Breaking News

ಲೈಟ್ ಕಂಬದ ವಿಚಾರಕ್ಕೆ ಜಗಳ – ನಾದಿನಿಗೆ ಹಿಗ್ಗಾಮುಗ್ಗ ಥಳಿಸಿದ ಬಾವ

Spread the love

ಕೋಲಾರ: ಕ್ಷುಲ್ಲುಕ ಕಾರಣಕ್ಕೆ ಉಂಟಾದ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ತಮ್ಮನ ಹೆಂಡತಿಯನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಲ್ಲುಕುಂಟೆ ಗ್ರಾಮದಲ್ಲಿ ನಡೆದಿದೆ.ಮನೆ ಬಳಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಬಾವನೊಂದಿಗೆ ಜಗಳ ಕಿತ್ತ ನಾದಿನಿ, ಮೊದಲಿಗೆ ಬಾವನಿಗೆ ಪೊರಕೆ ಸೇವೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಹೆಚ್ಚಾದಾಗ ಜಗಳ ಬಿಡಿಸುವ ನೆಪದಲ್ಲಿ ಬಂದ ಬಾವನ ಮಗನೂ ಕೂಡ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿ ಕಾಲಿನಲ್ಲಿ ಒದ್ದು ದೌರ್ಜನ್ಯವೆಸಗಿರುವ ವಿಡಿಯೋ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಕಲ್ಲುಕುಂಟೆ ಗ್ರಾಮದ ರತ್ನಮ್ಮ ಹಲ್ಲೆಗೊಳಗಾದ ನಾದನಿಯಾಗಿದ್ದು, ಭಾವ ಶಂಕರಪ್ಪ ಹಾಗೂ ಬಾವನ ಮಗ ಶೇಖರ್ ಬಾಬು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಷ್ಟೆಲ್ಲ ದೌರ್ಜನ್ಯ ನಡೆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.


Spread the love

About Laxminews 24x7

Check Also

ಸಿದ್ದರಾಮಯ್ಯಗೆ ಒಂದು ಮತವನ್ನೂ ಹಾಕಲ್ಲ; ಇಡೀ ಗ್ರಾಮದಿಂದ ವರ್ತೂರು ಪ್ರಕಾಶ್‌ಗೆ ಭರವಸೆ

Spread the loveಕೋಲಾರ: ತಾಲೂಕಿನ ವೇಮಗಲ್‌ ಹೋಬಳಿಯ ಕುರುಬರಹಳ್ಳಿ ಗ್ರಾಮಕ್ಕೆ ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ