Breaking News
Home / Uncategorized / ಫೆ. 22ರಿಂದ 6, 7, 8ನೇ ತರಗತಿ ಆರಂಭ? ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ

ಫೆ. 22ರಿಂದ 6, 7, 8ನೇ ತರಗತಿ ಆರಂಭ? ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ

Spread the love

ಬೆಂಗಳೂರು(ಫೆ. 16): ಮುಂದಿನ ವಾರ ಆರರಿಂದ ಎಂಟನೇ ತರಗತಿಗಳನ್ನ ಪ್ರಾರಂಭಿಸುವ ಸಾಧ್ಯತೆ ಇದೆ. ಇಂದು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಫೆ. 22ರಿಂದ ಈ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿವೆ. ಆದರೆ, ಒಂದರಿಂದ ಐದರವರೆಗಿನ ತರಗತಿಗಳು ಪ್ರಾರಂಭವಾಗುವ ಸಾಧ್ಯತೆ ಇಲ್ಲ. ಈ ಪ್ರಾಥಮಿಕ ಹಂತದ ತರಗತಿಗಳನ್ನ ಸದ್ಯಕ್ಕೆ ಆರಂಭಿಸುವುದು ಬೇಡ ಎಂದು ತಜ್ಞರು ಈ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ಧಾರೆ. ಆದರೆ, ಐದರವರೆಗಿನ ತರಗತಿಯನ್ನ ವಿದ್ಯಾಗಮದ ಪ್ರಕಾರ ನಡೆಸುವುದಕ್ಕೆ ಸಮ್ಮತಿ ನೀಡಲಾಗಿದೆ. ವಿದ್ಯಾಗಮ ತರಗತಿಗಳಲ್ಲಿನ ಬೆಳವಣಿಗೆ ನೋಡಿಕೊಂಡು ಐದರವರೆಗಿನ ತರಗತಿಗಳನ್ನ ಪೂರ್ಣ ಪ್ರಮಾಣದಲ್ಲಿ ನಡೆಸುವ ಬಗ್ಗೆ ನಂತರದಲ್ಲಿ ತೀರ್ಮಾನವಾಗುವ ನಿರೀಕ್ಷೆ ಇದೆ.

ಈಗಾಗಲೇ 9ರಿಂದ ದ್ವಿತೀಯ ಪಿಯುಸಿವರೆಗಿನ ತರಗತಿಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿವೆ. ಇಲ್ಲಿ ಯಾವುದೇ ಕೋವಿಡ್ ಅವಘಡಗಳು ನಡೆದಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಸುರಕ್ಷಿತವಾಗಿ ತರಗತಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಂಟರವರೆಗಿನ ತರಗತಿಗಳನ್ನ ನಡೆಸಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಬಗ್ಗೆ ಇಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದ್ದಾರೆ.


Spread the love

About Laxminews 24x7

Check Also

ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಲ್ಲ ಎಂದ ಸಿಎಂ

Spread the loveಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಸರ್ಕಾರ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ