Breaking News

ಹೂಕಟ್ಟಿ, ಮಾರಾಟ ಮಾಡ್ತಿದ್ದ ವ್ಯಕ್ತಿಯ ಪುತ್ರಿ ಇದೀಗ ಪಿಎಸ್‌ಐ!

Spread the love

ಕೊಪ್ಪಳ : ಕಡು ಬಡತನದಲ್ಲಿ ಅರಳಿರುವ ಪ್ರತಿಭೆ ಫರೀದಾ ಬೇಗಂ ಎಂಬುವರು ಯುಟ್ಯೂಬ್‌ನಲ್ಲಿ ಪಠ್ಯ ಆಲಿಸುತ್ತಾ, ಹೂಕಟ್ಟುತ್ತಾ, ಮನೆ ಕೆಲಸ ಮಾಡುತ್ತಾ, ಇತ್ತೀಚೆಗೆ ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದಾರೆ.

 

ಹೂಕಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಈ ಕುಟುಂಬದಲ್ಲಿ ಬಡತನದ ಮಧ್ಯೆಯೂ ಛಲಬಿಡದೆ ಪಿಎಸ್‌ಐ ಆಗಿ ಆಯ್ಕೆಯಾಗುವ ಮೂಲಕ ಬೇಗಂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರಿನ ಬಸ್ ನಿಲ್ದಾಣ ಬಳಿ ಹೂವು ಮಾರುವ ಮೌಲಾಹುಸೇನ ಪಟೇಲ್ ಪುತ್ರಿ ಫರೀದಾ ಈ ಸಾಧನೆಯೊಂದಿಗೆ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ. ಜೊತೆಗೆ ತನ್ನ ತಂಗಿಯೂ ಉನ್ನತ ಹುದ್ದೆಗೇರಲು ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಬೇಗಂ ವ್ಯಕ್ತಪಡಿಸಿದ್ದಾರೆ.

ಹೂ ಕಟ್ಟಿ ಮಾರಾಟ ಮಾಡ್ತಿದ್ದ ವ್ಯಕ್ತಿಯ ಪುತ್ರಿ ಇದೀಗ ಪಿಎಸ್‌ಐಮೌಲಾಹುಸೇನ ಅವರದು ತುಂಬು ಕುಟುಂಬ. ಇವರಿಗೆ ಒಟ್ಟು 12 ಜನ ಮಕ್ಕಳು. 5 ಜನ ಗಂಡು ಮಕ್ಕಳು, 7 ಜನ ಹೆಣ್ಮಕ್ಕಳಿದ್ದಾರೆ. ಇಡೀ ಕುಟುಂಬ ಹೂ ಕಟ್ಟಿ ಮಾರುವ ಕೆಲಸ ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮವಾಗಿ ಓದಿ ಉನ್ನತ ಹುದ್ದೆಯಲ್ಲಿರಬೇಕೆಂಬ ಆಸೆ ಮೌಲಾಹುಸೇನ ಅವರದಾಗಿತ್ತು. 7 ತಿಂಗಳ ಹಿಂದಷ್ಟೇ ಮೃತಪಟ್ಟಿರುವ ಮೌಲಾಹುಸೇನ ಅವರ ಈ ಆಸೆಯನ್ನು ಇದೀಗ 9ನೇ ಪುತ್ರಿ ಫರೀದಾ ಬೇಗಂ ಪೂರೈಸಿದ್ದಾಳೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ