Breaking News

4 ಕೋಟಿ ಮೌಲ್ಯದ ಗಾಂಜಾ ವಶ, ಸಹಶಿಕ್ಷಕ ಸೇರಿ ಐವರ ಸೆರೆ..!

Spread the love

ಚಿತ್ರದುರ್ಗ  : ಹೊಲದಲ್ಲಿ ಗಾಂಜಾ ಬೆಳೆದಿದ್ದ ಸಹಶಿಕ್ಷಕ ಸೇರಿದಂತೆ ಐವರನ್ನು ಬಂಧಿಸಿ, 4 ಕೋಟಿ ಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಜಿ.ರಾಧಿಕಾ ತಿಳಿಸಿದರು.

ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿಯ ರುದ್ರೇಶ(45), ಮಹದೇವಪುರ ಗ್ರಾಮದ ಸಮಂತಗೌಡ(42), ಭೂ ಮಾಲೀಕ ಸಹ ಶಿಕ್ಷಕ ವೈ.ಜಂಬುನಾಥ(50), ಹೊಟೇಲ್ ಮಾಲೀಕ ಡಿ.ಬಿ.ಮಂಜುನಾಥ(45) ಹಾಗೂ ಡಿ.ವೈ ಮಂಜುನಾಥ(48) ಇವರುಗಳನ್ನು ಬಂಧಿಸಲಾಗಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಮೊಳಕಾಲ್ಮೂರು ತಾಲ್ಲೂಕು ವಡೇರಹಳ್ಳಿ ಗ್ರಾಮದ ಜಮೀನಿನಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಗಾಂಜಾಗಿಡಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ 9872 ಕೆ.ಜಿ.

ತೂಕದ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 4 ಕೋಟಿ ಎಂದು ಅಂದಾಜಿಸಲಾಗಿದೆ.

ಅಲ್ಲದೆ ಗಾಂಜಾ ಗಿಡಗಳ ಪತ್ತೆ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯ ಮೆಚ್ಚಿ ಸೂಕ್ತ ಬಹುಮಾನ ಘೋಷಿಸಲಾಗಿದೆ.


Spread the love

About Laxminews 24x7

Check Also

ಝುಂಜರವಾಡ ಪ್ರೌಢ ಶಾಲೆಯ ವಿಧ್ಯಾರ್ಥಿಗಳ ಬೀಳ್ಕೊಡು ಸಮಾರಂಭ

Spread the loveಅಥಣಿ ಮತಕ್ಷೇತ್ರದ ಝುಂಜರವಾಡ ಗ್ರಾಮದ ಸರಕಾರಿ ಪ್ರೌಢ ಶಾಲೆಯ 2025-26ನೇ ಸಾಲಿನ ಎಸ್,ಎಸ್,ಎಲ್,ಸಿ, ವಿಧ್ಯಾರ್ಥಿಗಳ ಬೀಳ್ಕೊಡು ಸಮಾರಂಭ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ