Breaking News

ನಿವೃತ್ತ ಸೈನಿಕನೊಬ್ಬ ಮಹಿಳೆಯ ಪ್ರಚೋದನೆಯಿಂದ ಯುವಕನ ಕೊಲೆ

Spread the love

ಹುಬ್ಬಳ್ಳಿ: ನಿವೃತ್ತ ಸೈನಿಕನೊಬ್ಬ ಮಹಿಳೆಯ ಪ್ರಚೋದನೆಯಿಂದ ಯುವಕನ ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.

ತಿಪ್ಪೆ ಹಾಕುವ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದ ಜಗದೀಶ್ ಹನಮಂತಪ್ಪ ತಾಂಬೆ ಎಂಬ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ದೇವಿಕೊಪ್ಪ ಗ್ರಾಮದ ನಿವೃತ್ತ ಸೈನಿಕ ಗಂಗಾಧರ ನಿಂಗಪ್ಪ ನೂಲ್ವಿ ಹಾಗೂ ಶಾರದಾ ಪಾಟೀಲ್ ಸೇರಿಕೊಂಡು ಯುವಕನ ಕೊಲೆ ಮಾಡಿದ್ದಾರೆ.

ಕೊಲೆಯಾದ ಜಗದೀಶ್ ಸಹೋದರ ದೊಂಡಿಬಾ ತಾಂಬೆಯ ಮೇಲಿನ ಸಿಟ್ಟಿಗೆ ಗೌಂಡಿ ಕೆಲಸ ಮಾಡುತ್ತಿದ್ದ ಜಗದೀಶ್‍ನನ್ನ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಶಾರದಾ ಪಾಟೀಲ್ ಎಂಬ ಮಹಿಳೆಯ ಪ್ರಚೋದನೆಯ ಕಾರಣ ಎಂದು ದೂರಿನಲ್ಲಿ ಹೇಳಲಾಗಿದೆ.ಕಳೆದ ವರ್ಷವಷ್ಟೇ ಸೇನೆಯಿಂದ ನಿವೃತ್ತಿಯಾಗಿದ್ದ ಗಂಗಾಧರ ಹಾಗೂ ಶಾರದಾ ಪಾಟೀಲ್‍ರನ್ನ ಕಲಘಟಗಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ