Breaking News

ಬ್ರಾ ವಿಚಾರಕ್ಕೆ ಜಗಳವಾಡಿದ ಪತ್ನಿಯಿಂದ ಡಿವೋರ್ಸ್​ಗೆ ಡಿಮ್ಯಾಂಡ್..!

Spread the love

ಸಣ್ಣ ಸಣ್ಣ ವಿಚಾರಕ್ಕೆ ಡಿವೋರ್ಸ್​ ತೆಗೆದುಕೊಂಡ ಅದೆಷ್ಟೂ ದಂಪತಿಯ ಕತೆಯನ್ನ ನಾವು ಕೇಳಿದ್ದೇವೆ. ಚೀನಾದಲ್ಲೂ ದಂಪತಿ ನಡುವೆ ಬ್ರಾ ವಿಚಾರಕ್ಕಾಗಿ ಶುರುವಾದ ಜಗಳ ಡಿವೋರ್ಸ್​ವರೆಗೆ ಹೋಗಿ ತಲುಪಿದೆ. ತನ್ನ ಪತಿ ಚಿಕ್ಕ ಸೈಜ್​ ಬ್ರಾ ತಂದಿದ್ದಕ್ಕೆ ಕೋಪಗೊಂಡ ಪತ್ನಿ ರಾದ್ದಾಂತ ಎಬ್ಬಿಸಿದ್ದು ಮಾತ್ರವಲ್ಲದೇ ವಿಚ್ಚೇದನ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.

ಚೀನಾದ ಗುಂಜಾವೋ ಪ್ರಾಂತ್ಯದ ನಿವಾಸಿಗಳಾದ ಲುವೋ ಹಾಗೂ ಯಾಂಗ್​ ವಿವಾಹವಾಗಿದ್ದರು. ಮದುವೆಯ ಬಳಿಕ ಕುಟುಂಬಸ್ಥರಿಗೆ ಈ ದಂಪತಿ ಔತಣಕೂಟ ಏರ್ಪಡಿಸಿತ್ತು. ಈ ಔತಣ ಕೂಟದಲ್ಲೇ ಪತಿ ಹಾಗೂ ಪತ್ನಿ ನಡುವೆ ಅಚಾನಕ್​ ಆಗಿ ಜಗಳ ಆರಂಭವಾಗಿದೆ. ಪತ್ನಿಯಂತೂ ತನಗೆ ವಿಚ್ಚೇದನ ಬೇಕೆಂದು ಪಟ್ಟು ಹಿಡಿದಿದ್ದನ್ನ ಕಂಡ ಅತಿಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಬಳಿಕ ಇವರ ಜಗಳಕ್ಕೆ ಅಸಲಿ ಕಾರಣ ತಿಳಿದಿದ್ದು ಅತಿಥಿಗಳು ತಲೆ ಮೇಲೆ ಕೈ ಹೊತ್ತಿದ್ದಾರೆ.

ಅಸಲಿಗೆ ಪತಿ ತನ್ನ ಪತ್ನಿಗೆ ಬ್ರಾ ಒಂದನ್ನ ಉಡುಗೊರೆ ರೂಪದಲ್ಲಿ ನೀಡಿದ್ದರಂತೆ. ಆದರೆ ಈ ಬ್ರಾ ಸೈಜ್​ ಚಿಕ್ಕದಿತ್ತು. ಇದರಿಂದ ಪತ್ನಿಗೆ ಕೋಪ ನೆತ್ತಿಗೇರಿದೆ. ಈತನಿಗೆ ನನ್ನ ಬ್ರಾ ಸೈಜ್​ ಚೆನ್ನಾಗೇ ಗೊತ್ತಿದೆ. ಆದರೂ ಈತ ಬೇಕಂತಲೇ 2 ಸೈಜ್​ ಚಿಕ್ಕ ಅಳತೆಯ ಬ್ರಾ ತಂದು ನನ್ನನ್ನ ಅಪಮಾನ ಮಾಡಿದ್ದಾನೆ. ಮದುವೆಯಾದ ಹೊಸದರಲ್ಲೇ ಈ ರೀತಿ ಮಾಡುವ ಪತಿ ಮುಂದೆ ನನ್ನನ್ನ ಕಾಳಜಿಯಿಂದ ನೋಡಿಕೊಳ್ತಾನೆ ಎಂಬ ನಂಬಿಕೆ ನನಗಿಲ್ಲ. ಹೀಗಾಗಿ ನನಗೆ ವಿಚ್ಚೇದನ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇನ್ನು ಆಕೆಯ ಕುಟುಂಬಸ್ಥರು ಕೂಡ ಆಕೆಯ ವಾದವನ್ನ ಸಮರ್ಥಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ