Breaking News

ಅನುಚಿತ ವರ್ತನೆ ಮಾಡಿದ ಯುವಕನಿಗೆ ಲಾಠಿ ರುಚಿ ತೋರಿಸಿದ ಲೇಡಿ ಪಿಎಸ್‍ಐ

Spread the love

ರಾಯಚೂರು: ಅನುಚಿತ ವರ್ತನೆ ತೋರಿಸಿ ಓಡಿ ಹೋದ ಯುವಕನನ್ನು ಚೇಸ್ ಮಾಡಿ ಹಿಡಿದ ಲೇಡಿ ಪಿಎಸ್‍ಐ ಲಾಠಿ ರುಚಿ ತೋರಿಸಿದ್ದಾರೆ.

ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಬಂದಿದ್ದರು. ಈ ವೇಳೆ ಸಿರವಾರ ಠಾಣೆ ಪಿಎಸ್‍ಐ ಗೀತಾಂಜಲಿ ಸೇರಿದಂತೆ ಕೆಲ ಪೊಲೀಸರ ಜೊತೆ ಯುವಕ ಅನುಚಿತ ವರ್ತನೆ ತೋರಿದ್ದ. ಅಲ್ಲದೇ ಪೊಲೀಸರ ಲಾಠಿಯನ್ನು ಕಿತ್ತುಕೊಂಡು ಓಡಿಹೋಗಿದ್ದ.

ಓಡಿ ಹೋದ ಯುವಕನನ್ನು ಪೊಲೀಸರು ಚೇಸ್ ಮಾಡಿ ಹಿಡಿದು ಠಾಣೆಗೆ ಎಳೆದೋಯ್ದಿದ್ದಾರೆ. ಜೊತೆಗೆ ಸ್ಥಳದಲ್ಲಿದ್ದ ಪೊಲೀಸರು ಧರ್ಮದೇಟು ನೀಡಿದ್ದಾರೆ. ಸುದೀಪ್ ಆಗಮನ ವೇಳೆ ಅಭಿಮಾನಿಗಳ ನೂಕುನುಗ್ಗುಲು ಉಂಟಾಗಿದ್ದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿಪ್ರಹಾರ ನಡೆಸಿದರು


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ