Breaking News

ಕ್ರೈಸ್ತರಲ್ಲೂ ಬಹಳಷ್ಟು ಮಂದಿ ಬಡವರಿದ್ದಾರೆ. ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು: ಐವಾನ್ ಡಿಸೋಜಾ

Spread the love

ಮಂಗಳೂರು: ರಾಜ್ಯದಲ್ಲಿರುವ ಕ್ರೈಸ್ತರಲ್ಲೂ ಬಹಳಷ್ಟು ಮಂದಿ ಬಡವರಿದ್ದಾರೆ. ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು ಎಂದು ಮಾಜಿ ಎಂಎಲ್‌ಸಿ, ಕೆಪಿಸಿಸಿ ವಕ್ತಾರ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಅವರಲ್ಲಿರುವ ಬಡವರಿಗೆ ಸಹಕಾರಿಯಾಗುತ್ತೆ ಎಂದಿದ್ದಾರೆ. ನಮ್ಮ ಕ್ರೈಸ್ತರಲ್ಲೂ ಬಡವರಿದ್ದಾರೆ. ಹೀಗಾಗಿ ಪ್ರಾಧಿಕಾರ ರಚಿಸಿ ಎಂದು ಹೇಳಿದ್ದಾರೆ.ಸರ್ಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸದೇ ಇದ್ದಲ್ಲಿ ರಾಜ್ಯದ ಕ್ರೈಸ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜನ ಬೀದಿಗೆ ಬಂದು ಹೋರಾಟ ಮಾಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ, ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

Spread the loveನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್  ಅವರನ್ನ ಕೇಂದ್ರ ಸರ್ಕಾರ ನೇಮಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ