Breaking News

ಕನ್ನಡ ಬಿಗ್‌ಬಾಸ್-8ರಲ್ಲಿ ಭಾಗವಹಿಸೋ ಸೆಲೆಬ್ರಿಟಿಗಳು ಯಾರ‌್ಯಾರು? ಇಲ್ಲಿದೆ ವಿವರ.

Spread the love

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ 8ನೇ ಸೀಸನ್‌ನ ಪ್ರಸಾರಕ್ಕೆ ನಟ ಕಿಚ್ಚ ಸುದೀಪ್ ಅವರು ದಿನಾಂಕವನ್ನು ಈಗಾಗಲೇ ನಿಗದಿಪಡಿಸಿದ್ದು, ಅದರಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು ಯಾರು ಎಂಬ ಕುರಿತು ಕುತೂಹಲ ಮೂಡಿದೆ.

ಜ್ಯೋತಿಷಿಯ ವೇಷದಲ್ಲಿರುವ ಸುದೀಪ್ ಬಳಿ ನಟ ಸುದೀಪ್ ಬಂದು ಬಿಗ್‌ಬಾಸ್ ಯಾವಾಗ ಶುರುವಾಗುತ್ತೆ ಎಂದು ಕೇಳುವ, ಅದಕ್ಕೆ ಜ್ಯೋತಿಷಿ ‘ಫೆ. 28ಕ್ಕೆ’ ಎಂದು ಹೇಳುವ ಪ್ರೋಮೋ ಈಗಾಗಲೇ ಹಿಟ್ ಆಗಿದೆ. ಅದರ ಬೆನ್ನಿಗೇ ಈ ಸಲದ ಬಿಗ್‌ಬಾಸ್‌ನಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ತೀವ್ರಗೊಳ್ಳುತ್ತಿದೆ. 

ಕೆಲವು ದಿನಗಳ ಹಿಂದೆಯೇ ರವಿಶಂಕರ್‌ಗೌಡ, ಅನಿರುದ್ಧ, ವಿನಯಾ ಪ್ರಸಾದ್ ಮುಂತಾದವರ ಹೆಸರು ಕೇಳಿಬಂದಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ವಿಷಯವನ್ನು ಅವರೆಲ್ಲರೂ ನಿರಾಕರಿಸಿದ್ದರು. ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಮತ್ತು ಸುಕೃತ ನಾಗ್, ಸುನಿಲ್ ರಾವ್, ಸರಿಗಮಪ ಖ್ಯಾತಿಯ ಗಾಯಕ ಹನುಮಂತ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಸೇರಿದಂತೆ ಹಲವರು ಹೆಸರುಗಳು ಕೇಳಿಬರುತ್ತಿದೆ. ಫೆ. 28ರಂದು ಸಂಜೆ 6 ಗಂಟೆಗೆ ಬಿಗ್‌ಬಾಸ್ ಪ್ರಾರಂಭವಾಲಿದ್ದು, ಈ ಸೀಸನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಅಧಿಕೃತವಾಗಿ ಪರಿಚಯಿಸಲಾಗುತ್ತದೆ. ನಂತರ ಸೋಮವಾರದಿಂದ ಶುಕ್ರವಾರ ಪ್ರತಿ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ