Breaking News

-ಅನಾಥವಾಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆ,ಭೀಮ್ಸ್ ಈಗ ಮರು ಜೀವ

Spread the love

ಬೆಳಗಾವಿ-ಅನಾಥವಾಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆ,ಭೀಮ್ಸ್ ಈಗ ಮರು ಜೀವ ಪಡೆದುಕೊಂಂಡಿದೆ,ಎಂದಿಗೂ ಪಿಪಿಇ ಕಿಟ್ ಧರಿಸದ,ಕೋವೀಡ್ ವಾರ್ಡು ಎಲ್ಲಿದೆ ಅಂತಾ ಕಣ್ಣೆತ್ತಿಯೂ ನೋಡದ ಭೀಮ್ಸ್ ಅಧಿಕಾರಿಗಳು ಇವತ್ತು ಪಿಪಿಇ ಕಿಟ್ ಧರಿಸಿ ಭೀಮ್ಸ್ ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕಿದ್ದಾರೆ.

ಭೀಮ್ಸ್ ಪ್ರಭಾರಿ ನಿರ್ದೇಶಕ,ಉಮೇಶ ಕುಲಕರ್ಣಿ,ಅಡಳಿತಾಧಿಕಾರಿ ಸಯೀದಾ ಆಫ್ರೀನ್ ಬಳ್ಳಾರಿ,ಡಿಸ್ಟಿಕ್ ಸರ್ಜನ್ ಡಾ. ಸುಧಾಕರ,ಮೆಡಿಕಲ್ ಸುಪ್ರಿಡೆಂಟ್ ದಂಡಗಿ ಸೇರಿದಂತೆ ಬಹುತೇಕ ಭೀಮ್ಸ್ ಆಡಳಿತ ಮಂಡಳಿಯೇ ಇವತ್ತು ಭೀಮ್ಸ್ ಆಸ್ಪತ್ರೆಯಲ್ಲಿ ಹೆಜ್ಜೆ ಇಟ್ಟಿದೆ.

ಸರ್ಕಾರ ಭೀಮ್ಸ್ ಆಡಳಿತ ವ್ಯೆವಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳಲು, ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮಲನ್ ಆದಿತ್ಯ ಬಿಸ್ವಾಸ,ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಿದ ಬೆನ್ನಲ್ಲಿಯೇ ಭೀಮ್ಸ್ ವ್ಯೆವಸ್ಥೆಗೆ ಬಿಸಿ ಮುಟ್ಟಿದೆ.

ವಿಶೇಷ ಅಧಿಕಾರಿಯಾಗಿರುವ ಬಿಸ್ವಾಸ್ ಅವರು ನಾಳೆ ಸೋಮವಾರ ಭೀಮ್ಸ್ ವ್ಯೆವಸ್ಥೆಯನ್ನು ಪರಶೀಲಿಸುವ ಸಾಧ್ಯತೆ ಇರುವದರಿಂದ,ಇವತ್ತು ಭಾನುವಾರ ಇದ್ದರೂ ಸಹ ಭೀಮ್ಸ್ ಅಧಿಕಾರಿಗಳ ತಂಡ ಆಸ್ಪತ್ರೆಯಲ್ಲಿ ಪರೇಡ್ ಮಾಡಿದ್ದಾರೆ.ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

 


Spread the love

About Laxminews 24x7

Check Also

ಕಬ್ಬಿನ ಬಿಲ್ ಬಾಕಿಗಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಎದುರು ರೈತ ಪ್ರತಿಭಟನೆ

Spread the loveಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ