Breaking News

ವಿವಾಹಿತ ಮಹಿಳೆಯನ್ನ ಕರ್ಕೊಂಡು ಬಂದಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

Spread the love

ಕಾರವಾರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಕರೆದುಕೊಂಡು ಬಂದಿದ್ದ ಯುವಕನಿಗೆ ಮಹಿಳೆಯ ಪತಿ ಹಾಗೂ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ

ಧಾರವಾಡ ಮೂಲದ ಮುತ್ತು ಥಳಿತಕ್ಕೊಳಗಾದ ಯುವಕ. ಮುತ್ತು ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಅಲ್ಲದೇ ಈತ ಧಾರವಾಡದಿಂದ ಮಹಿಳೆಯನ್ನು ಕರೆದುಕೊಂಡು ಕಾರವಾರಕ್ಕೆ ಬಂದಿದ್ದನು. ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯೊಂದಿಗೆ ಮುತ್ತು ನಿಂತಿದ್ದನು.

ಇತ್ತ ಕಾರವಾರಕ್ಕೆ ಬಂದ ವಿಷಯ ತಿಳಿದು ಕಾರಿನಲ್ಲಿ ಆಗಮಿಸಿದ ಮಹಿಳೆಯ ಪತಿ ಹಾಗೂ ಸಂಬಂಧಿ ಜಿಲ್ಲಾಧಿಕಾರಿ ಕಚೇರಿ ಬಳಿ ನಿಂತಿದ್ದ ಮುತ್ತುಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳದಲ್ಲಿದ್ದವರು ಪೊಲೀಸರು ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಮಹಿಳೆ ಹಾಗೂ ಯುವಕನನ್ನು ಧಾರವಾಡಕ್ಕೆ ಎಳೆದುಕೊಂಡು ಹೋಗಿದ್ದಾರೆ.


Spread the love

About Laxminews 24x7

Check Also

ಜೂನ್ ಒಳಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ

Spread the loveಕಾರವಾರ: ಜೂನ್ ಒಳಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ