Breaking News

ಯೋಧನ ಬಳಿ ಎಕೆ 47ನ ಜೀವಂತ ಗುಂಡು ಪತ್ತೆ

Spread the love

ಬೆಳಗಾವಿ  : ಜೀವಂತ ಗುಂಡು ಸಮೇತ ಪ್ರಯಾಣಿಸುತ್ತಿದ್ದ ಯೋಧನೊಬ್ಬನನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಸಂಕೇಶ್ವರದ ಹನುಮಾನ ನಗರದ ಸುಬೇದಾರ್‌ ಅರುಣ ಮಾರುತಿ ಭೋಸಲೆ ಕಳೆದೊಂದು ತಿಂಗಳ ಹಿಂದೆ ರಜೆ ಮೇಲೆ ಬಂದು ಮರಳಿ ಕರ್ತವ್ಯಕ್ಕೆಂದು ಕಾಶ್ಮೀರಕ್ಕೆ ಹೋಗಲು ಬೆಳಗಾವಿ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಎಕೆ 47ನ ಒಂದು ಜೀವಂತ ಗುಂಡು ಪತ್ತೆಯಾಗಿದೆ.

Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ-ಚೀನಾ ಯುದ್ಧ?

ಜೊತೆಗೆ ಒಂದು ಇನ್ಸಾಸ್‌ ಫೈರೆಡ್‌ ಕೇಸ್‌(ಖಾಲಿ ಗುಂಡು) ಪತ್ತೆಯಾಗಿದ್ದು, ಸೈನಿಕನನ್ನು ಪೊಲೀಸರು ಮರಾಠ ಲಘು ಪದಾತಿ ದಳ ವಶಕ್ಕೆ ನೀಡಿದ್ದಾರೆ.

ಸುಬೇದಾರ ಸುದೀರ್ಘ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕೇವಲ 6 ತಿಂಗಳು ಮಾತ್ರ ಸೇವಾವಧಿ ಇದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ