Breaking News

ಕರೊನಾ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲು ಎರಡು ಪ್ರಮುಖ ಕಾರಣ ನೀಡಿದ ದೆಹಲಿ ಏಮ್ಸ್​​ ನಿರ್ದೇಶಕ

Spread the love

ನವದೆಹಲಿ: ದೇಶದಲ್ಲಿ ಕರೊನಾವೈರಸ್​​ನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ದೆಹಲಿಯ ಏಮ್ಸ್​ ವೈದ್ಯರು ಕಂಡುಕೊಂಡಿದ್ದಾರೆ.

ಏಮ್ಸ್​ ನ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಹೇಳುವ ಪ್ರಕಾರ ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಕಡಿಮೆಯಾಗಿದೆಯಂದು ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಹಾಗೂ ರೂಪಾಂತರಗೊಂಡಿರುವ ಕರೊನಾವೈರಸ್​​ನ ಆರ್ಭಟದಿಂದ ಇವತ್ತು ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಡಿಸೆಂಬರ್​ನಿಂದ ಏಪ್ರಿಲ್​ವರೆಗೆ ಹಬ್ಬ, ಜಾತ್ರೆ, ಉತ್ಸವಗಳು ಹೆಚ್ಚು ನಡೆಯುತ್ತವೆ. ಅಲ್ಲದೇ ಪಂಚರಾಜ್ಯ ಚುನಾವಣೆಯೂ ಈಗಲೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೊರನಾವೈರಸ್​ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದಕ್ಕೆ ಸೋಂಕು ವ್ಯಾಪಿಸಿದೆ. ಇದರ ಬಗ್ಗೆ ಮೊದಲೇ ಎಚ್ಚರವಹಿಸಿದ್ದರೇ ಇಂದು ಇಷ್ಟು ಪ್ರಮಾಣದಲ್ಲಿ ಸೋಂಕು ಹರಡುತ್ತಿರಲಿಲ್ಲ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ. ಲಸಿಕಾಕರಣದ ವೇಳೆಯೇ ಜನ ನಿರ್ಲಕ್ಷ್ಯ ಮಾಡಿದರು ಎಂದು ಹೇಳಲಾಗಿದೆ

ಕಳೆದ ಹತ್ತು ದಿನಗಳಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ದೇಶದಲ್ಲಿ 1 ಮಿಲಿಯನ್​ ಮೀರಿದೆ. ಇದು ಒಂದನೇ ಅಲೆಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಅಲ್ಲದೇ ಸರಾಸರಿ ಪ್ರತಿದಿನ 1 ಲಕ್ಷ ಪಾಸಿಟಿವ್ ಕಂಡು ಬಂದಿವೆ. ಮಹಾರಾಷ್ಟ್ರ, ಚತ್ತೀಸ್​ಗಢ, ಪಂಜಾಬ್, ದೆಹಲಿ ಹಾಗೂ ಕರ್ನಾಟಕದಲ್ಲಿ ವೈರಸ್ ಸೋಂಕು ಹೆಚ್ಚು ಕಂಡು ಬರುತ್ತಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ