Breaking News

ಡಿ.14ಕ್ಕೆ ಡಿಕೆಶಿಗೆ ಎಲ್ಲ ಉತ್ತರ ಕೊಡುತ್ತೇನೆ: ಅವತ್ತು ಬೇಕಾದ್ರೆ ವಾರ್ ಆಗಲಿ: ಡಿಕೆಶಿಗೆ ರಮೇಶ ಜಾರಕಿಹೊಳಿ ಓಪನ್ ಚಾಲೆಂಜ್..!

Spread the love

ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳ್ತಿನಿ. ಬೇಕಾದರೆ ಓಪನ್ ವಾರ್ ಆಗಲಿ. ಫಲಿತಾಂಶದ ದಿನ ಎಲ್ಲದಕ್ಕೂ ತಕ್ಕ ಉತ್ತರ ಕೊಡುತ್ತೇನೆ ಎಂದು ಕನಕಪುರ ಬಂಡೆ ಡಿಕೆ ಶಿವಕುಮಾರ್‍ಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಹಿರಂಗ ಸವಾಲು ಹಾಕಿದ್ದಾರೆ.

ಎಂಎಲ್‍ಸಿ ಚುನಾವಣಾ ರಣಕಣದಲ್ಲಿ ಘಟಾನುಘಟಿ ನಾಯಕರ ಮಧ್ಯ ಮಾತಿನ ಸಮರ ಮುಂದುವರಿದಿದೆ. ಮೊನ್ನೆಯಷ್ಟೇ ರಮೇಶ ಜಾರಕಿಹೊಳಿ ವಿರುದ್ಧ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದರು. ಇದೀಗ ಡಿಕೆಶಿ ವಿರುದ್ಧ ರಮೇಶ ಕಿಡಿಕಾರಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಡಿಕೆಶಿಯ ಯಾವುದೇ ಆರೋಪಗಳಿಗೂ ಈಗ ನಾನು ಉತ್ತರಿಸುವುದಿಲ್ಲ. ಪರಿಷತ್ ಚುನಾವಣೆ ಫಲಿತಾಂಶ ದಿನ ಡಿ.14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಉತ್ತರ ಕೊಡ್ತಿನಿ. ನಾವು ಈಗ ಚುನಾವಣೆ ಮೂಡನಲ್ಲಿ ಇದ್ದೇವೆ. ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ. 1985ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡುತ್ತೇನೆ. ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬ ಎನಿತ್ತು ಎಲ್ಲಾ ಬಹಿರಂಗ ಮಾಡುತ್ತೇನೆ ಎಂದರು.

 

ಇನ್ನು ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲಿದೆ. ದೆಹಲಿ ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ. ಇಲ್ಲವೇ ಇμÉ್ಟೂತ್ತಿಗೆ ನನ್ನನು ಮುಗಿಸಿ ಬಿಡ್ತಿದ್ರು. ಇμÉ್ಟೂತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ರು. ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ ಎಂದರು

 

ಇನ್ನು ಬ್ಲ್ಯಾಕ್ ಮೇಲ್ ಯಾರು ಮಾಡ್ತಾರೆ ಎಂದು 14ನೇ ತಾರೀಕು ಹೇಳುತ್ತೇನೆ. ಅವರು ಈಗ ಇದ್ದ ಎಂಎಲ್ಎ ಉಳಿಸಿಕೊಳ್ಳಿ ಆಮೇಲೆ ನೋಡೊಣ. ಅವತ್ತು ಡಿಕೆಶಿ, ಜಾರಕಿಹೊಳಿ ವಾರ್ ಆಗಲಿ ನೋಡೋಣ ಎಂದು ಸವಾಲು ಹಾಕಿದರು.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ