ಬೆಳಗಾವಿ- ಕೋಟ್ಯಾಂತರ ರೂ ವಂಚನೆ ಪ್ರಕರಣಕ್ಕೆ ಸಮಂಧಿಸಿದಂತೆ ಸಿಐಡಿ ಪೋಲೀಸರು,ತಂದೆ,ಮತ್ತು ಮಗ,ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬೆಳಗಾವಿಯ ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಕೋಟ್ಯಾಂತರ ರೂ ವಂಚಿಸಿದ ಆರೋಪದ ಮೇಲೆ ಆಝಂ ನಗರದ ನಿವಾಸಿಗಳಾದ ತಂದೆ ಮತ್ತು ಮಗನ ಮೇಲೆ ಪ್ರಕರಣ ದಾಖಲಾಗಿತ್ತು, ಪ್ರಕರಣದ ವಿಚಾರಣೆ ನಡೆಸಿರು ಸಿಐಡಿ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಕಟ್ಟಡ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಆಝಂ ನಗರದ ತಂದೆ ಮಹ್ಮದ ಅಬ್ಬಾಸ್ ಹುಸೇನ್ ಶೇಖ್,ಮತ್ತು ಮಗ ಮಹ್ಮದ ಶಾಹೀದ್ ಮಹ್ಮದ ಅಬ್ಬಾಸ್ ಶೇಖ್ ಇಬ್ಬರು ವಂಚನೆ ಮಾಡಿರುವ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಇಬ್ಬರನ್ನು ಬಂಧಿಸಿರುವ ಬೆಳಗಾವಿಯ ಸಿಐಡಿ ಪೋಲೀಸರು ವಿಚಾರಣೆ ನಡೆಸಿದ್ದಾರೆ.
Laxmi News 24×7