Breaking News

ವಿಶ್ವದ ನಂ.1 ಚೆಸ್ ಆಟಗಾರನಿಗೆ ಶಾಕ್ ಕೊಟ್ಟ 16ರ ಭಾರತೀಯ ಬಾಲಕ

Spread the love

ನವದೆಹಲಿ: ಭಾರತದ ಯುವ ಗ್ರ್ಯಾಂಡ್‍ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ ಅವರು ಆನ್‍ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‍ಥಿಂಗ್ಸ್ ಮಾಸ್ಟರ್ಸ್‍ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ 1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸೆನ್ ಅವರನ್ನು ದಂಗುಬಡಿಸಿದ್ದಾರೆ.

ಕಾರ್ಲ್‍ಸೆನ್‍ರ ಸತತ ಮೂರು ಗೆಲುವಿನ ಓಟವನ್ನು ನಿಲ್ಲಿಸಲು ಸೋಮವಾರದ ಆರಂಭದಲ್ಲಿ ನಡೆದ ಟಾರ್ರಾಸ್ಚ್ ವಿಭಾಗದ ೮ನೇ ಸುತ್ತಿನ ಆಟದಲ್ಲಿ ಪ್ರಗ್ನಾನಂದ ಅವರು 39 ನಡೆಗಳಲ್ಲಿ ಕಪ್ಪು ಕಾಯಿಗಳೊಂದಿಗೆ ಗೆದ್ದಿದ್ದಾರೆ.

ಭಾರತೀಯ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರು, ಎಂಟು ಸುತ್ತುಗಳ ನಂತರ ಎಂಟು ಅಂಕಗಳೊಂದಿಗೆ ಜಂಟಿ 12ನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಪಂದ್ಯಗಳಲ್ಲಿ ಲೆವ್ ಅರೋನಿಯನ್ ವಿರುದ್ಧ ಗೆಲುವು, ಎರಡು ಡ್ರಾಗಳು ಮತ್ತು ನಾಲ್ಕು ಆಟವನ್ನು ಸೋತಿದ್ದಾರೆ. ಅವರು ಅನೀಶ್ ಗಿರಿ ಮತ್ತು ಕ್ವಾಂಗ್ ಲೀಮ್ ಲೆ ವಿರುದ್ಧ ಡ್ರಾ ಮಾಡಿಕೊಂಡಿದ್ದು, ಎರಿಕ್ ಹ್ಯಾನ್ಸೆನ್, ಡಿಂಗ್ ಲಿರೆನ್, ಜಾನ್-ಕ್ರಿಜ್‍ಸ್ಟೋಫ್ ದುಡಾ ಮತ್ತು ಶಖ್ರಿಯಾರ್ ಮಮೆಡಿಯಾರೋವ್ ವಿರುದ್ಧ ಸೋತಿದ್ದರು. 


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ