ಬೆಳಗಾವಿಯಲ್ಲಿ ಗಡಿ ವಿವಾದದ ಹೆಸರಿನಲ್ಲಿ ಬೆಂಕಿ ಹಚ್ಚುವ ನಾಡದ್ರೋಹಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಿದರೂ ಕೂಡ ಇನ್ನು ಅವರಿಗೆ ಅರಿವು ಬಂದಿಲ್ಲ. ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವ ಎಂಇಎಸ್ ಪುಂಡರು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ಕನ್ನಡ ನಾಮಫಲಕಕ್ಕೆ ಮಸಿ ಬಳೆಯುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಕೆಲಸ ಮಾಡಿದ್ದಾರೆ.
ಹೌದು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಫಲಕಕ್ಕೆ ಎಂಎಇಸ್ ಪುಂಡರು ಮಸಿ ಬಳೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Laxmi News 24×7