Breaking News

ಹೋಟೆಲ್ ನಲ್ಲಿ ಚಟ್ನಿ ವಿಚಾರಕ್ಕೆ ಕಿರಿಕ್;ಪೊಲೀಸರೆದುರು ಬ್ಲೇಡ್ ನಿಂದ ಕುತ್ತಿಗೆ ಕುಯ್ದ ಯುವಕ

Spread the love

ಹುಬ್ಬಳ್ಳಿ: ಹೊಟೇಲ್‌ ನಲ್ಲಿ ಊಟದ ವಿಷಯವಾಗಿ ಮಾಲಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಓರ್ವನನ್ನು ಠಾಣೆಗೆ ವಿಚಾರಣೆಗೆಂದು ಪೊಲೀಸರ ಬಳಿ ಕರೆದುಕೊಂಡು ಬಂದಾಗ, ಆತ ಕುತ್ತಿಗೆಗೆ ಬ್ಲೇಡ್‌ ನಿಂದ ಕೊಯ್ದುಕೊಂಡು ಬೆದರಿಕೆ ಹಾಕಲು ಮುಂದಾದ ಘಟನೆ ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

 

ಇಲ್ಲಿನ ಗಣೇಶಪೇಟೆ ಮೀನು ಮಾರುಕಟ್ಟೆಯ ರಾಘವೇಂದ್ರ ನಾಯಕ ಎಂಬಾತನೆ ಕುತ್ತಿಗೆಗೆ ಬ್ಲೇಡ್ ಇರಿದುಕೊಂಡವ.

ಈತನು ಗುರುವಾರ ಇಂಡಿ ಪಂಪ್ ವೃತ್ತ ಬಳಿಯ ಬಿರಿಯಾನಿ ಹೌಸ್ ಅಂಗಡಿಯ ಮಾಲಕರೊಂದಿಗೆ ತಿಂಡಿಗೆ ಚಟ್ನಿ ಕೊಡಲಿಲ್ಲವೆಂದು ಜಗಳ ಮಾಡಿಕೊಂಡಿದ್ದಾನೆ. ಆಗ ಪೊಲೀಸರು ಅಂಗಡಿಯ ಮಾಲಕ ಮತ್ತು ರಾಘವೇಂದ್ರನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿದಾಗ, ಒಮ್ಮೇಲೆ ತನ್ನ ಬಳಿಯಿದ್ದ ಬ್ಲೇಡ್‌ ನಿಂದ ಕುತ್ತಿಗೆಗೆ ಕೊಯ್ದುಕೊಂಡಿದ್ದಾನೆ. ಏಕಾಏಕಿ ನಡೆದ ಈ ಘಟನೆಯಿಂದ ಠಾಣೆಯಲ್ಲಿನ ಸಿಬ್ಬಂದಿ ಆತಂಕಗೊಂಡಿದ್ದಾರೆ. ನಂತರ ಅಲ್ಲಿದ್ದವರೆಲ್ಲ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ.

 

22 ವರ್ಷದ ರಾಘವೇಂದ್ರನು ಹಣಕ್ಕಾಗಿ ಆಗಾಗ ತಾಯಿ ಹಾಗೂ ಸ್ನೇಹಿತರ ಬಳಿ ದುಂಬಾಲು ಬೀಳುತ್ತಿದ್ದ. ಕೊಡದಿದ್ದರೆ ಕುತ್ತಿಗೆಗೆ ಬ್ಲೇಡ್‌ನಿಂದ ಕೊಯ್ದುಕೊಂಡು ಬೆದರಿಕೆ ಹಾಕುತ್ತಿದ್ದ. ಹೊಟೇಲ್‌ ಗಳಲ್ಲಿ ತಿಂಡಿ ತಿಂದು ಹಣ ಕೊಡದೆ ಜಗಳ ಮಾಡಿಕೊಳ್ಳುತ್ತಿದ್ದ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ