Breaking News
Home / Uncategorized / ಕತ್ತಲು ಬೆಳಕಿನ ಆಟದಲ್ಲಿ ಶ್ಯಾಡೊ ಹುಡುಕಾಟ

ಕತ್ತಲು ಬೆಳಕಿನ ಆಟದಲ್ಲಿ ಶ್ಯಾಡೊ ಹುಡುಕಾಟ

Spread the love

ಮಾಸ್‌ ಆಡಿಯನ್ಸ್‌ನ ಸಿನಿಮಾ ಥಿಯೇಟರ್‌ನತ್ತ ಆಕರ್ಷಿಸಲು ಮುಂದಾಗಿರುವ ಸಿನಿಮಾ ಮಂದಿ ಒಂದರ ಹಿಂದೊಂದು ಮಾಸ್‌ ಕಂಟೆಂಟ್‌ ಸಿನಿಮಾಗಳನ್ನ ಸಿನಿಪ್ರಿಯರ ಮುಂದೆ ತರುತ್ತಿದ್ದಾರೆ. ಈ ವಾರ ಕೂಡ ಅಂಥದ್ದೇ ಚಿತ್ರ “ಶ್ಯಾಡೊ’ ತೆರೆಗೆ ಬಂದಿದೆ.

ಸುಮಾರು ಎರಡು ವರ್ಷದಿಂದ ವಿನೋದ್‌ ಪ್ರಭಾಕರ್‌ ಸಿನಿಮಾಗಳನ್ನ ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡಿದ್ದ ಆಯಕ್ಷನ್‌ ಪ್ರಿಯರ ಮುಂದೆ, ವರ್ಷದ ಆರಂಭದಲ್ಲಿಯೇ “ಶ್ಯಾಡೊ’ ಎಂಬ ಆಯಕ್ಷನ್‌ – ಥ್ರಿಲ್ಲರ್‌ ಸಿನಿಮಾ ಬಂದಿದೆ.

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ, ಇದ್ದಕ್ಕಿದ್ದಂತೆ ಪೊಲೀಸ್‌ ಸ್ಟೇಷನ್‌ಗೆ ಬರುವ ಕಾಮನ್‌ಮ್ಯಾನ್‌ ಒಬ್ಬ ತನ್ನ ನೆರಳು (ಶ್ಯಾಡೊ) ಕಾಣೆಯಾಗಿದೆ ಎಂದು ಪೊಲೀಸರ ಮುಂದೆ ದೂರು ಕೊಡುತ್ತಾನೆ. ಆರಂಭದಲ್ಲಿ ಕಳೆದು ಹೋಗೋದಕ್ಕೆ ನೆರಳೇನು ಪರ್ಸ್‌ನಲ್ಲಿರುವ ಹಣನಾ? ಎಂದು ಈ ಕಂಪ್ಲೆಂಟ್‌ ಮತ್ತು ಅದನ್ನು ಕೊಟ್ಟ ಕಾಮನ್‌ಮ್ಯಾನ್‌ ಎರಡನ್ನೂ ಹಗುರವಾಗಿ ಪರಿಗಣಿಸುವ ಪೊಲೀಸರು, ನಂತರ ಒಂದು ಹಂತದಲ್ಲಿ, ಈ ಕಾಮನ್‌ಮ್ಯಾನ್‌ಗೆ ಸೆಕ್ಯೂರಿಟಿ ಕೊಟ್ಟು ಕಾಪಾಡುವಷ್ಟರ ಮಟ್ಟಿಗೆ ಈ ವಿಚಾರದಲ್ಲಿ ಸೀರಿಯಸ್‌ ಆಗುತ್ತಾರೆ. ಹಾಗಾದರೆ ನಿಜಕ್ಕೂ ನೆರಳು ಕಳೆದು ಹೋಗೋದಕ್ಕೆ ಸಾಧ್ಯನಾ? ಅದು ಹೇಗೆ? ಅನ್ನೋದು ಗೊತ್ತಾಗುವ ಹೊತ್ತಿಗೆ “ಶ್ಯಾಡೊ’ ಮಧ್ಯಂತರಕ್ಕೆ ಬಂದಿರುತ್ತದೆ. ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಸಿಕ್ಕು ಈ ನೆರಳು – ಬೆಳಕಿನ ಕಣ್ಣಾಮುಚ್ಚಾಲೆ ಮುಗಿಯುವ ಹೊತ್ತಿಗೆ “ಶ್ಯಾಡೊ’ ಕ್ಲೈಮ್ಯಾಕ್ಸ್‌ಗೆ ಬರುತ್ತದೆ.

ಹೆಸರೇ ಹೇಳುವಂತೆ “ಶ್ಯಾಡೊ’ ಒಂದು ಸಸ್ಪೆನ್ಸ್‌ – ಕ್ರೈಂ ಸ್ಟೋರಿ. ಅದನ್ನಿಟ್ಟುಕೊಂಡು ಆಯಕ್ಷನ್‌-ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ತರಲಾದ ಸಿನಿಮಾ. ಆರಂಭದಲ್ಲಿ ನಡೆದ ನಿಗೂಢ ಕೊಲೆಯೊಂದಕ್ಕೆ ಅಂತ್ಯದಲ್ಲಿ ಕಾರಣ ಸಿಗುತ್ತದೆ.

ಒಂದು ಕೊಲೆಯ ಸುತ್ತ ಇಡೀ ಚಿತ್ರ ಒಂದಷ್ಟು ಕುತೂಹಲ ಅಂಶಗಳನ್ನು ಇಟ್ಟುಕೊಂಡು ಸಾಗುತ್ತದೆ. ಹಾಗಾದರೆ ಇದಕ್ಕೆಲ್ಲ ಕಾರಣ ಯಾರಿರಬಹುದು ಅನ್ನೋದು ಊಹಿಸುವ ಹೊತ್ತಿಗೆ ಅಲ್ಲೊಂದು ಟ್ವಿಸ್ಟ್‌ ಇರುತ್ತದೆ! ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್‌ – ಟರ್ನ್ ಕೊಟ್ಟು ಚಿತ್ರಕಥೆಯನ್ನು ಹೇಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.


Spread the love

About Laxminews 24x7

Check Also

2 ಮಂದಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಸೇರ್ಪಡೆ – ಡಿಕೆಶಿ ಹೇಳಿದ್ದು ಹೀಗೆ!

Spread the loveಬೆಂಗಳೂರು : ಜೆಡಿಎಸ್‌ (JDS) ಶಾಸಕರು ಸಾಮೂಹಿಕವಾಗಿ ಪಕ್ಷ ತೊರೆದು ಕಾಂಗ್ರೆಸ್‌ (Congress) ಸೇರಲಿದ್ದಾರೆ ಎಂಬ ವದಂತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ