Breaking News

ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ.: ಕನ್ಹಯ್ಯಾ ಕುಮಾರ್

Spread the love

ನವದೆಹಲಿ: ಸಿಪಿಎಂ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಜೆಎನ್‍ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯಾ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ “ನಾನು ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ” ಎಂದು ಹೇಳಿದ್ದಾರೆ.

‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ದೃಢವಾಗಿ ನಂಬಿದ್ದೇನೆ. ಆ ಪಕ್ಷದ ಸೋಲನ್ನು ನಾನು ನೋಡುತ್ತೇನೆ. ಬಿಜೆಪಿ ನನ್ನನ್ನು ‘ತುಕ್ಡೆ-ತುಕ್ಡೆ ಗ್ಯಾಂಗ್’ ಎಂದು ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ ‘ತುಕ್ಡೆ-ತುಕ್ಡೆ’, ಹಾಗೂ ನಾನು ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ. ಬಿಜೆಪಿ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸುತ್ತದೆ ಹೊರತು, ಗಾಂಧೀಜಿಯನ್ನಲ್ಲ ಎಂದು ಕಿಡಿ ಕಾರಿದ್ದಾರೆ.

ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಉಲ್ಲೇಖಿಸಿದ ಕನ್ಹಯ್ಯಕುಮಾರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ‘ನಾಥೂರಾಮ್-ಬನಾಯಿ ಜೋಡಿ’ ಎಂದು ಕರೆದರು. ಬಿಜೆಪಿ ಪಕ್ಷದ ಸಿದ್ಧಾಂತ ರಾಷ್ಟ್ರಪಿತನ ವಿರುದ್ಧ ಸಂಪೂರ್ಣ ವಿರುದ್ಧವಾಗಿದೆ ಎಂದರು.

ಇನ್ನು ಇತ್ತೀಚಿಗಷ್ಟೆ ಮಾಧ್ಯಮಗಳ ಎದುರು ಮಾತನಾಡಿದ್ದ ಕನ್ಹಯ್ಯಾ, ಕಾಂಗ್ರೆಸ್ ಇಲ್ಲದೆ ದೇಶ ಉಳಿಯುವುದಿಲ್ಲ ಎಂದಿದ್ದರು. ಈತನ ಹೇಳಿಕೆಗೆ ಎಡರಂಗದ ಪಕ್ಷದ ನಾಯಕರು ಆಕ್ರೋಶ ಹೊರಹಾಕಿದ್ದರು.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ