Breaking News

ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು

Spread the love

ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕ.ರಾ.ರ‌.ಸಾ ಸಂಸ್ಥೆಯ ನಾಲ್ಕು ನಿಗಮಗಳ ಸುಮಾರು 1.30 ಲಕ್ಷ ಸಿಬ್ಬಂದಿಗಳನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಹಲವಾರು ಪ್ರತಿಭಟನೆ ನಡೆಸಿದರೂ ಸಕಾರಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆಯಲ್ಲಿ ಒಟ್ಟು 1.30 ಲಕ್ಷ ಕಾರ್ಮಿಕರನ್ನೊಳಗೊಂಡ ದೇಶ,ವಿದೇಶಗಳ ಅತ್ಯುನ್ನತ ಸಾರಿಗೆ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಸಂಸ್ಥೆಯ ಕಾರ್ಮಿಕರ ಜೀವನ ಹೀನಾಯ ಸ್ಥಿತಿಗೆ ತಲುಪಿದೆ. ಹಗಲು ರಾತ್ರಿ ವಿಶ್ರಾಂತಿ ಇಲ್ಲದೆ ಶೇ.40 ರಷ್ಟು ಕಡಿಮೆ ಸಂಬಳದೊಂದಿಗೆ ದುಡಿಯುತ್ತಿದ್ದೇವೆ ನಮ್ಮ ಬೇಡಿಕೆ ಈಡೇರಿಸಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಹನಗಳಲ್ಲಿ ಸಂಸ್ಥೆಯ ಪ್ರತಿ ದಿನ ರಾಜ್ಯದ ಶೇ.92 ರಷ್ಟು ಹಳ್ಳಿಗಳಿಗೆ ಹಾಗೂ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂದ್ರ ಪ್ರದೇಶ, ತೇಲಂಗಾಣ, ತಮಿಳುನಾಡು, ಪುದುಚೇರಿ,ಗೋವಾ ಹಾಗೂ ಕೇರಳ ರಾಜ್ಯಗಳಿಗೆ ಸುಮಾರು 25000 ವಾಹನಗಳಲ್ಲಿ ಪ್ರತಿ ದಿನ ಸುಮಾರು 75 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದರೂ ಸರಕಾರ ಮಾತ್ರ ನಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಿಲ್ಲ ಎಂದು ಸರಕಾರದ ವಿರುದ್ಧ ಹರಿಹಾಯ್ದರು.

ಮಹೇಶ ಸಿಗೀಹಳ್ಳಿ, ಅಶ್ವೀನಿ ಕಂಬಾರ, ಸಲಾಂ‌ ತಹಶೀಲ್ದಾರ, ಜ್ಯೋತಿ ಗಡಾದ, ಮಲ್ಲಪ್ಪ ಕಾಂಬಳೆ, ಸುನಿಲ್ ತೆರದಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

https://www.facebook.com/105350550949710/posts/227147222103375/?sfnsn=wiwspmo


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ