Breaking News

ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ

Spread the love

ಬೆಳಗಾವಿ: ಕೊರೊನಾ ಬಗ್ಗೆ ಭಯ ಬೇಡ. ಆದರೆ, ಮುಂಜಾಗ್ರತೆ ವಹಿಸಬೇಕು. ಸೋಂಕು ಬಂತೆಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ.

– ಕೋವಿಡ್‌ನಿಂದ ಗುಣಮುಖರಾದ ರಾಮದುರ್ಗ ತಾಲ್ಲೂಕು ಕಟಕೋಳದ ಯುವಕ ಆನಂದ ಸಿದ್ನಾಳ ಅವರ ಸಲಹೆ ಇದು.

ಕೋವಿಡ್ ಗೆದ್ದ ಕಥೆಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ‘ನಾನು ಚಾಲಕ. ಟ್ರಕ್ ಇದೆ. ಲಾಕ್‌ಡೌನ್‌ ಆದ ಸಮಯದಲ್ಲಿ ಕೆಲಸ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿತ್ತು. ಲಾಕ್‌ಡೌನ್‌ ತೆರವಾದ ನಂತರ ಕೆಲವು ದಿನ ಊರು ಸುತ್ತಿದೆ. ಹೋದ ಕಡೆಯಲ್ಲಿ ಮುಂಜಾಗ್ರತೆ ವಹಿಸುತ್ತಿದೆ. ಆದರೂ ಸೋಂಕು ಎಲ್ಲಿ ಮತ್ತು ಹೇಗೆ ಬಂದಿತು ತಿಳಿಯಲಿಲ್ಲ. ರೋಗ ಲಕ್ಷಣ ಇರಲಿಲ್ಲ. ಆದರೆ, ಊಟ ಸೇರುತ್ತಿರಲಿಲ್ಲ. ಹೀಗಾಗಿ, ಆಸ್ಪತ್ರೆಗೆ ಹೋಗಿದ್ದೆ. ಸಮಸ್ಯೆ ಸ್ವಲ್ಪ ಕಡಿಮೆ ಆಗಿತ್ತು.

ಕೆಲವು ದಿನಗಳ ನಂತರ ಕಫ ಹೆಚ್ಚಾಯಿತು. ಮುನವಳ್ಳಿಯಲ್ಲಿ ತೋರಿಸಿದ್ದೆನಾದರೂ ಕಡಿಮೆ ಆಗಲಿಲ್ಲ. ಬೆಳಗಾವಿಯಲ್ಲಿ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿತು.

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೆ. ಆರಂಭದಲ್ಲಿ ಉಸಿರಾಟದ ತೊಂದರೆ ಇತ್ತು. ಮಾತಾಡಲು ಕಷ್ಟವಾಗುತ್ತಿತ್ತು. ಆಕ್ಸಿಜನ್ ಕೊಟ್ಟಿದ್ದರು. ಆಗ, ತುಂಬಾ ಭಯ ಆಗಿತ್ತು. ಆಗ ವೈದ್ಯರು ಧೈರ್ಯ ತುಂಬಿದರು. ಗೆಳೆಯರು ಹಾಗೂ ಸಂಬಂಧಿಕರು ಮೊಬೈಲ್‌ ಫೋನ್‌ಗೆ ಕರೆ ಮಾಡಿ ಸ್ಥೈರ್ಯ ನೀಡಿದರು. ಮೂರು ದಿನದ ನಂತರ ಉಸಿರಾಟದ ತೊಂದರೆ ನಿವಾರಣೆಯಾಯಿತು. ಆಗ, ಮತ್ತಷ್ಟು ಧೈರ್ಯ ಬಂತು. ವೈದ್ಯರು ಚೆನ್ನಾಗಿ ಆರೈಕೆ ಮಾಡಿದರು. ಸಕಾಲಕ್ಕೆ ಊಟ, ಮಾತ್ರೆ ಕೊಡುತ್ತಿದ್ದರು. ಮನೆಯವರಂತೆ ನೋಡಿಕೊಂಡರು. ವೈದ್ಯರು ಹಾಗೂ ನರ್ಸ್‌ಗಳ ಕಾಳಜಿಯಿಂದ ನಾನು ಗುಣಮುಖನಾದೆ. ಕೊರೊನಾ ಬಂದವರನ್ನು ಕೀಳಾಗಿ ಕಾಣಬಾರದು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ