Breaking News

ಚಲಿಸುತ್ತಿರುವ ಜನಶತಾಬ್ದಿ ರೈಲಿನಿಂದ ಯುವತಿ ತುಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಯುವತಿ

Spread the love

ಶಿವಮೊಗ್ಗ :  ಚಲಿಸುತ್ತಿರುವ ಜನಶತಾಬ್ದಿ ರೈಲಿನಿಂದ ಯುವತಿ ತುಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲಿನಲ್ಲಿ  ಯುವತಿ ಸಹನಾ (24) ತನ್ನ ಪೋಷಕರೊಂದಿಗೆ ಪ್ರಯಾಣಿಸುತ್ತಿದ್ದಳು.   ರೈಲು ಶಿವಮೊಗ್ಗದ ತುಂಗಾ ಸೇತುವೆ ಮೇಲೆ ಬರುತ್ತಿದ್ದ ವೇಳೆ ಯುವತಿ ನದಿಗೆ ಹಾರಿದ್ದಾಳೆ ಎನ್ನಲಾಗುತ್ತಿದೆ. ಕೆಲವರು ಕಾಲು ಜಾರಿ ಬಿದ್ದಿದ್ದಾಳೆ ಎಂದು ಸಹ ಹೇಳಲಾಗುತ್ತಿದೆ.

ತಕ್ಷಣ ಯುವತಿಯ ತಂದೆ- ತಾಯಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಧಾವಿಸಿ, ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ದೇಹ ಮಾತ್ರ ಇನ್ನು ಸಿಕ್ಕಿಲ್ಲ.

ಶೋಧಕಾರ್ಯದಲ್ಲಿ ಡಿಎಫ್ ಒ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಸಿಬ್ಬಂದಿ ದೇವೇಂದ್ರನಾಯಕ್, ಸತೀಶ್ ಮಂಜುನಾಥ್, ರಮೇಶ್, ಯೋಗೀಶ್ ಹಾಗೂ ವಿನಯ್ ಶೋಧಕಾರ್ಯದಲ್ಲಿ ತೊಡಗಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ