Breaking News

ಉಮೇಶ್ ಕತ್ತಿ ನಿಧನ ಹಿನ್ನೆಲೆ ಅದ್ದೂರಿ ದಸರಾ ಆಚರಣೆ ಇಲ್ಲ : ಹುಕ್ಕೇರಿ ಹಿರೇಮಠ ಶ್ರೀ

Spread the love

ಚಿಕ್ಕೋಡಿ: ಹುಕ್ಕೇರಿ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾಗಿದ್ದ ಉಮೇಶ್ ಕತ್ತಿ (Umesh Katthi) ಅವರು ಅಕಾಲಿಕ ನಿಧನರಾದ ಹಿನ್ನೆಲೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ (Hukkeri Hiremath) ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (Chandrasekhar Shivacharya Mahaswami) ತಿಳಿಸಿದರು.

ಹುಕ್ಕೇರಿ ಹಿರೇಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು (Mysuru) ನಂತರದಲ್ಲಿ ಹುಕ್ಕೇರಿ ಹಿರೇಮಠ ದಸರಾ ಉತ್ಸವ ಉತ್ತರ ಕರ್ನಾಟಕ (UttarKarnataka) ಭಾಗದಲ್ಲಿ ಹೆಸರಾಗಿದೆ. ಪ್ರತಿ ವರ್ಷ ವಿಭಿನ್ನವಾದ ಕಾರ್ಯಕ್ರಮದ ಮೂಲಕ ಹಿರೇಮಠದ ದಸರಾ ಉತ್ಸವ ವೈಶಿಷ್ಟ್ಯ ಹಾಗೂ ಅದ್ದೂರಿಯಾಗಿ ನಡೆದು ಬಂದಿತ್ತು. ದಿವಂಗತ ಉಮೇಶ್ ಕತ್ತಿ ಅವರು ಹಿರೇಮಠದ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಅವರ ನಿಧನದ ಹಿನ್ನೆಲೆ ಸರಳವಾಗಿ ದಸರಾ ಆಚರಣೆಗೆ (Dasara celebration) ನಿರ್ಧರಿಸಲಾಗಿದೆ. 

ಧಾರ್ಮಿಕವಾಗಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರ ನವರಾತ್ರಿ ಉತ್ಸವ ಸರಳವಾಗಿ ಜರುಗಲಿದೆ. ಶ್ರೀ ಮಠದಲ್ಲಿ 108 ವಟುಗಳು, ಪುರೋಹಿತರು ಹಾಗೂ ಭಕ್ತರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿ, ವಿಧಾನಗಳು ಜರುಗಲಿವೆ. ವಿಶೇಷವಾಗಿ ಬ್ರಾಹ್ಮಣ ಹಾಗೂ ವೀರಶೈವ ಪುರೋಹಿತರು ಸೇರಿಕೊಂಡು ಒಂಭತ್ತು ದಿನಗಳ ಕಾಲ ಚಂಡಿಕಾಯಾಗ ನಡೆಸಲಿದ್ದಾರೆ ಎಂದರು.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ