ಸಮಾಜದ ಸಮಸ್ಯೆ ಸರ್ಕಾರದ ಗಮನಕ್ಕೆ ತರುವಂತಾಗಲಿ/ತನ್ನದೆ ಆದ ಕಾರ್ಯಗಳ ಮೂಲಕ ಎಲ್ಲರ ವಿಶ್ವಾಸ ಗಳಿಸಲಿ/ಲಕ್ಷ್ಮೀ ನ್ಯೂಸ್ ಗೆ ಶುಭ ಹಾರೈಸಿದ ಶಾಸಕ ಸತೀಶ ಜಾರಕಿಹೊಳಿ.
ಜನೇವರಿ 1,2020 ರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ( ವೆಬ್ ಪೇಜ್ ) ಗೆ ಯಮಕನಮರ್ಡಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶುಭ ಹಾರೈಸಿ ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ತೆರೆಯುವ ಕೆಲಸ ಮಾಡಲಿ ಎಂದರು.

ಶನಿವಾರ ದಂದು ಲಕ್ಷ್ಮೀ ನ್ಯೂಸ್ ತಂಡದ ವತಿಯಿಂದ ಮಾಜಿ ಸಚಿವ ಹಾಗೂ ಯಮಕನಮರ್ಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ಲಕ್ಷ್ಮೀ ನ್ಯೂಸ್ ನೊಂದಿಗೆ ಮಾತನಾಡಿದ ಶಾಸಕರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳು ಬಹಳಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ಹಿಸುತ್ತವೆ. ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ. ಆದ್ದರಿಂದ ಸಮಾಜದಲ್ಲಿ ಬೇರು ಬಿಟ್ಟಿರುವ ಸಮಸ್ಯೆಗಳು,ನೊಂದವರ ಪರ ಸುದ್ದಿ ಬಿತ್ತರಿಸುವ ಮೂಲಕ ಸರ್ಕಾರದ ಕಣ್ತೆರೆಸುವ ಕೆಲಸ ಲಕ್ಷ್ಮೀ ನ್ಯೂಸ್ ಮಾಡಲಿ ಎಂದು ಹಾರೈಸಿದರು.

Laxmi News 24×7