Breaking News

ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಗುಂಪು ಕಟ್ಟಿಕೊಂಡು ಹಲ್ಲೆ

Spread the love

ವಿಜಯಪುರ: ಟ್ರ್ಯಾಕ್ಟರ್‌ನಲ್ಲಿ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ ಘಟನೆ ವಿಜಯಪುರ ಜಿ. ಕಲಕೇರಿ ಗ್ರಾಮದಲ್ಲಿ ನಡೆದಿದೆ.

ಈ ಮಾರಾಮಾರಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕಲಕೇರಿಯ ಬಾಷಾಸಾಬ್ ವಠಾರ್, ಮಹ್ಮದ್‍ನಾಸೀರ್, ಮಹ್ಮದ್ ಶರೀಫ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಕಲಕೇರಿಯ ಮಹ್ಮದ್ ಶರೀಫ್ ಬಡೇಘರ್, ಹುಸೇನ್ ಬಡೇಘರ್, ರಫೀಕ್ ಸೇರಿದಂತೆ 12ಕ್ಕೂ ಅಧಿಕ ಜನರಿಂದ ಹಲ್ಲೆ ನಡೆದಿದೆ.ಟ್ರ್ಯಾಕ್ಟರ್‌ನಲ್ಲಿ ಜೋರಾದ ಸೌಂಡ್ ಮೂಲಕ ಡಿಜೆ ಸಾಂಗ್ ಹಾಕಿಕೊಂಡು ಹೊರಟಿದ್ದ ಮಹ್ಮದ್ ಶಾಹೀದ್ ಬಡೇಘರ್‍ಗೆ ಬಾಷಾಸಾಬ್ ವಠಾರ್ ಎಂಬವರು ಸೌಂಡ್ ಕಡಿಮೆ ಮಾಡು ಅಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಮ್ಮದ್ ಶಾಹೀದ್ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾನಂತೆ. ಹಲ್ಲೆಯಿಂದ ಮೂವರಿಗೆ ಗಂಭೀರಗಾಯ ಆಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ