ಬೆಳಗಾವಿ: ಮಾಹಾಮಾರಿ ಕೊರೊನಾ ಸೋಂಕಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಇಂಥಹ ಪರಿಸ್ಥಿತಿಯಲ್ಲಿಯೂ ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಬಣ್ಣಿಸಿದರು.
ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾ ಭವನದಲ್ಲಿ ನಿಯತಿ ಫೌಂಡೇಶನ್ ಹಾಗೂ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ ಪತ್ರಕರ್ತರಿಗೆ ಮಾಸ್ಕ್ ವಿತರಿಸಿ ಬಳಿಕ ಮಾತನಾಡಿದರು.
ಮಾರಕ ಕೊರೊನಾ ಸೋಂಕು ಭೀತಿ ದಿನದಿಂದ ದಿನಕ್ಕೆ ಹೆಚ್ಚುತಲಿದೆ. ಇಂತಹ ಸಂದರ್ಭದಲ್ಲಿ ವೈದ್ಯರು, ಪೊಲೀಸ್, ಸೇನೆ ಹಾಗೂ ಪತ್ರಕರ್ತರು ತಮ್ಮ ಜೀವವನ್ನು ಲೆಕ್ಕಿಸದೇ ಸದಾಕಾಲ ಕಾರ್ಯ ಮಾಡುತ್ತಿರುವುದು ನಮ್ಮ ಜವಾಬ್ದಾರಿ ಜತೆಗೆ ದೇಶ ಪ್ರೇಮವನ್ನು ಎತ್ತಿ ತೋರಿಸುತ್ತದೆ. ಈ ಹಿನ್ನೆಲೆ ಪತ್ರಕರ್ತರ ಹಿತಕ್ಕಾಗಿ
ಮಾಸ್ಕ್ ವಿತರಿಸಲಾಗುತ್ತಿದೆ ಎಂದರು.

ಬೆಳಗಾವಿ ಪತ್ರಕರ್ತ ಸಂಘದ ಕಾರ್ಯಾಧ್ಯಕ್ಷರಾದ ಕುಂತಿನಾಥ ಕಲಮನಿ ಹಾಗೂ ಮಲ್ಲಿಕಾರ್ಜುನ ಮುಗಳಿ ಮಾತನಾಡಿದರು.

ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಕೋಶ್ಯಾಧ್ಯಕ್ಷ ರಾಯಣ್ಣ.ಆರ್.ಸಿ., ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ಕೀರ್ತಿ ಕಾಸರಗೂಡು, ಸುನಿತಾ ದೇಸಾಯಿ, ನಾಗರಾಜ್ ಎಚ್.ವಿ., ಸುಬಾನಿ ಮುಲ್ಲಾ, ಗಜು ಮುಚ್ಚಂಡಿಕರ, ವಿಜಯ ಮೊಹಿತೆ, ವಿಶ್ವನಾಥ ದೇಸಾಯಿ, ಬೈರುಬಾ ಕಾಂಬಳೆ, ಆಶಿಶ್, ಪಾರೀಶ ಬೊಸಲೆ, ಅಶೋಕ ಮಗದುಮ್ಮ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Laxmi News 24×7