: ಮಂಡ್ಯ: ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನ ಜನರ ಆತಂಕಕ್ಕೆ ಕಾರಣವಾಗಿದೆ. ಪುನೀತ್ ನಿಧನದ ಬಳಿಕ ಆತಂಕದಿಂದಲೇ ಆಸ್ಪತ್ರೆಯತ್ತ ಜನ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಬರುವ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ 1ಕ್ಕಿಂತ 3 ಪಟ್ಟು ಹೆಚ್ಚಾಗತೊಡಗಿದೆ.
: ಬೆಂಗಳೂರಿನ ಜಯದೇವ, ಮಂಗಳೂರು.. ಸೇರಿದಂತೆ ಮಂಡ್ಯದ ಪ್ರಿಯದರ್ಶಿನಿ ಹಾರ್ಟ್ ಕೇರ್ ಸೆಂಟರ್‌ಗೆ ರೋಗಿಗಳ ದೌಡಾಯಿಸಿದ್ದಾರೆ. ಹೃದ್ರೋಗ ತಜ್ಞ ಡಾ. ಪ್ರಶಾಂತ್ ಬಳಿ ಚಿಕಿತ್ಸೆ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಚಿಕಿತ್ಸೆಗಾಗಿ ಬರುತ್ತಿರುವವರಲ್ಲಿ ಹೆಚ್ಚು ಮಂದಿ ಯುವಜನರು. ಹೃದಯಸಂಬಧಿ ರೋಗಿಗಳ ಪೈಕಿ 70% ಯುವಜನರೇ ಇದ್ದಾರೆ. ಮೊದಲು 40-45 ಜನ ಬರುತ್ತಿದ್ದರು. ಈಗ ಡಿಧೀರ್ ಈ ಸಂಖ್ಯೆ 150 ದಾಟಿದೆ.