ಬಹು ಆಯ್ಕೆ ಮಾದರಿಯ ಪರೀಕ್ಷೆ ನಡೆಯಲಿದೆ.
ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ (100 ಅಂಕಗಳು) 6ರಂದು ಮಧ್ಯಾಹ್ನ 3ರಿಂದ 5ರವರೆಗೆ, ಕಿರಿಯ ಸಹಾಯಕ ಹಾಗೂ ಸ್ವಾಗತಗಾರರ ಹುದ್ದೆಗಳಿಗೆ (100 ಅಂಕಗಳು) 7ರಂದು ಮಧ್ಯಾಹ್ನ 3ರಿಂದ 5ರವರೆಗೆ ಪರೀಕ್ಷೆಗಳು ನಡೆಯಲಿವೆ.
ಅಭ್ಯರ್ಥಿಗಳು ಡಿ.1ರ ಮಧ್ಯಾಹ್ನದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://kea.kar.nic.in ನಲ್ಲಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಬೇಕು ಎಂದು ಕೆಇಎ ಹೇಳಿದೆ.
Laxmi News 24×7