ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ವಿವಿಧ ದೇಶಗಳು ತಮ್ಮ ನಾಗರಿಕರ ರಕ್ಷಣೆಗೆ ಮುಂದಾಗಿದೆ. ಕಾಬೂಲ್ನಿಂದ ಹೊರಡುತ್ತಿದ್ದ ವಿಮಾನಗಳನ್ನು ಹತ್ತಲು ಜನರ ದಂಡೇ ಹರಿದು ಬರ್ತಿದ್ದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.
ಕಾಬೂಲ್ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನದಲ್ಲಿ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಎಲ್ಲಾ ನಾಗರಿಕ ವಿಮಾನಗಳನ್ನು ಸ್ಥಗಿತಗೊಳೊಸಲಾಗಿದೆ. ಇದರಿಂದ ಹತಾಶರಾಗಿದ್ದ ಇಬ್ಬರು ಪ್ರಯಾಣಿಕರು ರನ್ವೇನಿಂದ ಟೇಕಾಫ್ ಆಗುತ್ತಿದ್ದ ಮಿಲಿಟರಿ ವಿಮಾನದ ಚಕ್ರವನ್ನು ಹಿಡಿದುಕೊಂಡು ಹಾರಿದ್ದಾರೆ.
ಮಿಲಿಟರಿ ವಿಮಾನವು ಆಗಸದಲ್ಲಿ ಹಾರಾಟ ಆರಂಭಿಸುತ್ತಿದ್ದಂತೆಯೇ ಇಬ್ಬರೂ ಆಯತಪ್ಪಿ ಬಿದ್ದಿದ್ದು ಎದೆ ಝಲ್ ಎನ್ನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಯತಪ್ಪಿ ಬಿದ್ದಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾಬೂಲ್ನಿಂದ ತನ್ನ ಸಿಬ್ಬಂದಿ ಹಾಗೂ ನಾಗರಿಕರನ್ನು ಸಾಗಿಸುತ್ತಿದ್ದ ಅಮೆರಿಕ ವಾಯುಪಡೆ ವಿಮಾನದಿಂದ ಬಿದ್ದು ಇವರಿಬ್ಬರು ಸಾವನ್ನಪ್ಪಿದ್ದಾರೆ.
Laxmi News 24×7