‘ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ನಟಿ ಸಂಜನಾ ಗಲ್ರಾನಿ. ಡ್ರಗ್ಸ್ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡ ಹಿನ್ನಲೆಯಲ್ಲಿ, ಗಂಡ ಹೆಂಡತಿ ನಾಯಕಿಯ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅದೇ ಸಮಯದಲ್ಲಿ ಬಹುದಿನದ ಗೆಳೆಯ, ಅಜೀಜ್ ಪಾಷಾ ಜೊತೆ ಸಂಜನಾ ಗಲ್ರಾನಿ ಮದುವೆ ಮಾಡಿಕೊಂಡಿದ್ದರು. ಇದರ ಫಲವಾಗಿ ಸಂಜನಾ ಗಲ್ರಾನಿ ಅವರಿಗೆ ಇಂದು, ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷ್ಯವನ್ನು ಸಂಜನಾ ಗಲ್ರಾನಿಗೆ ಡೆಲಿವರಿ ಮಾಡಿಸಿರೋ ಡಾಕ್ಟರ್, ಸಂಜನಾ ಜೊತೆ ಇರುವ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
