Breaking News

ಫೋಟೋಶೂಟ್​ ಹುಚ್ಚಿನಿಂದಾಗಿ ರೈಲ್ವೆ ಹಳಿ ಮೇಲೆ ನಿಂತು ಪ್ರಾಣ ಕಳೆದುಕೊಂಡ ಯುವಕ

Spread the love

ದಾವಣಗೆರೆ: ಫೋಟೋಶೂಟ್​ ಹುಚ್ಚಿನಿಂದಾಗಿ ರೈಲ್ವೆ ಹಳಿ ಮೇಲೆ ನಿಂತು ಫೋಟೋ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ನ ಬಳಿ ಈ ದುರಂತ ಸಂಭವಿಸಿದೆ.ಸಚಿನ್ (16) ಎಂಬಾತ ಸಾವಿಗೀ ಡಾದ ಯುವಕ ಫೋಟೋಶೂಟ್​ಗೆಂದು ಈ ಯುವಕ ಗೆಳೆಯರೊಂದಿಗೆ ಇಲ್ಲಿಗೆ ಬಂದಿದ್ದಾನೆ.ಒಳ್ಳೆಯ ಬ್ಯಾಕ್​ಗ್ರೌಂಡ್​​ ಸಿಗುತ್ತದೆ ಎಂದು ಹಳಿ ಮೇಲೆ ನಿಂತವ ಈಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ. ರೈಲು ಬರುವಾಗ ಹಳಿ ಮೇಲೆ ನಿಂತು ಫೋಟೋ ತೆಗೆದುಕೊಂಡರೆ ಚೆನ್ನಾಗಿ ಕಾಣಿಸುತ್ತದೆ ಎಂದು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾನೆ. ರೈಲು ಪಕ್ಕದ ಹಳಿ ಮೇಲೆ ಸಾಗುತ್ತದೆ ಎಂದುಕೊಂಡಿದ್ದ. ಆದರೆ ರೈಲು ಸಾಗುವ ಹಳಿ ಮೇಲೇ ಆತ ನಿಂತಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.


Spread the love

About Laxminews 24x7

Check Also

ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು

Spread the loveದಾವಣಗೆರೆ/ಬೆಂಗಳೂರು: ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸದಿದ್ದಕ್ಕಾಗಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಮೂವರ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ