Breaking News

ಪ್ರಿಯಕರ ತೊಡೆಯ ಮೇಲೆ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ

Spread the love

ವಿಜಯಪುರ : ಮದುವೆಯಾದ್ದರೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹೆಣವಾಗಿ ಬಿದ್ದಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ.

ಗಂಗೂರು ಗ್ರಾಮದ ರೇಣುಕಾ ಝಳಕಿ(36) ಮೃತ ಮಹಿಳೆ.

ರೇಣುಕಾ ಹಾಗೂ ಹಡಲಗೇರಿ ಗ್ರಾಮದ 40ವರ್ಷದ ಬಸವರಾಜ್ ಕಿಲಾರಹಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ರೇಣುಕಾಗೆ 3 ಮಕ್ಕಳು, ಬಸವರಾಜ್ ಗೆ 6 ಮಕ್ಕಳು, ಇಬ್ಬರಿಗೂ ಮದುವೆಯಾಗಿದ್ದರೂ ಅನೈತಿಕ‌ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ನಿನ್ನೆ ಇಬ್ಬರೂ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಬಸವರಾಜ್, ಕಡಿಮೆ ವಿಷ ಸೇವಿಸಿದ್ದ. ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೇ ಅಸ್ವಸ್ಥಗೊಂಡು ಒದ್ದಾಡಿದ್ದಾಳೆ.

ಪ್ರಿಯಕರ ಬಸವರಾಜ್ ಆಕೆಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ. ಸ್ಥಳದಲ್ಲಿದ್ದ ಕುರಿಗಾಯಿಗಳು ಇದನ್ನ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ರೇಣುಕಾ ಸಾವನ್ನಪ್ಪಿದ ಬಳಿಕ ಬಸವರಾಜ್​​ನನ್ನು ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೇಣುಕಾ ಪತಿ ಅಶೋಕ ದುಡಿಯಲು ಕೇರಳಕ್ಕೆ ಗುಳೆ ಹೋಗಿದ್ದ ಅಂತ ತಿಳಿದುಬಂದಿದೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ

Spread the loveಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧ ಕಡೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ